ಅಬ್ಬಬ್ಬಾ..ಬರೋಬ್ಬರಿ 1 ಮಿಲಿಯನ್ ಬೆಲೆ ಬಾಳುತ್ತೆ ಅಂಬಾನಿ ಹಿರಿ ಸೊಸೆ ಧರಿಸಿದ ಈ ದೊಡ್ಡ ವಜ್ರದ ಡೈಮಂಡ್ ನೆಕ್ಲೇಸ್!

First Published | Mar 13, 2024, 3:44 PM IST

ಮುಕೇಶ್ ಅಂಬಾನಿಯ ಹಿರಿ ಸೊಸೆ ಶ್ಲೋಕಾ ಮೆಹ್ತಾ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಹೇಳಿ ಕೇಳಿ, ಭಾರತದ ಪ್ರಮುಖ ಡೈಮಂಡ್ ಉದ್ಯಮಿ ರಸೆಲ್ ಮೆಹ್ತಾ ಮಗಳು. ಆದರೆ ಶ್ಲೋಕಾ ಮೆಹ್ತಾ ಇತ್ತೀಚಿಗೆ ಧರಿಸಿರೋ ಬಿಗ್ ಡೈಮಂಡ್ ನೆಕ್ಲೇಸ್ ಮಾತ್ರ ಎಲ್ಲರೂ ಕಣ್ಣು ಬಾಯಿ ಬಿಟ್ಕೊಂಡು ನೋಡುವಂತಿದೆ.

ಮುಕೇಶ್ ಅಂಬಾನಿಯ ಹಿರಿ ಸೊಸೆ ಶ್ಲೋಕಾ ಮೆಹ್ತಾ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಹೇಳಿ ಕೇಳಿ, ಆಕಾಶ್ ಅಂಬಾನಿಯ ಪತ್ನಿಯಾಗಿರುವ ಶ್ಲೋಕಾ ಮೆಹ್ತಾ, ಭಾರತದ ಪ್ರಮುಖ ಡೈಮಂಡ್ ಕಂಪನಿಗಳಲ್ಲಿ ಒಂದಾದ ರೋಸಿ 'ಬ್ಲೂ ಡೈಮಂಡ್ಸ್'ನ್ನು ಹೊಂದಿರುವ ರಸೆಲ್ ಮೆಹ್ತಾ ಮಗಳು. 

ಶ್ಲೋಕಾ ಮೆಹ್ತಾ, ತಮ್ಮ ಮದುವೆಗೂ ಮೊದಲು ತಮ್ಮ ತಂದೆಯ ವ್ಯಾಪಾರ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಕಂಪೆನಿಯ ನಿರ್ದೇಶಕರಾದರು. ಎಲ್ಲಾ ಸಮಾರಂಭ, ಪಾರ್ಟಿಗಳಲ್ಲೂ ಶ್ಲೋಕಾ ಮೆಹ್ತಾ, ಬೆಲೆಬಾಳುವ ಗ್ರ್ಯಾಂಡ್‌ ಡ್ರೆಸ್‌, ನೆಕ್ಲೇಸ್ ಸೆಟ್‌ ಧರಿಸಿ ಕಾಣಿಸಿಕೊಳ್ಳುತ್ತಾರೆ.

Tap to resize

ಜಿಯೋ ವರ್ಲ್ಡ್ ಪ್ಲಾಜಾ ಬಿಡುಗಡೆ ಸಮಾರಂಭದಲ್ಲಿ ಶ್ಲೋಕಾ ಮೆಹ್ತಾ ಗ್ಲಿಟರಿಂಗ್‌ ಡ್ರೆಸ್‌ನಲ್ಲಿ ಮಿಂಚಿದರು. ಆಫ್ ಶೋಲ್ಡರ್ ಮಿನುಗು ಡ್ರೆಸ್‌ನ ಜೊತೆಗೆ ಅನ್‌ ಕಟ್ ಡೈಮಂಡ್ ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು. 

