ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಹುಬ್ಬುಗಳಿಂದ ನೀವು ವ್ಯಕ್ತಿಯ ಗುಣಸ್ವಭಾವಗಳನ್ನು ಕಂಡುಹಿಡಿಯಬಹುದು. ಸಮುದ್ರಶಾಸ್ತ್ರವು ಮಾನವ ದೇಹದ ಪ್ರತಿಯೊಂದು ಭಾಗದ ವಿವರವಾದ ವಿವರಣೆಯನ್ನು ನೀಡಿದೆ. ಶಾಸ್ತ್ರಗಳ ಪ್ರಕಾರ, ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾಹಿತಿಯನ್ನು ಅವರ ದೈಹಿಕ ರಚನೆ ನೋಡಿ ಅರಿಯಬಹುದು, ಕಣ್ಣು, ಮೂಗು, ಕಿವಿ, ಬಾಯಿ, ಕೈ ರೇಖೆಗಳು, ಹಣೆ ಹುಬ್ಬುಗಳ ಆಕಾರ, ಬಣ್ಣ ಇತ್ಯಾದಿಗಳಿಂದ ಕೂಡಾ ನಾವು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೇಳಬಹುದು.
ಸಧ್ಯ ನಾವು, ಹುಬ್ಬುಗಳಿಂದ ವ್ಯಕ್ತಿಯ ಸ್ವಭಾವ ತಿಳಿಯುವುದು ಹೇಗೆ ನೋಡೋಣ. ಪ್ರತಿಯೊಂದು ಹುಬ್ಬಿನ ಆಕಾರವು ವಿಭಿನ್ನ ಅರ್ಥವನ್ನು ಹೊಂದಿದೆ. ಅವೇನೆಂದು ನೋಡೋಣ..
ದಪ್ಪ ಹುಬ್ಬುಗಳನ್ನು ಹೊಂದಿರುವ ಜನರು(THick Eyebrows)
ಸಮುದ್ರಶಾಸ್ತ್ರದ ಪ್ರಕಾರ, ದಪ್ಪ ಹುಬ್ಬುಗಳನ್ನು ಹೊಂದಿರುವ ಜನರು ತುಂಬಾ ಕೋಪಗೊಳ್ಳುತ್ತಾರೆ ಮತ್ತು ತುಂಬಾ ಕುತಂತ್ರಿಗಳು. ಅಂಥ ಜನರು ಹಣದ ದುರಾಸೆಯನ್ನು ಹೊಂದಿರುತ್ತಾರೆ. ಒಳ್ಳೆಯದೋ ಕೆಟ್ಟದ್ದೋ ಗಣನೆಗೆ ತೆಗೆದುಕೊಳ್ಳದೆ ಯಾವುದೇ ವಿಧಾನದಿಂದ ಹೆಚ್ಚು ಹೆಚ್ಚು ಹಣವನ್ನು ಗಳಿಸುವುದರತ್ತ ಗಮನ ಹರಿಸುತ್ತಾರೆ. ಅಂತಹ ಜನರು ತಮ್ಮ ಸಂಪತ್ತು ಮತ್ತು ಸಾಧನೆಗಳ ಬಗ್ಗೆ ಹೆಮ್ಮೆ ಪಡಲು ಪ್ರಾರಂಭಿಸುತ್ತಾರೆ.
