ನವರಾತ್ರಿಯ ಒಂಭತ್ತು ಬಣ್ಣಗಳು, ಅವುಗಳ ವಿಶೇಷತೆ ಏನು ತಿಳಿಯಿರಿ

First Published Oct 5, 2021, 5:02 PM IST

ಹಿಂದೂ ಪುರಾಣಗಳಲ್ಲಿ ನವರಾತ್ರಿಯ (Navratri ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ  ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ(Karnataka) ನವರಾತ್ರಿ ಎಂದಾಗ ನೆನಪಾಗೋದು ಮೈಸೂರು ದಸರ(Mysuru Dasara). ಈ ಹಬ್ಬದ ಸಂಭ್ರಮ ರಾಜ್ಯದ ಮೂಲೆ ಮೂಲೆಗಳಲ್ಲೂ ಕಂಡು ಬರುತ್ತದೆ. ನವರಾತ್ರಿ ಹಬ್ಬದ ಒಂಭತ್ತು ದಿನಗಳಿಗೂ ಅದರದೆ ಆದ ಪ್ರತ್ಯೇಕ ವಿಶೇಷತೆ ಇದೆ. 

ಒಂಬತ್ತು ದಿನಗಳ ಉತ್ಸವಗಳು ಪ್ರಾರಂಭವಾಗುತ್ತಿದ್ದಂತೆ, ಪ್ರತಿ ದಿನಕ್ಕೆ ಮೀಸಲಾದ ಬಣ್ಣಗಳ ಪಟ್ಟಿ ಇಲ್ಲಿದೆ. ದಿನಗಳಿಗೆ ಅನುಗುಣವಾಗಿ ಬಣ್ಣಗಳನ್ನು ಧರಿಸುವುದು ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ ಮತ್ತು ನೀವು ಭಕ್ತಿ ಮತ್ತು ಶಾಂತಭಾವನೆಯನ್ನು ಹೊಂದುತ್ತೀರಿ. ಹಾಗಿದ್ದರೆ ಒಂಭತ್ತು ದಿನಗಳ ಬಣ್ಣ (colors of 9 days) ಯಾವುದು ನೋಡೋಣ.

ಮೊದಲ ದಿನ ಹಳದಿ (Yellow color): ನವರಾತ್ರಿಯ ಮೊದಲ ದಿನ ತಾಯಿ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು, ಪಾರ್ವತಿ, ಭವಾನಿ ಮತ್ತು ಹೇಮಾವತಿ ಎಂದೂ ಕರೆಯಲ್ಪಡುವ ಪರ್ವತಗಳ ಮಗಳಾದ ಹಿಂದೂ ದೇವತೆ ಮಾತಾ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಯನ್ನು ಎರಡು ಕೈಗಳಿಂದ ಚಿತ್ರಿಸಲಾಗಿದೆ ಮತ್ತು ಅವಳ ಹಣೆಯ ಮೇಲೆ ಅರ್ಧಚಂದ್ರವಿದೆ.ಮೊದಲ ದಿನದ ಬಣ್ಣ  ಹಳದಿಯಾಗಿದೆ. ಈ ಬಣ್ಣವು ಸಂತೋಷ ಮತ್ತು ಪ್ರಕಾಶವನ್ನು ಸೂಚಿಸುತ್ತದೆ. 

ಎರಡನೇ ದಿನ ಹಸಿರು (green color) : ನವರಾತ್ರಿಯ 2ನೇ ದಿನದ ಬಣ್ಣ  ಹಸಿರು. ಹಸಿರು ಬಣ್ಣವು ಹೊಸ ಆರಂಭ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಈ ದಿನ ಬ್ರಹ್ಮಚಾರಿನಿ ದೇವಿಯನ್ನು ಪೂಜಿಸಲಾಗುತ್ತದೆ. ಮಾತಾ ಬ್ರಹ್ಮಚಾರಿನಿ  ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವಿದೆ. ಅವಳು ನಿಷ್ಠೆ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುತ್ತಾಳೆ. ಈ ದೇವತೆ ಪ್ರೀತಿಯ ಸಾರಾಂಶ.

ಮೂರನೇ ದಿನ ಬೂದು (Gray Color): ಈ ದಿನ ಚಂದ್ರಗಂಟಾ ದೇವಿಯನ್ನು ಆರಾಧಿಸುತ್ತಾಳೆ, ಅವಳು ತನ್ನ ಶೌರ್ಯ, ಅನುಗ್ರಹ ಮತ್ತು ಧೈರ್ಯದಿಂದ ಜನರಿಗೆ ಆಶೀರ್ವಾದ ನೀಡುತ್ತಾಳೆ. ಬೂದು ಬಣ್ಣ ಇದು ಪರಿವರ್ತನೆಯ ಶಕ್ತಿಯನ್ನು ಸೂಚಿಸುತ್ತದೆ.  ಈ ದಿನ ಬೂದು ಬಣ್ಣ ಧರಿಸುವುದು ಶುಭ. 

