ಅಂಬಾನಿ ಫ್ಯಾಮಿಲಿಯ ಮಹಿಳೆಯರು ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಪಾರ್ಟಿ, ಸಮಾರಂಭ ಆಗಿರಲಿ ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್, ಕೋಟಿ ಬೆಲೆಯ ಆಭರಣಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ.
ಅಷ್ಟೇ ಯಾಕೆ ಅಂಬಾನಿ ಮಹಿಳೆಯರು ಹಿಡಿಯೋ ಕ್ಲಚ್, ಸ್ಯಾಂಡಲ್ಸ್, ಕ್ಲಿಪ್ ಎಲ್ಲವೂ ದುಬಾರಿಯಾಗಿದ್ದು ಸುದ್ದಿಯಾಗುತ್ತಿರುತ್ತದೆ. ಆದರೆ ನೀವು ಗಮನಿಸಿದ್ದೀರಾ ಅಂಬಾನಿ ಕುಟುಂಬದ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ ಮೊದಲಾವರು ಯಾವಾಗಲೂ ಎಮರಾಲ್ಡ್ ಆಭರಣಗಳನ್ನು ಹೆಚ್ಚು ಧರಿಸುತ್ತಾರೆ.
ಇತ್ತೀಚಿಗೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್‌ನಲ್ಲೂ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬರೋಬ್ಬರಿ 500 ಕೋಟಿ ರೂ. ಬೆಲೆಯ ಎಮರಾಲ್ಡ್ ನೆಕ್ಲೇಸ್ ಧರಿಸಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಇಶಾ ಅಂಬಾನಿ ಸಹ ಈ ಇವೆಂಟ್‌ನ ಕಾರ್ಯಕ್ರಮವೊಂದಕ್ಕೆ ಎಮರಾಲ್ಡ್ ಆಭರಣಗಳನ್ನು ಧರಿಸಿದ್ದರು. ಈ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಮಾತ್ರವಲ್ಲ ಬಹುತೇಕ ಹಲವು ಕಾರ್ಯಕ್ರಮಗಳಲ್ಲಿ ಅಂಬಾನಿ ಮಹಿಳೆಯರು ಪಚ್ಚೆ ಆಭರಣಗಳಲ್ಲಿ ಮಿಂಚಿದ್ದಾರೆ.
ಇಷ್ಟಕ್ಕೂ ಅಂಬಾನಿ ಮಹಿಳೆಯರಿಗ್ಯಾಕೆ ಎಮರಾಲ್ಡ್ ಆಭರಣಗಳ ಮೇಲೆ ಇಷ್ಟು ವ್ಯಾಮೋಹ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದರ ಹಿಂದೆ ಹಲವು ಕಾರಣವಿದೆ. ಹಸಿರು ಬಣ್ಣ ಸಮೃದ್ಧಿಯನ್ನು ಸೂಚಿಸುತ್ತದೆ. ಜೊತೆಗೆ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಪ್ರತಿನಿಧಿಸುತ್ತದೆ.
ಇನ್ನು, ಫ್ಯಾಷನ್ ದೃಷ್ಟಿಯಿಂದ ನೋಡುವುದಾದರೆ ಎಮರಾಲ್ಡ್ ಆಭರಣಗಳು ಎಲ್ಲಾ ರೀತಿಯ ಉಡುಗೆಗಳಿಗೂ ಸೂಕ್ತವಾಗಿ ಹೊಂದಿಕೆಯಾಗುತ್ತವೆ.
ಸೀರೆ ಆಗಿರಲಿ ಡ್ರೆಸ್, ಲೆಹಂಗಾ, ಗೌನ್ ಹೀಗೆ ಎಲ್ಲಾ ಬಗೆಯ ದಿರಿಸಿಗೂ ಎಮರಾಲ್ಡ್ ಹೈಲೈಟ್ ಲುಕ್‌ನ್ನು ನೀಡುತ್ತದೆ. ಇಂಥಾ ಆಭರಣಗಳು ಹೈಲೈಟ್ ಆಗುತ್ತವೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ 'ಹಸ್ತಾಕ್ಷರ' ಇವೆಂಟ್‌ನಲ್ಲಿ ಮನೀಷ್ ಮಲ್ಹೋತ್ರಾ ಸೀರೆಯಲ್ಲಿ ನೀತಾ ಅಂಬಾನಿ ಸ್ಟನಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡರು. ಇದರ ಜೊತೆ ಧರಿಸಿ 500 ಕೋಟಿಯ ಎಮರಾಲ್ಡ್ ವಜ್ರದ ನೆಕ್ಲೇಸ್ ಧರಿಸಿದ್ದರು.
ನೀತಾ ಸಮಾರಂಭಕ್ಕೆ ಕಾಂಚೀಪುರಂ ಸೀರೆಯೊಂದಿಗೆ ಕೋಟಿಗಟ್ಟಲೆ ಬೆಲೆಬಾಳುವ ಪಚ್ಚೆ ಹೊದಿಸಿದ ವಜ್ರದ ನೆಕ್ಲೇಸ್ ಧರಿಸಿದ್ದರು. ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಪಚ್ಚೆಗಳನ್ನು ಒಳಗೊಂಡಿರುವ ಉದ್ದನೆಯ ನೆಕ್ಲೇಸ್ ಇದಾಗಿದೆ. ಜೊತೆಗೆ ಹೊಂದಾಣಿಕೆಯ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು
ನೀತಾ ಅವರ ಹಾರದಲ್ಲಿರುವ ಪಚ್ಚೆ ಮತ್ತು ವಜ್ರಗಳ ಗಾತ್ರವನ್ನು ನೋಡಿದರೆ, ಅದು ಹೆಚ್ಚು ಮೌಲ್ಯಯುತವಾದ ಕ್ಯಾರಟ್‌ಗಳು ಎಂದು ಅರ್ಥಮಾಡಿಕೊಳ್ಳಬಹುದು. ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಕೋಟಿಯಲ್ಲಿದೆ. ವರದಿಯನ್ನು ನಂಬುವುದಾದರೆ ಹಾರವೇ ಸುಮಾರು ರೂ. 400-500 ಕೋಟಿ ಬೆಲೆ ಬಾಳುತ್ತದೆ.