ಅಪ್ಪರ್ ಲಿಪ್ಸ್ ಹೇರ್ ರಿಮೂವ್ ಮಾಡಲು ವ್ಯಾಕ್ಸಿಂಗ್ - ಥ್ರೆಡ್ಡಿಂಗ್ ಯಾವುದು ಬೆಸ್ಟ್?

First Published Jul 1, 2022, 6:04 PM IST

ಅಪ್ಪರ್ ಲಿಪ್ಸ್ ಮೇಲೆ ಕೂದಲು ಇದ್ದರೆ, ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತೆ. ಮುಖದ ಸೌಂದರ್ಯ ಹೆಚ್ಚಿಸಲು ಬಯಸಿದ್ರೆ, ನೀವು ಅಪ್ಪರ್ ಲಿಪ್ಸ್ ಅಂದರೆ ತುಟಿಗಳ ಮೇಲಿನ ಕೂದಲನ್ನು ತೆಗೆಯಬೇಕು. ಇದಕ್ಕಾಗಿ ಎರಡು ವಿಧಾನ ಸಾಕಷ್ಟು ಕಾಮನ್ ಆಗಿ ಯೂಸ್ ಮಾಡ್ತಾರೆ. ಮೊದಲನೆಯದು ಅಂದ್ರೆ ಥ್ರೆಡ್ಡಿಂಗ್ ಮತ್ತು ಎರಡನೇ ಮಾರ್ಗ ವ್ಯಾಕ್ಸಿಂಗ್.
 

ಥ್ರೆಡ್ಡಿಂಗ್ ಗಾಗಿ(Threading), ಕೂದಲನ್ನು ದಾರಗಳ ಸಹಾಯದಿಂದ ತೆಗೆದುಹಾಕಲಾಗುತ್ತದೆ, ಆದರೆ ವ್ಯಾಕ್ಸಿಂಗ್ ನಲ್ಲಿ, ಬಿಸಿ ವ್ಯಾಕ್ಸ್ ನ್ನು ಚರ್ಮಕ್ಕೆ ಅಂಟಿಸಲಾಗುತ್ತೆ  ಮತ್ತು ಕೂದಲನ್ನು ಬೇರುಸಹಿತ ಕಿತ್ತುಹಾಕುವ ಮೂಲಕ ತೆಗೆದುಹಾಕಲಾಗುತ್ತೆ. 

ಅನೇಕ ಜನರು ಥ್ರೆಡ್ಡಿಂಗ್ ಚರ್ಮಕ್ಕೆ ಅತ್ಯುತ್ತಮ ಮಾರ್ಗವೆಂದು ಪರಿಗಣಿಸ್ತಾರೆ, ಇನ್ನೂ ಕೆಲವರು ವ್ಯಾಕ್ಸಿಂಗ್(waxing) ಮಾಡಿಸಿದ್ರೆ ಚೆನ್ನಾಗಿರುತ್ತೆ ಎಂದು ಅಂದು ಕೊಳ್ತಾರೆ. ಎಲ್ಲಾ  ಹುಡುಗಿಯರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ ಈ ಎರಡು ಮಾರ್ಗಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ ಎಂದು.  ಈ ಎರಡು ತಂತ್ರಗಳ ಬಗ್ಗೆ ಇಲ್ಲಿದೆ ನೋಡಿ.
 

ಅಪ್ಪರ್ ಲಿಪ್ಸ್ ನ ಕೂದಲನ್ನು ತೆಗೆದುಹಾಕಲು ಯಾವ ವಿಧಾನ ಒಳ್ಳೆದು?
ಥ್ರೆಡಿಂಗ್
ಥ್ರೆಡ್ಡಿಂಗ್ ನಲ್ಲಿ, ತುಟಿಗಳ ಮೇಲ್ಭಾಗದಲ್ಲಿರುವ ಕೂದಲನ್ನು(Hair) ದಾರದ ಸಹಾಯದಿಂದ ತೆಗೆದುಹಾಕಲಾಗುತ್ತೆ. ಥ್ರೆಡ್ಡಿಂಗ್ ಸಮಯದಲ್ಲಿ, ಮೇಲಿನ ತುಟಿಗಳಲ್ಲಿನ ಕೂದಲನ್ನು ತೆಗೆದುಹಾಕಲಾಗುತ್ತೆ. ಈ ಸಮಯದಲ್ಲಿ, ಚರ್ಮವನ್ನು ಎಳೆದು ಬಿಗಿಯಾಗಿಡಬೇಕು.

ಥ್ರೆಡಿಂಗ್ ನ ಪ್ರಯೋಜನಗಳ ಬಗ್ಗೆ ಹೇಳೋದಾದ್ರೆ, ಚರ್ಮದ(Skin) ಮೇಲಿನ ಪದರವು ಹಾನಿಗೊಳಗಾಗದ ರೀತಿ ಇದರ ಮೂಲಕ ಕೂದಲನ್ನು ತೆಗೆದು ಹಾಕಬಹುದು. ಚರ್ಮಕ್ಕೆ ಇದು ಅತ್ಯಂತ ಸರಿಯಾದ ಮಾರ್ಗವಾಗಿದೆ ಎಂದು ಹೇಳಬಹುದು. ಇದರಿಂದ ಯಾವುದೇ ರೀತಿಯ ಸ್ಕಿನ್ ಸಮಸ್ಯೆ ಕೂಡ ಉಂಟಾಗೋದಿಲ್ಲ.