4 ನೇ ದಿನ  ಕೇಸರಿ (Irange color): ನವರಾತ್ರಿಯ 4ನೇ ದಿನದ ಬಣ್ಣವು ಕೇಸರಿ.   ಪ್ರಕಾಶಮಾನವಾದ ಮತ್ತು ರೋಮಾಂಚಕ ಬಣ್ಣ, ಕಿತ್ತಳೆ ಬಣ್ಣ ಈ ದಿನ ಧರಿಸುವುದು ಉತ್ತಮ. ಈ ಬಣ್ಣವು ಶಕ್ತಿ ಮತ್ತು ಸಂತೋಷವನ್ನು ಸೂಚಿಸುತ್ತದೆ.  ಈ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಗೆ ಎಂಟು ಕೈಗಳು ಇರುವುದರಿಂದ ಆಕೆಯನ್ನು ಅಷ್ಟಭುಜ ದೇವಿ ಎಂದೂ ಕರೆಯಲಾಗುತ್ತದೆ. 

ಐದನೇ ದಿನದಂದು ಬಿಳಿ (white color): ಈ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ದೇವಿಯನ್ನು ಕಾರ್ತಿಕೇಯ ಅಥವಾ ಸ್ಕಂದ ದೇವರ ತಾಯಿ ಎಂದೂ ಕರೆಯಲಾಗುತ್ತದೆ. ಈ ದಿನ ಬಿಳಿ ಬಣ್ಣದ ಧಿರಿಸು ಧರಿಸಲಾಗುತ್ತದೆ, ಬಿಳಿ ಬಣ್ಣವು ಶುದ್ಧತೆ, ಶಾಂತಿ ಮತ್ತು ಧ್ಯಾನವನ್ನು ಸೂಚಿಸುತ್ತದೆ. 

6 ನೇ ದಿನದಂದು ಕೆಂಪು (Red color)
ಈ ದಿನದಂದು ಜನರು ಸೌಂದರ್ಯ ಮತ್ತು ನಿರ್ಭಯತೆಯನ್ನು ಸೂಚಿಸುವ ಬಣ್ಣವಾದ ಕೆಂಪು ಬಣ್ಣವನ್ನು ಧರಿಸುತ್ತಾರೆ. ಹಿಂದೂಗಳು ಈ ದಿನದಂದು ಕಾತ್ಯಾಯನಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಅವಳನ್ನು ದಬ್ಬಾಳಿಕೆಯ ರಾಕ್ಷಸ ಮಹಿಷಾಸುರನ ಹಂತಕಳಾಗಿ ನೋಡಲಾಗುತ್ತದೆ.

ಏಳನೇ ದಿನ ನೀಲಿ (blue color): ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ನೀಲಿ ಬಣ್ಣದ ವಸ್ತ್ರ ಧರಿಸುವುದರಿಂದ ತಾಯಿಗೆ ಸಂತೋಷವಾಗುತ್ತದೆ. ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ದೇವಿಯು ಎಲ್ಲಾ ರಾಕ್ಷಸರು, ನಕಾರಾತ್ಮಕ ಶಕ್ತಿಗಳು, ದುಷ್ಟ ಶಕ್ತಿಗಳು ಮತ್ತು ದೆವ್ವಗಳ ವಿನಾಶಕ ಎಂದು ನಂಬಲಾಗಿದೆ.  

ಎಂಟನೇ ದಿನ ಗುಲಾಬಿ ಬಣ್ಣ  (Pink color): ನವರಾತ್ರಿಯ ಎಂಟನೇ ದಿನ ದುರ್ಗಾ ಮಾತೆಯ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ತಾಯಿ ಗುಲಾಬಿ ಬಣ್ಣವನ್ನು ಪ್ರೀತಿಸುತ್ತಾಳೆ. ಈ ದಿನದಂದು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುವ ಶಕ್ತಿ ಹೊಂದಿರುವ ಈ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಪೂಜಿಸುವವನು ಜೀವನದ ಎಲ್ಲಾ ಕಷ್ಟಗಳಿಂದ ಪರಿಹಾರ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ಒಂಬತ್ತನೇ ದಿನ ನೇರಳೆ ಬಣ್ಣ  (Purple): 9ನೇ ದಿನ ನವರಾತ್ರಿ ಹಬ್ಬದ ಕೊನೆಯ ದಿನ. ಆ ದಿನವನ್ನು ನವಮಿ ಎಂದು ಕರೆಯುತ್ತಾರೆ. ಈ ದಿನ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ನವಿಲು ಹಸಿರು ಅಥವಾ ನೇರಳೆ ಈ ದಿನದ ಬಣ್ಣ. ಶಿವನ ದೇಹದ ಒಂದು ಮುಖಸಿದ್ಧಿದಾತ್ರಿ ದೇವಿಯದು ಎಂದು ನಂಬಲಾಗಿದೆ. ಆದ್ದರಿಂದ, ಅವನು ಅರ್ಧನಾರೀಶ್ವರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದಾನೆ. ಶಾಸ್ತ್ರಗಳ ಪ್ರಕಾರ, ಶಿವನು ಈ ದೇವಿಯನ್ನು ಪೂಜಿಸುವ ಮೂಲಕ ಎಲ್ಲಾ ಸಿದ್ಧಿಗಳನ್ನು ಪಡೆದನು ಎನ್ನಲಾಗಿದೆ.

click me!