ಅದೃಷ್ಟವಂತರಾಗ್ಬೇಕಾ ? ಈ ಕೆಲಸಗಳನ್ನು ಮಾಡಿ

First Published Oct 12, 2021, 11:18 AM IST

ಜೀವನವು ಹತಾಶೆಯಿಂದ ಸುತ್ತುವರೆದಿದ್ದರೆ ಮತ್ತು ಪ್ರತಿಯೊಂದು ಕಾರ್ಯವು ವಿಫಲವಾಗುತ್ತಿದ್ದರೆ. ಪದೇ ಪದೇ ಹಣ ನಷ್ಟ ಆಗಿದ್ದರೆ ಕೆಟ್ಟ ಕಾರ್ಯಗಳು ಮತ್ತು ಜಾತಕ ಗ್ರಹಗಳು (Kundli) ಸಹ ಅದಕ್ಕೆ ಕಾರಣವಾಗಿರಬಹುದು. ಈ ಸಮಸ್ಯೆಗಳನ್ನು ನಿವಾರಿಸಲು ಜ್ಯೋತಿ,ಷ್ಯರು ಕೆಲವು ಮಾರ್ಗಗಳನ್ನು ಸೂಚಿಸುತ್ತಾನೆ (Effective effects). 
 

ಅದೃಷ್ಟವನ್ನು (good luck ) ಪಡೆಯಲು ಪ್ರತಿದಿನ ಈ ಸರಳ ಕ್ರಮಗಳನ್ನು  ಅನುಸರಿಸಬೇಕು. ಆ ಮೂಲಕ, ವ್ಯಕ್ತಿಯ ಜೀವನದಲ್ಲಿ ನಲುಗುತ್ತಿರುವ ತೊಂದರೆಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗಿ ಅವನಿಗೆ ಯಶಸ್ಸು ಪಡೆಯಲು ಆರಂಭವಾಗುತ್ತದೆ. ಆ ಕ್ರಮಗಳು ಯಾವುವು ನೋಡೋಣ.. 

ಈ ಗ್ರಹಗಳು ಬಲವಾಗಿರಬೇಕು: ಜೀವನದಲ್ಲಿ ಸುಖ ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸಲು ಕೆಲವು ಗ್ರಹಗಳು ಜಾತಕದಲ್ಲಿ ಬಲಿಷ್ಠರಾಗುವುದು ಬಹಳ ಮುಖ್ಯ. ಸೂರ್ಯ ಮತ್ತು ಗುರು ಇದರಲ್ಲಿ ಪ್ರಮುಖರಾಗಿದ್ದಾರೆ ಏಕೆಂದರೆ ಅವು ಶೌರ್ಯದ ವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಯಶಸ್ಸನ್ನು (success) ನೀಡುತ್ತವೆ. 

ಸೂರ್ಯ-ಗುರುಗಳಿಂದ ಶುಭ ಫಲಗಳನ್ನು ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಿ
ಇಂತಹ ಪರಿಸ್ಥಿತಿಯಲ್ಲಿ ಸೂರ್ಯ ಮತ್ತು ಗುರು ಅನ್ನು ಬಲಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಜಾತಕದಲ್ಲಿರುವ ಈ ದುರ್ಬಲ ಗ್ರಹಗಳಿಗೂ ಶುಭ ಫಲಗಳು ದೊರೆಯಲಿದೆ. ಈ ಗ್ರಹಗಳ ಇತರ ಕ್ರಮಗಳನ್ನು ತೆಗೆದುಕೊಳ್ಳಲು ಭಾನುವಾರ ಮತ್ತು ಗುರುವಾರಗಳು ವಿಶೇಷವಾಗಿವೆ. 

ಸ್ನಾನದ ನೀರಿನಲ್ಲಿ ಅರಿಶಿನವನ್ನು ಮಿಶ್ರಣ ಮಾಡಿ:  (mis turmeric powder inbathing water) 
ಪ್ರತಿದಿನ ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಮಿಶ್ರಣ ಮಾಡಿ, ಇದು ಗುರು ಗ್ರಹವನ್ನು ಬಲಪಡಿಸುತ್ತದೆ. ಇದೇ ಸಮಯದಲ್ಲಿ, ಭಗವಾನ್ ವಿಷ್ಣುವಿನ ಅನುಗ್ರಹವನ್ನು ಸಹ ಪಡೆಯುತ್ತೀರಿ. ಸುಖ ಸಮೃದ್ಧಿಯನ್ನು ಪಡೆಯಲು ಗುರು ಗ್ರಹದ ಅನುಗ್ರಹವು ಬಹಳ ಮುಖ್ಯ. 

ಉಪ್ಪು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ (salt to remove negative energy) 
ನಕಾರಾತ್ಮಕತೆಯು ಯಶಸ್ಸಿಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಸಂಜೆ ಸ್ನಾನದ ನೀರಿಗೆ ಉಪ್ಪನ್ನು ಸೇರಿಸಿ, ಇದು ನಕಾರಾತ್ಮಕತೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಸಂಜೆ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆ ಉಪ್ಪು ನೀರಿನಿಂದ ಸ್ನಾನ ಮಾಡಿ. 

ದುರ್ಗಾ ಸಪ್ತಶತಿ ಅಥವಾ ಹನುಮಾನ್ ಚಾಲೀಸಾ ಓದಿ (Durga saptashati)
ಜೀವನದಲ್ಲಿ ಒಂದರ ನಂತರ ಒಂದರಂತೆ ಬಿಕ್ಕಟ್ಟು ಕಂಡುಬಂದರೆ ಹನುಮಾನ್ ಚಾಲೀಸಾ ಅಥವಾ ದುರ್ಗಾ ಸಪ್ತಶತಿಯನ್ನು ಪಠಿಸಿ. ಇದರಿಂದ ಎಲ್ಲ ಬಿಕ್ಕಟ್ಟುಗಳು ನಿವಾರಣೆಯಗುತ್ತವೆ ಮತ್ತು ಜೀವನವು ಸುಲಭವಾಗುತ್ತದೆ. 

ಸೂರ್ಯನಿಗೆ ಅರ್ಗ್ಯವನ್ನು ನೀಡಿ: ಸೂರ್ಯನಿಗೆ ಅರ್ಗ್ಯವನ್ನು ನೀಡುವುದು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ. ಪ್ರತಿದಿನ ಬೆಳಿಗ್ಗೆ ತಾಮ್ರದ ಮಡಕೆಯಲ್ಲಿ ನೀರಿನೊಂದಿಗೆ ಬೆರೆಸಿದ ಕುಂಕುಮವನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಪಿಸಿ, ಇದರಿಂದ ಲಕ್ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
 

click me!