ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್‌ಗೆ ಇಶಾ ಅಂಬಾನಿ ಧರಿಸಿದ್ದ ಡ್ರೆಸ್‌ ಬೆಲೆ ರಿಹಾನ್ನಾ ಸಂಭಾವನೆಗಿಂತಲೂ ಹೆಚ್ಚು!

First Published | Mar 13, 2024, 2:45 PM IST

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್ ಬಗ್ಗೆ ಹಲವು ಅಚ್ಚರಿಯ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಇದರಲ್ಲಿ ಹೊಸ ವಿಚಾರವೆಂದ್ರೆ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಇವೆಂಟ್‌ಗೆ ಧರಿಸಿದ್ದ ಡ್ರೆಸ್‌ ಬೆಲೆ ಪಾಪ್‌ ಸ್ಟಾರ್‌ ರಿಹಾನ್ನಾ ಸಂಭಾವನೆಗಿಂತಲೂ ಹೆಚ್ಚು ಅನ್ನೋದು ತಿಳಿದುಬಂದಿದೆ.

ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್ ಬಗ್ಗೆ ಹಲವಾರು ಹೊಸ ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಇದರಲ್ಲಿ ಹೊಸ ವಿಚಾರವೆಂದ್ರೆ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿಯ ಡ್ರೆಸ್ ಬೆಲೆ ಕೋಟಿ ಕೋಟಿ ಬೆಲೆ ಬಾಳುತ್ತದೆ ಎಂದು  ತಿಳಿದುಬಂದಿದೆ.
 

ಅಂಬಾನಿ ಫ್ಯಾಮಿಲಿ ವೆಡ್ಡಿಂಗ್‌ನಲ್ಲಿ ಅಂಬಾನಿ ಮಹಿಳೆಯರು ಧರಿಸಿದ ಡ್ರೆಸ್, ಆಭರಣಗಳು ಲಕ್ಷ, ಕೋಟಿ ಬೆಲೆ ಬಾಳುತ್ತವೆ. ಕೆಲವು ಉಡುಗೆಗಳನ್ನು ಅಸಲಿ ಚಿನ್ನ, ವಜ್ರವನ್ನು ಹೊದಿಸಿ ಮಾಡಲಾಗಿದೆ. ಹಾಗೆಯೇ ಮದುವೆ ಕಾರ್ಯಕ್ರಮವೊಂದರಲ್ಲಿ ಇಶಾ ಧರಿಸಿದ್ದ ಬ್ಲ್ಯಾಕ್ ಡ್ರೆಸ್ ಅತೀ ದುಬಾರಿ ಎನ್ನಲಾಗುತ್ತಿದೆ.

Latest Videos


ಅನಂತ್‌-ರಾಧಿಕಾ ವಿವಾಹ ಪೂರ್ವ ಸಮಾರಂಣದಲ್ಲಿ ಕಪ್ಪು ಉದ್ದದ ಗೌನ್‌ನಲ್ಲಿ ಇಶಾ ಅಂಬಾನಿ ಮಿಂಚಿದ್ದರು. ಗೌನ್‌ ಬೆಳ್ಳಿಯ ಕಸೂತಿ ವರ್ಕ್‌ನ್ನು ಸಹ ಒಳಗೊಂಡಿತ್ತು. ಮಾತ್ರವಲ್ಲದೆ, ಇಶಾ ಅಂಬಾನಿ ವಜ್ರದ ಕಿವಿಯೋಲೆ, ಬಳೆಯನ್ನು ಪೇರ್ ಮಾಡಿದ್ದರು.

ಗ್ರ್ಯಾಂಡ್ ಆಗಿರೋ ಈ ಬ್ಲ್ಯಾಕ್ ಗೌನ್‌ ಬೆಲೆ ಕೋಟಿಯಲ್ಲಿದೆ. ವರದಿಗಳ ಪ್ರಕಾರ, ಇಶಾ ಅಂಬಾನಿ ಗೌನ್‌ ಬೆಲೆ, ರಿಹಾನ್ನಾಳಿಗೆ ನೀಡಿರುವ ಸಂಭಾವನೆಗಿಂತ ಹೆಚ್ಚು ಎಂದು ಹೇಳಲಾಗ್ತಿದೆ.

ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾಗೆ, ಅಂಬಾನಿ ವೆಡ್ಡಿಂಗ್‌ನ ವಿವಾಹಪೂರ್ವ ಬ್ಯಾಷ್‌ನಲ್ಲಿ ಪ್ರದರ್ಶನ ನೀಡಲು 74 ಕೋಟಿ ರೂ. ನೀಡಲಾಗಿತ್ತು ಆದರೆ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರು ರಿಹಾನ್ನಾ ಅಭಿನಯದ ಮೌಲ್ಯಕ್ಕಿಂತ ಹೆಚ್ಚು ಮದುವೆಯ ಲೆಹೆಂಗಾವನ್ನು ಧರಿಸಿದ್ದರು ಎಂದು ಹೇಳಲಾಗ್ತಿದೆ.

ಇಶಾ ಅಂಬಾನಿ ಅವರ ಮದುವೆಯ ಲೆಹೆಂಗಾವು ವೆಡ್ಡಿಂಗ್ ಬ್ಯಾಷ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಈ ಲೆಹೆಂಗಾ ಬರೋಬ್ಬರಿ 90 ಕೋಟಿ ರೂ. ಬೆಲೆ ಬಾಳುತ್ತದೆ. ಈ ಲೆಹೆಂಗಾವನ್ನು ನೀತಾ ಅಂಬಾನಿ ಸೀರೆಯಿಂದ ಸಿದ್ಧಪಡಿಸಿದೆ ಎನ್ನಲಾಗ್ತಿದೆ.

ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ 2018ರಲ್ಲಿ ವಿವಾಹವಾದರು. ಮದುವೆಯ ನಂತರ ಅವರು 450 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಐಷಾರಾಮಿ ಬಂಗಲೆಗೆ ತೆರಳಿದರು. ಇಶಾ ಅಂಬಾನಿ, ನವೆಂಬರ್ 19, 2022ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ವಿವಾಹವು ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ವರದಿಯ ಪ್ರಕಾರ, ಇಡೀ ಮದುವೆಗೆ 700 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಮುಕೇಶ್ ಅಂಬಾನಿ ಮಗಳ ಏಕೈಕ ಪುತ್ರಿ ಲಕ್ಸುರಿಯಸ್‌ ಲೈಫ್‌ಸ್ಟೈಲ್ ಫಾಲೋ ಮಾಡುತ್ತಾರೆ.

click me!