ಸೈಡ್ ಎಫೆಕ್ಟ್ (Side affect)ಬಗ್ಗೆ ಹೇಳೋದಾದ್ರೆ, ಥ್ರೆಡ್ಡಿಂಗ್ ಪ್ರಕ್ರಿಯೆಯು ನೋವಿನಿಂದ ಕೂಡಿರುತ್ತೆ ಮತ್ತು ಅದು ಇದನ್ನು ಮಾಡಿದ ಕೆಲವೇ ದಿನಗಳಲ್ಲಿ, ಕೂದಲು ಮತ್ತೆ ಬೆಳೆಯುತ್ತೆ. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ, ಚರ್ಮ ಬಿಗಿಯಾಗಿಡದಿದ್ದರೆ, ಕಟ್ಸ್ , ಕಿರಿಕಿರಿ ಇತ್ಯಾದಿ ಸಮಸ್ಯೆ ಉಂಟಾಗುತ್ತೆ. ಥ್ರೆಡಿಂಗ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ.
 

ವ್ಯಾಕ್ಸಿಂಗ್(Waxing)
ವ್ಯಾಕ್ಸಿಂಗ್ ಗಾಗಿ ತುಟಿಗಳ ಚರ್ಮ ಟೈಟ್ ಮಾಡಿದಾಗ ಚರ್ಮಕ್ಕೆ ಹಾನಿಯಾಗಬಹುದು. ಇದು ಚರ್ಮವನ್ನು ಸುಡಬಹುದು. ಅಷ್ಟೇ ಅಲ್ಲ ರಾಷಸ್ ಮತ್ತು ಕೆಂಪಾಗುವಿಕೆಗೆ ಕಾರಣವಾಗಬಹುದು. ಇದು ಚರ್ಮದ ಇರಿಟೇಶನ್ ಮೊದಲಾದ ಸಮಸ್ಯೆಯನ್ನು ಸಹ ಉಂಟು ಮಾಡುತ್ತೆ.

ಥ್ರೆಡ್ಡಿಂಗ್ ಗೆ ಹೋಲಿಸಿದರೆ ವ್ಯಾಕ್ಸಿಂಗ್ ಮಾಡಿದಾಗ, ಅದು ಚರ್ಮದ ಆಳದವರೆಗೆ ರೀಚ್ ಆಗುತ್ತೆ ಮತ್ತು ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತೆ. ನಾವು ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಮಾತನಾಡೋದಾದ್ರೆ, ವ್ಯಾಕ್ಸ್ ಬಿಸಿಯಾಗಿರೋದ್ರಿಂದ ಚರ್ಮ ಬರ್ನ್ ಸಾಧ್ಯತೆಗಳು ಹೆಚ್ಚು. 

ವ್ಯಾಕ್ಸಿಂಗಿಂದ ಚರ್ಮದ ಮೇಲಿನ ಪದರ ಸಹ ಸ್ಟ್ರಿಪ್ ನೊಂದಿಗೆ ಬರುತ್ತೆ, ಇದು ಚರ್ಮದ ಹಾನಿಗೆ ಕಾರಣವಾಗುತ್ತೆ ಮತ್ತು ತುಂಬಾ ಸೂಕ್ಷ್ಮವಾಗುತ್ತೆ.  ಹೆಚ್ಚು ವ್ಯಾಕ್ಸಿಂಗ್ ಮಾಡೋದರಿಂದ ಚರ್ಮ ಕಪ್ಪಾಗಲು ಇದು ಕಾರಣ.  ನೀವು ಪದೇ ಪದೇ ವ್ಯಾಕ್ಸಿಂಗ್ ಮಾಡುತ್ತಿದ್ರೆ, ತುಟಿಗಳ ಹತ್ತಿರದ ಸ್ಕಿನ್ ಸಡಿಲವಾಗುತ್ತೆ, ಜೊತೆಗೆ ಸುಕ್ಕು(Wrinkles) ಉಂಟಾಗುತ್ತೆ.

tute to glide your blade over. Olive oil moisturizes the skin as well.

ಯಾವುದು ಉತ್ತಮ ಆಯ್ಕೆ?
ಇವೆರಡರ ಪ್ರೋಸೆಸ್ ನೋಡಿದರೆ, ಥ್ರೆಡ್ಡಿಂಗ್  ವ್ಯಾಕ್ಸಿಂಗ್ ಗಿಂತ ಸ್ಲೋ ಪ್ರೋಸೆಸ್ ಎಂದು ಹೇಳಬಹುದು, ಅಂದರೆ ಇದು ಚರ್ಮವನ್ನು ಕಡಿಮೆ ಹಾನಿಗೊಳಿಸುತ್ತೆ. ಥ್ರೆಡ್ಡಿಂಗ್ ಜಾಗರೂಕತೆಯಿಂದ ಮಾಡಿದರೆ, ಅದು ಚರ್ಮಕ್ಕೆ ಯಾವುದೇ ಹಾನಿ ಉಂಟುಮಾಡೋದಿಲ್ಲ.  ಆದ್ದರಿಂದ ಅಪ್ಪರ್ ಲಿಪ್ಸ್ನ(upper lips) ಕೂದಲನ್ನು ತೆಗೆಯಲು ನೀವು ಹೆಚ್ಚು ಥ್ರೆಡ್ಡಿಂಗ್ ಬಳಸೋದು ಉತ್ತಮ.
 

click me!