ಸಣ್ಣ ಹುಬ್ಬುಗಳನ್ನು ಹೊಂದಿರುವ ಜನರು(Thin eyebrows)
ಹುಬ್ಬುಗಳು ಚಿಕ್ಕದಾಗಿ ಆದರೆ ದಪ್ಪವಾಗಿ ಕಾಣುವ ಜನರಲ್ಲಿ ಕೋಪ ಹೆಚ್ಚು. ಅಂಥವರಿಗೆ ತಾಳ್ಮೆಯೇ ಇರುವುದಿಲ್ಲ ಎನ್ನುತ್ತದೆ ಸಮುದ್ರಶಾಸ್ತ್ರ. ಅದಕ್ಕಾಗಿಯೇ ಅವರು ಜೀವನದಲ್ಲಿ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಹುಬ್ಬುಗಳ ನಡುವಿನ ಅಂತರ(Gap between eyebrows)
ಕೆಲವರ ಹುಬ್ಬುಗಳ ನಡುವೆ ದೀರ್ಘ ಅಂತರವಿರುತ್ತದೆ ಮತ್ತು ಅವರ ಹುಬ್ಬುಗಳು ಚಪ್ಪಟೆಯಾಗಿರುತ್ತವೆ. ಅಂತಹ ವ್ಯಕ್ತಿಗಳು ಸ್ವಭಾವತಃ ಮಾತನಾಡುವವರಾಗಿರುತ್ತಾರೆ ಎಂದು ಸಮುದ್ರಶಾಸ್ತ್ರ ಹೇಳುತ್ತದೆ. ಅಲ್ಲದೆ ಈ ಜನರು ತುಂಬಾ ಭಾವುಕರಾಗಿರುತ್ತಾರೆ. ಅಂಥವರು ಇತರರೊಂದಿಗೆ ಮಾತನಾಡುವುದರಿಂದ ಮತ್ತೊಬ್ಬರಿಗೆ ಹಾನಿ ಮಾಡುವ ಆತುರದಲ್ಲಿರುತ್ತಾರೆ.
ಚಂದ್ರನ ಆಕಾರದ ಹುಬ್ಬುಗಳು(Moon Shaped eyebrows)
ಮಹಿಳೆಯ ಹುಬ್ಬುಗಳು ಚಂದ್ರನ ಆಕಾರದಲ್ಲಿದ್ದರೆ, ಅದೇ ಸಮಯದಲ್ಲಿ ಎರಡೂ ಹುಬ್ಬುಗಳು ಒಂದಕ್ಕೊಂದು ಹತ್ತಿರವಿಲ್ಲವೆಂದರೆ ಸಮುದ್ರಶಾಸ್ತ್ರದ ಪ್ರಕಾರ, ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರು. ಅಂತಹ ಮಹಿಳೆಯರಿಗೆ ಕುಟುಂಬ ಮತ್ತು ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಅಂತಹ ಮಹಿಳೆಯರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಅವರ ಪತಿಯೂ ತುಂಬಾ ಸಂತೋಷ ಮತ್ತು ಗೌರವಾನ್ವಿತರಾಗಿರುತ್ತಾರೆ.
ಬಾಗಿದ ಹುಬ್ಬುಗಳು(Curved Eyebrows)
ಸಮುದ್ರಶಾಸ್ತ್ರದ ಪ್ರಕಾರ, ವಕ್ರ ಹುಬ್ಬುಗಳನ್ನು ಹೊಂದಿರುವ ಜನರು ತಮ್ಮ ತಿಳುವಳಿಕೆಯೊಂದಿಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಜನರು ತಾವು ಮಾಡಲು ಹೊರಟಿರುವುದು ತಪ್ಪು ಎಂದು ತಿಳಿದಿದ್ದರೂ ಅವರು ಅದನ್ನು ಮಾಡುತ್ತಲೇ ಇರುತ್ತಾರೆ.
'ವಿ' ಆಕಾರದ ಹುಬ್ಬುಗಳು(V shape eyebrows)
ವಿ ಆಕಾರದ ಹುಬ್ಬುಗಳನ್ನು ಹೊಂದಿರುವ ಜನರು ಯಶಸ್ವಿ ಉದ್ಯಮಿಗಳು. ಅಂತಹ ಜನರು ಇತರ ಜನರನ್ನು ತ್ವರಿತವಾಗಿ ಮತ್ತು ಸುಲಭವಾಗಿ ನಂಬುವುದಿಲ್ಲ ಎಂದು ಸಮುದ್ರಶಾಸ್ತ್ರ ಹೇಳುತ್ತದೆ.