ಬ್ರೈಡಲ್ ಮೇಕಪ್‌ಗೂ ಮುನ್ನ ಇದನ್ನ ಮಾಡಿದ್ರೆ ಮದ್ವೆ ದಿನ ಮಿಂಚೋದು ಗ್ಯಾರಂಟಿ

First Published | Dec 21, 2022, 6:55 PM IST

ಮದುವೆ ದಿನ ತಾನು ರಾಜಕುಮಾರಿಯಂತೆ ಕಾಣಬೇಕು ಎಂದು ಪ್ರತಿಯೊಬ್ಬ ವಧು ಕೂಡ ಬಯಸುತ್ತಾಳೆ. ಅದಕ್ಕಾಗಿ ಮೊದಲಿಗೆ, ಮುಖಕ್ಕೆ ನೈಸರ್ಗಿಕ ಹೊಳಪನ್ನು ತರಲು, ಚರ್ಮದ ವಿನ್ಯಾಸಕ್ಕೆ ಅನುಗುಣವಾಗಿ ಸರಿಯಾದ ರೂಟಿನ್ ಫಾಲೋ ಮಾಡೋದು ತುಂಬಾನೆ ಮುಖ್ಯ. ಇನ್ನು ಬ್ರೈಡಲ್ ಮೇಕಪ್ ಮಾಡೊ ಮುನ್ನ ಏನೆಲ್ಲಾ ಮಾಡಬೇಕು ಅನ್ನೋದನ್ನು ನೋಡೋಣ. 

ಮದುವೆ ದಿನದಂದು, ಎಲ್ಲರ ಕಣ್ಣು ವಧುವಿನ ಮೇಲೆ ಮಾತ್ರ ಇರುತ್ತವೆ. ಅದೇ ಸಮಯದಲ್ಲಿ, ಈ ದಿನ ನಮಗೆ ಅತ್ಯಂತ ವಿಶೇಷವಾಗಿರೊ ದಿನವಾಗಿರುತ್ತೆ. ನಾವು ಈ ದಿನಕ್ಕಾಗಿ ಹಲವಾರು ತಿಂಗಳು ಮುಂಚಿತವಾಗಿಯೇ ಎಲ್ಲಾ ಸಿದ್ಧತೆಗಳನ್ನು ಮಾಡಲು ಪ್ರಾರಂಭಿಸುತ್ತೇವೆ. ಉಡುಗೆ ತೊಡುಗೆಗಳಿಂದ ಹಿಡಿದು ಆಭರಣಗಳವರೆಗೆ, ನಾವು ಎಲ್ಲವನ್ನೂ ಆಯ್ಕೆ ಮಾಡಿರುತ್ತೇವೆ. ಜೊತೆಗೆ ನಮ್ಮ ಚರ್ಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆ ದಿನ ಮುಖ ಹೊಳೆಯಬೇಕು ಎಂದು ನಾವು ಏನೇನೋ ಮಾಡುತ್ತೇವೆ. ಆದರೆ ಬ್ರೈಡಲ್ ಮೇಕಪ್ ಗೂ ಮುನ್ನ ಏನು ಮಾಡಬೇಕು ಎಂದು ತಿಳಿದಿರದಿದ್ದರೆ ಇದನ್ನ ಖಂಡಿತವಾಗಿಯೀ ಓದಿ… 

ಕ್ಲೆನ್ಸರ್ (cleanser)

ಮದುವೆ ದಿನ ಮುಖ ಸುಂದರವಾಗಿ ಕಾಣಲು ಮೊದಲಿಗೆ ನೀವು ಮುಖವನ್ನು ಕ್ಲೆನ್ಸರ್ ಮಾಡಬೇಕು. ಅದಕ್ಕಾಗಿ ಮುಖವನ್ನು ಸ್ವಚ್ಛಗೊಳಿಸಲು, ನಿಮ್ಮ ಚರ್ಮಕ್ಕೆ ಅನುಗುಣವಾಗಿ ಯಾವುದೇ ಕ್ಲೆನ್ಸಿಂಗ್ ಹಾಲು ಅಥವಾ ಫೇಸ್ ವಾಶ್ ಬಳಕೆ ಮಾಡಿ, ಚೆನ್ನಾಗಿ ಮುಖ ಕ್ಲೀನ್ ಮಾಡಿ. 
 

Tap to resize

ಫೇಸ್ ಟೋನರ್ (face toner)

ಅಂದಹಾಗೆ, ನೀವು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಫೇಸ್ ಟೋನರ್ ಗಳನ್ನು ಕಾಣಬಹುದು, ಆದರೆ ನೀವು ಟೋನರ್ ಗಾಗಿ ರೋಸ್ ವಾಟರ್ ಸಹ ಬಳಸಬಹುದು. ಇದು ಮುಖಕ್ಕೆ ಕಾಂತಿ ನೀಡಲು ಸಹಾಯ ಮಾಡುತ್ತೆ. ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಇರೋದಿಲ್ಲ. 
 

