ಕೆಮಿಕಲ್ ಬದಲು ಈ ನ್ಯಾಚುರಲ್ ಹೇರ್ ಕಲರ್ ಟ್ರೈ ಮಾಡಿ ನೋಡಿ

First Published | Jun 30, 2022, 6:28 PM IST

ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಬಣ್ಣ ಬರಲು ವಿವಿಧ ಹೇರ್ ಕಲರ್  (hair color) ಬಳಸೋದು ಸಾಮಾನ್ಯವಾಗಿದೆ. ಆದರೂ ಕೆಮಿಕಲ್ ಹೊಂದಿರುವ ಹೇರ್ ಕಲರ್ ನಿಂದ ಕೂದಲಿನ ಮೇಲೆ ಅನೇಕ ಅಡ್ಡಪರಿಣಾಮಗಳು ಉಂಟಾಗುತ್ತವೆ. ಹಾಗಾದ್ರೆ ಹೇರ್ ಕಲರ್ ಗೆ ಏನು ಮಾಡೋದು? ಕೆಮಿಕಲ್ ಮುಕ್ತ ನೈಸರ್ಗಿಕ ಕೂದಲಿನ ಬಣ್ಣ ಎಲ್ಲಿಂದ ಹುಡುಕೋದು ಅನ್ನೋ ಯೋಚನೆ ನಿಮಗಿದ್ದರೆ ಇಲ್ಲಿದೆ ಬೆಸ್ಟ್ ಟಿಪ್ಸ್.

ಕೆಮಿಕಲ್ ಫ್ರೀ ಹೇರ್ ಕಲರ್ ಗಾಗಿ (chemical free hair color) ಹುಡುಕುತ್ತಿದ್ದರೆ, ಇಲ್ಲಿದೆ ನ್ಯಾಚುರಲ್ ಹೇರ್ ಕಲರ್. ಮೆಂತ್ಯ ಎಲೆಗಳಿಂದ ತಯಾರಿಸಿದ ಹರ್ಬಲ್ ಹೇರ್ ಕಲರ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಶಾಕ್ ಆಗ್ಬೇಡಿ… ಇದನ್ನು ಹೇಗೆ ತಯಾರಿಸೋದು? ಏನು ಮಾಡೋದು ನೋಡೋಣ… 

ಕೂದಲಿಗೆ ಹೇರ್ ಕಲರ್ ಬಳಸೋದು ಹೆಚ್ಚಿನ ಜನರ ಹೇರ್ ಕೇರ್ ನ ಪ್ರಮುಖ ಭಾಗವಾಗಿದೆ. ಕೆಲವು ಜನರು ಬಿಳಿ ಕೂದಲನ್ನು ಮರೆಮಾಚಲು ಕೂದಲಿಗೆ ಹೇರ್ ಕಲರ್ ಹಚ್ಚುತ್ತಾರೆ, ಇನ್ನು ಕೆಲವರು ವಿಭಿನ್ನ ಲುಕ್ ಪಡೆಯಲು ಹೇರ್ ಕಲರ್ ಹಚ್ಚುತ್ತಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಕಂಡುಬರುವ ಕೆಮಿಕಲ್ ಹೇರ್ ಕಲರ್ ಕೂದಲಿಗೆ ತುಂಬಾ ಹಾನಿಕಾರಕವಾಗಿದೆ. ಹಾಗಾಗಿ ಈ ಟೈಮ್ ನಲ್ಲಿ ನೀವು ಮೆಂತೆ ಹೇರ್ ಕಲರ್ ಟ್ರೈ ಮಾಡಬಹುದು. 

Latest Videos


ವಾಸ್ತವವಾಗಿ, ಕೆಮಿಕಲ್ ಯುಕ್ತ ಹೇರ್ ಕಲರ್ ಕೂದಲನ್ನು ಒರಟು ಮತ್ತು ನಿರ್ಜೀವವಾಗಿಸುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಜನರು ತಮ್ಮ ಕೂದಲಿಗೆ ಗಿಡಮೂಲಿಕೆ ಉತ್ಪನ್ನಗಳನ್ನು ಬಳಸಲು ಬಯಸುತ್ತಾರೆ. ಈ ಲಿಸ್ಟ್ ನಲ್ಲಿ ನೀವು ಮೆಂತ್ಯೆ ಎಲೆಯ ಹೇರ್ ಕಲರ್ ಕೂಡ ಸೇರಿಸಬಹುದು.

ಮೆಂತ್ಯ ಎಲೆಗಳು (fenugreek leaves) ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವುದಲ್ಲದೆ, ಅದನ್ನು ಹಚ್ಚುವುದರಿಂದ, ಕೂದಲು ರೇಷ್ಮೆ ಮತ್ತು ಹೊಳೆಯುತ್ತದೆ. ಮೆಂತ್ಯ ಎಲೆಗಳಿಂದ ಹೇರ್ ಕಲರ್ ಹೇಗೆ ತಯಾರಿಸುವುದು ಎಂದು ತಿಳಿಯೋಣ.

