ಸ್ಕಿನ್ ಚೆನ್ನಾಗಿ ಕಾಣಲು ನೀವು ಏನೆಲ್ಲಾ ಟ್ರೈ ಮಾಡಿರಬಹುದು ಅಲ್ವಾ? ಆದರೆ ಈ ಬಾರಿ ಮಾರ್ಕೆಟಿನಲ್ಲಿ ಟ್ರೆಂಡಿನಲ್ಲಿರುವ ಸ್ಕಿನ್ ಸೈಕ್ಲಿಂಗ್ (Skin Cycling) ಬಗ್ಗೆ ನೀವು ಕೇಳಿದ್ದೀರಾ? ಈ ಮೂರು ಹಂತದ ಪ್ರಕ್ರಿಯೆಯು ರಾತ್ರಿ ಚರ್ಮದ ಆರೈಕೆಯ ದಿನಚರಿಯನ್ನು ಬದಲಾಯಿಸುವ ಮೂಲಕ ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ಸ್ಕಿನ್ ಸೈಕ್ಲಿಂಗ್ ರೂಟಿನ್ ಅಳವಡಿಸಿಕೊಳ್ಳುವ ಪ್ರಯೋಜನವೆಂದರೆ ಇದು ಚರ್ಮದ ಸಮಸ್ಯೆಗಳನ್ನು (skin problem) ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಚರ್ಮಕ್ಕೆ ಉತ್ತಮ ಸ್ಥಿರವಾದ ಮತ್ತು ಪರಿಣಾಮಕಾರಿ ವಿಧಾನವಾಗಿದೆ.
ಸ್ಕಿನ್ ಸೈಕಲಿಂಗ್ ಮಾಡಿಸೋ ಮೂಲಕ ಚರ್ಮ ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅಷ್ಟಕ್ಕೂ, ತಾಜಾ, ಮೃದು ಮತ್ತು ಸ್ವಾಭಾವಿಕವಾಗಿ ಹೊಳೆಯುವ ಚರ್ಮವನ್ನು ಯಾರು ಇಷ್ಟಪಡುವುದಿಲ್ಲ? ನಿಮಗೂ ಸುಂದರ ತ್ವಚೆ ಬೇಕು ಎಂದಾದರೆ ನೀವೂ ಸಹ ಸ್ಕಿನ್ ಸೈಕ್ಲಿಂಗ್ ಮಾಡಿಸಿಕೊಳ್ಳಬಹುದು.
ಸ್ಕಿನ್ ಸೈಕಲಿಂಗ್ ಯಾವ ರೀತಿ ಮಾಡಲಾಗುತ್ತದೆ ಅನ್ನೋದನ್ನು ನೋಡೋಣ :
ರಾತ್ರಿ 1: ಎಕ್ಸ್ ಫೋಲಿಯೇಶನ್ (exfoliation)
ಮೊದಲ ಹಂತವೆಂದರೆ ಎಕ್ಸ್ ಫೋಲಿಯೇಶನ್. ಮೊದಲು ಚರ್ಮಕ್ಕೆ ಹೊಳಪನ್ನು ನೀಡಲು ಎಕ್ಸ್ಫೋಲಿಯೇಟ್ ಮಾಡಿ, ಮತ್ತು ಇತರೆ ಎರಡು ರಾತ್ರಿಗಳ ರೂಟೀನ್ ಗಾಗಿ ಚರ್ಮವನ್ನು ಸಿದ್ಧಪಡಿಸಿ. ಅತಿಯಾದ ಎಕ್ಸ್ಫೋಲಿಯೇಶನ್ ಅಥವಾ ಎಕ್ಸ್ಫೋಲಿಯೇಶನ್ ತಪ್ಪಾಗಿ ಮಾಡುವುದು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು.