ಫೇಸ್ ಸೀರಮ್(face serum)

ಫೇಸ್ ಸೀರಮ್ ಅನ್ನು ಎಂದಿಗೂ ನೇರವಾಗಿ ಮುಖದ ಮೇಲೆ ಹಚ್ಚಬಾರದು, ಮೊದಲನೆಯದಾಗಿ, ಅದರ ಕೆಲವು ಹನಿಗಳನ್ನು ಕೈಗಳಲ್ಲಿ ತೆಗೆದುಕೊಂಡು ಅದನ್ನು ಮಸಾಜ್ ಮಾಡಿ ಮುಖಕ್ಕೆ ಹಚ್ಚಿ. ಇದನ್ನು ಮಾಡುವುದರಿಂದ, ಮುಖದ ಸೀರಮ್ ಚರ್ಮದ ಒಳಗೆ ಸುಲಭವಾಗಿ ಹೋಗುತ್ತದೆ.  

ಮಾಯಿಶ್ಚರೈಸರ್ (moisturiser)

ಇದಕ್ಕಾಗಿ, ನಿಮ್ಮ ಚರ್ಮಕ್ಕೆ ಅನುಗುಣವಾಗಿ ನೀವು ಯಾವುದೇ ಉತ್ತಮ ಬ್ರಾಂಡ್ ಮಾಯಿಶ್ಚರೈಸರ್ ಆಯ್ಕೆ ಮಾಡಬಹುದು. ಚರ್ಮವು ಎಣ್ಣೆಯುಕ್ತವಾಗಿದ್ದರೆ, ನೀವು ಕ್ರೀಮ್ ಆಧಾರಿತ ಉತ್ಪನ್ನಗಳ ಬದಲಿಗೆ ಜೆಲ್ ಆಧಾರಿತ ಉತ್ಪನ್ನಗಳನ್ನು ಬಳಸಬೇಕು. ಒಟ್ಟಲ್ಲಿ ಮುಖಕ್ಕೆ ಮಾಯಿಶ್ಚರೈಸ್ ಮಾಡೋದನ್ನು ಮಾತ್ರ ಮರೆಯಬೇಡಿ.

ಅಂಡರ್ ಐ ಕ್ರೀಮ್ (under eye cream)

ಮುಖ ಮತ್ತು ಕಣ್ಣುಗಳ ಸುತ್ತಲಿನ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಮುಖದ ಚರ್ಮಕ್ಕೆ ಹೋಲಿಸಿದರೆ ಕಣ್ಣಿನ ಕೆಳಗಿನ ಚರ್ಮದ ಪಿಎಚ್ ಮಟ್ಟವು ವಿಭಿನ್ನವಾಗಿರುತ್ತದೆ ಮತ್ತು ಕಣ್ಣಿನ ಕೆಳಗಿನ ಪ್ರದೇಶವೂ ತುಂಬಾ ಸೂಕ್ಷ್ಮವಾಗಿರುತ್ತದೆ. ಆದುದರಿಂದ ಅಂಡರ್ ಐ ಕ್ರೀಮ್ ಬಳಕೆ ಮಾಡೊದನ್ನು ಮರೆಯಬೇಡಿ.
 

ಮೇಕಪ್ ಪ್ರೈಮರ್ (face primer)

ಕೊನೆಯ, ಆದರೆ ಅತ್ಯಂತ ಪ್ರಮುಖ ಹಂತವೆಂದರೆ ಮೇಕಪ್ ಪ್ರೈಮರ್. ತ್ವಚೆಯ ಟೆಕ್ಸ್ಚರ್ ಡಲ್ ಆಗಿಸಲು ಪ್ರೈಮರ್ ಬಳಸಲಾಗುತ್ತದೆ. ಇದು ಮೇಕಪ್ ಅನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಸಹಾಯ ಮಾಡುವಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ, ಮೇಕಪ್ ನಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮದ ರಂಧ್ರಗಳು ಅಥವಾ ಚರ್ಮಕ್ಕೆ ಯಾವುದೇ ಹಾನಿ ಮಾಡದಂತೆ ಒಂದು ಲೇಯರ್ ಸೃಷ್ಟಿಸುತ್ತೆ.

ಫೇಸ್ ಆಯಿಲ್ (face oil)

ಮೇಕಪ್ ಮಾಡಿದ ನಂತರ ಮುಖದಲ್ಲಿ ಹೊಳಪು ಬರಬೇಕು ಎಂದಾದ್ರೆ ನೀವು ಫೇಸ್ ಆಯಿಲ್ ಬಳಸಬೇಕು. ಅಲ್ಲದೆ, ನೀವು ಬಯಸಿದರೆ, ಅದರ 1 ರಿಂದ 2 ಹನಿಗಳನ್ನು ನಂತರ ಫೌಂಡೇಶನ್ ಗೆ ಸೇರಿಸಬಹುದು. ಇದರಿಂದ ಮುಖಕ್ಕೆ ಹೆಚ್ಚಿನ ಗ್ಲೋ ಬರುತ್ತೆ.

Latest Videos

click me!