ಶ್ಲೋಕಾ ಮೆಹ್ತಾ ಅಂಬಾನಿ ಮಿಡಿ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡರು. ದಿವಾ ಸ್ಟೇಟ್‌ಮೆಂಟ್ ಲೇಯರ್ಡ್ ನೆಕ್ಲೇಸ್, ಡೈಮಂಡ್ ಬ್ರೇಸ್ಲೆಟ್ ಮತ್ತು ವಜ್ರದ ಕಿವಿಯೋಲೆಯನ್ನು ಧರಿಸಿದ್ದರು. ಜೊತೆಗೆ ಧರಿಸಿದ್ದ ಫ್ಲೋರಲ್‌ ಪ್ರಿಂಟ್‌ನ ಸ್ಟ್ರಾಪಿ ಹೀಲ್ಸ್  ಈ ಗ್ಲಾಮರಸ್‌ ಲುಕ್‌ನ್ನು ಪೂರ್ತಿಗೊಳಿಸಿತು. 

ಶ್ಲೋಕಾ ಮೆಹ್ತಾಲೇಯರ್ಡ್ ಸ್ಟ್ರಿಂಗ್ ನೆಕ್ಲೇಸ್ ಬೆಲೆ ಬರೋಬ್ಬರಿ USD 1 ಮಿಲಿಯನ್ ಎಂದು ವರದಿಯಾಗಿದೆ. ಇದು ಮೂರು ವರ್ಣರಂಜಿತ ತಂತಿಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದರ ಮೇಲೆ ಬೃಹತ್ ವಜ್ರವನ್ನು ಜೋಡಿಸಲಾಗಿದೆ.

ಮೊದಲ ದಾರವು ಗುಲಾಬಿ ಬಣ್ಣದ್ದಾಗಿತ್ತು ಮತ್ತು ಕತ್ತರಿಸದ ಸಾಲಿಟೇರ್ ಪೆಂಡೆಂಟ್ ಅನ್ನು ಹೊಂದಿತ್ತು. ಇನ್ನೊಂದು ಗುಲಾಬಿ ದಾರವು ದುಂಡಗಿನ ವಜ್ರವನ್ನು ಹೊಂದಿತ್ತು. ಏತನ್ಮಧ್ಯೆ, ನೀಲಿ ದಾರವು ಬೆರಗುಗೊಳಿಸುವ ಹೃದಯದ ಆಕಾರದ ವಜ್ರದ ಪೆಂಡೆಟ್‌ನ್ನು ಒಳಗೊಂಡಿತ್ತು.

ಇದಲ್ಲದೆ ಬರೋಬ್ಬರಿ 451 ಕೋಟಿ ರೂ. ಮೌಲ್ಯದ ಡೈಮಂಡ್ ನೆಕ್ಲೇಸ್ ಸಹ ಶ್ಲೋಕಾ ಮೆಹ್ತಾ ಬಳಿಯಿದೆ. ಇದನ್ನು ನೀತಾ ಅಂಬಾನಿ ಉಡುಗೊರೆಯಾಗಿ ನೀಡಿದ್ದರು.  

ಇದು ವಿವಿಧ ಆಕಾರಗಳಲ್ಲಿ ಕತ್ತರಿಸಿದ 91 ಬಿಳಿ ವಜ್ರಗಳನ್ನು ಒಳಗೊಂಡಿದೆ. ಶ್ಲೋಕಾ ಅವರ ವಿಶಿಷ್ಟವಾದ ನೆಕ್ಲೇಸ್ ಅನ್ನು 2022 ರಲ್ಲಿ ಸೋಥೆಬೈಸ್‌ನಲ್ಲಿ ಪ್ರದರ್ಶಿಸಲಾಯಿತು

ಶ್ಲೋಕಾ ಮೆಹ್ತಾ ಮಾರ್ಚ್ 9, 2019ರಂದು ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಹಿರಿಯ ಮಗ ಆಕಾಶ್ ಅಂಬಾನಿಯನ್ನು ಮದುವೆಯಾದರು. ದಂಪತಿಗೆ ಪೃಥ್ವಿ ಆಕಾಶ್ ಅಂಬಾನಿ, ವೇದಾ ಆಕಾಶ್ ಅಂಬಾನಿ ಎಂಬ ಇಬ್ಬರು ಮಕ್ಕಳಿದ್ದಾರೆ.

Latest Videos

click me!