ರಾತ್ರಿ 2: ರೆಟಿನಾಲ್ (retinol)
ಎರಡನೆ ದಿನ ರಾತ್ರಿ, ಚರ್ಮದ ಮೇಲೆ ರೆಟಿನಾಲ್ ಬಳಸಿ. ರೆಟಿನಾಯ್ಡ್‌ಗಳು ಅತ್ಯಂತ ಪರಿಣಾಮಕಾರಿ ಘಟಕಾಂಶಗಳಲ್ಲಿ ಒಂದಾಗಿವೆ, ಆದ್ದರಿಂದ ಅವುಗಳನ್ನು ಸ್ಕಿನ್ ಸೈಕ್ಲಿಂಗ್ ರೂಟಿನ್‌ನಲ್ಲಿ ಸೇರಿಸುವುದು ಅತ್ಯಗತ್ಯ. ಇತರ ಕಿರಿಕಿರಿ ಉಂಟುಮಾಡುವ ಬ್ಯೂಟಿ ಪ್ರಾಡಕ್ಟ್ ಗಳ (beauty product) ಜೊತೆ ರೆಟಿನಾಲ್ ಲೇಯರ್ ಹಚ್ಚಿದರೆ ಅಥವಾ ಅದನ್ನು ಆಗಾಗ್ಗೆ ಬಳಸಿದರೆ, ಅದು ಉರಿಯೂತಕ್ಕೆ ಕಾರಣವಾಗಬಹುದು. ಆದುದರಿಂದ ಸರಿಯಾದ ರೀತಿಯಲ್ಲಿ ಬಳಕೆ ಮಾಡುವತ್ತ ಗಮನವಿರಲಿ.
ನೈಟ್ಸ್ 3 ಮತ್ತು 4: ರಿಕವರಿ (recovery)
ಮೂರು ಮತ್ತು ನಾಲ್ಕನೇ ರಾತ್ರಿಗಳು ನಿಮ್ಮ ತ್ವಚೆಗೆ ಆರಾಮ ನೀಡುವ ಬಗ್ಗೆ ಆಗಿರುತ್ತದೆ. ಈ ಸಮಯದಲ್ಲಿ ನೀವು ಹೈಡ್ರೇಶನ್ ಮತ್ತು ಆರ್ದ್ರತೆಗೆ ಗಮನ ಹರಿಸಬೇಕು. ಆದ್ದರಿಂದ ಹೈಲುರೋನಿಕ್ ಆಮ್ಲ, ಸೆರಾಮೈಡ್ ಗಳು ಮತ್ತು ಗ್ಲಿಸರಿನ್ ನಂತಹ ಪದಾರ್ಥಗಳನ್ನು ಬಳಸಿ.
ಸ್ಕಿನ್ ಸೈಕ್ಲಿಂಗ್ ಚರ್ಮದ ಮೇಲೆ ಕಿರಿಕಿರಿಯನ್ನು ಉಂಟು ಮಾಡದೆ ತ್ವಚೆಯನ್ನು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುತ್ತದೆ.. ಸೌಂದರ್ಯ ಉತ್ಪನ್ನಗಳ ಬಗ್ಗೆ ತಿಳಿದಿಲ್ಲದವರಿಗೆ ಅಥವಾ ತಮ್ಮ ಸೌಂದರ್ಯ ರೂಟೀನ್ ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ, ಸ್ಕಿನ್ ಸೈಕ್ಲಿಂಗ್ ಟ್ರೆಂಡ್ ಸ್ಕಿನ್ ಕೇರ್ ರೂಟೀನ್ ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ.
ಸ್ಕಿನ್ ಸೈಕ್ಲಿಂಗ್ ಎಲ್ಲಾ ರೀತಿಯ ಚರ್ಮಕ್ಕೆ ಪ್ರಯೋಜನಕಾರಿ. ನೀವು ಮಾಡಬೇಕಾಗಿರುವುದು ನಿಮ್ಮ ಸ್ಕಿನ್ ಟೈಪ್ ಮತ್ತು ದುಂಡಗಿನ ಪ್ರಕಾರವನ್ನು ಅವಲಂಬಿಸಿ ರೂಟೀನ್ ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದು. ಉದಾಹರಣೆಗೆ, ನೀವು ಸೂಕ್ಷ್ಮ ಅಥವಾ ಶುಷ್ಕ ಚರ್ಮವನ್ನು ಹೊಂದಿದ್ದರೆ, ಕಡಿಮೆ ಪ್ರಮಾಣದ ರೆಟಿನಾಲ್ ಬಳಸಿ.