ಮೆಂತ್ಯ ಎಲೆಗಳ ಹೇರ್ ಕಲರ್:
ಇದನ್ನು ತಯಾರಿಸಲು, 1 ಕಪ್ ಮೆಂತ್ಯ ಎಲೆಗಳನ್ನು ತೊಳೆದು ರುಬ್ಬಿಕೊಳ್ಳಿ. ಈಗ ಅದಕ್ಕೆ 1 ಕಪ್ ಮೆಹಂದಿ ಪುಡಿ, 1 ಕಪ್ ಇಂಡಿಗೋ ಪುಡಿ ಮಿಕ್ಸ್ ಮಾಡಿ. ಕೂದಲಿಗೆ ಹೇರ್ ಕಲರ್ ಹಚ್ಚುವ ಮೊದಲು, ಈ ಮಿಶ್ರಣಕ್ಕೆ 1 ಟೀಸ್ಪೂನ್ ಹೇರ್ ಕಂಡೀಷನರ್ ಮತ್ತು 1 ಟೀಸ್ಪೂನ್ ತೆಂಗಿನ ಎಣ್ಣೆ ಸೇರಿಸಿ, ಅದನ್ನು ಮಿಕ್ಸ್ ಮಾಡಿ.

ಮೆಂತ್ಯ ಎಲೆಗಳಿಂದ ಮಾಡಿದ ಹೇರ್ ಕಲರ್ ಹಚ್ಚಲು, ಮೊದಲು ಕೂದಲನ್ನು ತೊಳೆಯಿರಿ ಮತ್ತು ಕೂದಲನ್ನು ಚೆನ್ನಾಗಿ ಕ್ಲೀನ್ ಮಾಡಿ. ಈಗ ಬ್ರಷ್ ಸಹಾಯದಿಂದ, ಕೂದಲಿಗೆ ಮೆಂತ್ಯ ಹೇರ್ ಕಲರ್ ಹಚ್ಚಿ ಮತ್ತು 3-4 ಗಂಟೆಗಳ ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.

ಮೆಂತ್ಯ ಎಲೆಗಳ ಹೇರ್ ಕಲರ್ (hair color) ಸಂಗ್ರಹಿಸಲು ಮೆಂತ್ಯ ಎಲೆಗಳ ಪುಡಿಯನ್ನು ತಯಾರಿಸಿ. ಇದಕ್ಕೆ ಮೆಹಂದಿ ಪುಡಿ ಮತ್ತು ಇಂಡಿಗೊ ಪುಡಿಯನ್ನು ಸೇರಿಸಿ. ಈಗ ಒಂದು ಜಾರ್ ಅನ್ನು ತೊಳೆದು, ಅದನ್ನು ಚೆನ್ನಾಗಿ ಒಣಗಿಸಿ ಮತ್ತು ಈ ಮಿಶ್ರಣವನ್ನು ಜಾರ್ ನಲ್ಲಿ ತುಂಬಿಸಿ. ಜಾರ್ ಅನ್ನು ಕಾಗದದಿಂದ ಮುಚ್ಚಿ ತಂಪಾದ ಸ್ಥಳದಲ್ಲಿ ಇರಿಸಿ. ಇದು ನಿಮ್ಮ ಕೂದಲಿನ ಬಣ್ಣ ಹಾಳುಮಾಡುವುದಿಲ್ಲ.

ನಿಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಮೆಂತ್ಯ ಹೇರ್ ಕಲರ್ ಹಚ್ಚಿದ ನಂತರ ಕೂದಲಿಗೆ ವಿಶೇಷ ಆರೈಕೆಯ ಅಗತ್ಯವಿದೆ. ಹಾಗಾಗಿ ಕೆಮಿಕಲ್ ಪ್ರಾಡಕ್ಟ್ ಬಳಸೋದನ್ನು ತಪ್ಪಿಸಿ. ಅಲ್ಲದೆ, ಕೂದಲನ್ನು ತೊಳೆಯಲು ಬಿಸಿ ನೀರನ್ನು ಬಳಸಬೇಡಿ, ಬಣ್ಣ ಹಚ್ಚಿದ ತಕ್ಷಣ ಬಿಸಿಲಿಗೆ ಹೋಗೋದನ್ನು ತಪ್ಪಿಸಿ. ಇದಲ್ಲದೆ, ಪ್ಯಾಚ್ ಪರೀಕ್ಷೆಯ ನಂತರವೇ ಮೆಂತ್ಯ ಎಲೆಗಳ ಹೇರ್ ಕಲರ್ ಕೂದಲಿಗೆ ಹಚ್ಚಿ.

click me!