ಜಮ್ಮು ಮತ್ತು ಕಾಶ್ಮೀರದ ಸರ್ಗಮ್ ಕೌಶಲ್ (Sargam Koushal) ಅವರು 21 ವರ್ಷಗಳ ನಂತರ ಭಾರತಕ್ಕೆ ಮಿಸೆಸ್ ವರ್ಲ್ಡ್ (Mrs.World) ಪಟ್ಟವನ್ನು ಮರಳಿ ತಂದಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆದ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ 63 ದೇಶಗಳ ಮಹಿಳೆಯರನ್ನು ಸೋಲಿಸಿ ಸರ್ಗಮ್ ಕೌಶಲ್ ಮಿಸೆಸ್ ವರ್ಲ್ಡ್ ಕಿರೀಟವನ್ನು ಗೆದ್ದಿದ್ದಾರೆ. ಮಿಸೆಸ್ ಇಂಡಿಯಾ ಸ್ಪರ್ಧೆಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸರ್ಗಮ್ ಕೌಶಲ್ ವಿಜಯದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 21 ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ಡಾ. ಅದಿತಿ ಗೋವಿತ್ರಿಕರ್ ಅವರು ಭಾರತಕ್ಕೆ ಗೆದ್ದಿದ್ದರು .
ಸರ್ಗಮ್ ಕೌಶಲ್ ಪ್ರಶಸ್ತಿಯನ್ನು ಪಡೆದುಕೊಂಡ ನಂತರ ತಮ್ಮ ದೇಶವಾಸಿಗಳೊಂದಿಗೆ ಸಂತೋಷವನ್ನು ಹಂಚಿಕೊಂಡರು. ಕೌಶಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪ್ರಶಸ್ತಿ ಗೆದ್ದ ನಂತರ ಎಷ್ಟು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
210
ಗೆಲುವಿನ ಖುಷಿಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ದೀರ್ಘ ಕಾಯುವಿಕೆ ಮುಗಿದಿದೆ. 21 ವರ್ಷಗಳ ನಂತರ ಕ್ರೌನ್ ಮರಳಿದೆ ಎಂದು ಸರ್ಗಮ್ ಕೌಶಲ್ ಫೋಟೋಗಳ ಜೊತೆ ಬರೆದಿದ್ದಾರೆ.
310
32 ವರ್ಷದ ಸರ್ಗಮ್ ಕೌಶಲ್ ಉನ್ನತ ಶಿಕ್ಷಣ ಪಡೆದ ಮಹಿಳೆ. ಇಂಗ್ಲಿಷ್ ಸಾಹಿತ್ಯದಲ್ಲಿ ಪಿಜಿ ಮಾಡಿದ್ದಾರೆ ಮತ್ತು ಈ ಹಿಂದೆ ಅವರು ವಿಶಾಖಪಟ್ಟಣಂನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ.
410
ಸರ್ಗಮ್ 2018 ರಲ್ಲಿ ವಿವಾಹವಾದರು ಮತ್ತು ಅವರ ಪತಿ ಭಾರತೀಯ ನೌಕಾಪಡೆಯಲ್ಲಿದ್ದಾರೆ.ಮದುವೆಯ ನಂತರವೂ ಸರ್ಗಂ ಕೌಶಲ್ ತನ್ನ ಕನಸನ್ನು ಕೈ ಬಿಡಲಿಲ್ಲ. ಮದುವೆಯ ನಂತರವೂ ಮಾಡೆಲಿಂಗ್ ಮುಂದುವರಿಸಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
510
ಮೊದಲು ಶಿಕ್ಷಕರಾಗಿದ್ದ ಸರ್ಗಮ್ ಹಾಟ್ ಹಾಗೂ ಫಿಟ್ ಆಗಿದ್ದಾರೆ. ಅವರ Instagram ಖಾತೆಯಲ್ಲಿ ಸಾಕಷ್ಟು ಮನಮೋಹಕ ಮತ್ತು ಬೋಲ್ಡ್ ಫೋಟೋಗಳನ್ನು ನೋಡಬಹುದು.
610
ಸರ್ಗಮ್ ಕೌಶಲ್ ವೃತ್ತಿಯಲ್ಲಿ ಮಾಡೆಲ್ ಹಾಗೂ ಟೀಸರ್. ಜಮ್ಮು ಮತ್ತು ಕಾಶ್ಮೀರದ ನಿವಾಸಿ ಸರ್ಗಮ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
710
ಸರ್ಗಮ್ ಕೌಶಲ್ ತನ್ನ ಯಶಸ್ಸಿನ ಶ್ರೇಯವನ್ನು ತನ್ನ ಪತಿಗೆ ನೀಡುತ್ತಾರೆ. ಪತಿಯ ಬೆಂಬಲದಿಂದಲೇ ಇಂದು ಈ ಸ್ಥಾನ ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ
810
ಸರ್ಗಮ್ ತನ್ನ ಕೆಲಸವಿದ್ದಾಗ ಮುಂಬೈನಲ್ಲಿ ವಾಸಿಸುತ್ತಾರೆ. ಅಲ್ಲಿಯೂ ಅವರಿಗೆ ಮನೆಯೊಂದು ಇದೆ. ವರದಿಗಳ ಪ್ರಕಾರ ಸರ್ಗಮ್ಮನರಂಜನಾ ಉದ್ಯಮದ ಹಲವಾರು ತಜ್ಞರೊಂದಿಗೆ ಸಂವಾದ ನಡೆಸಿದ್ದರು. ಅವರಿಂದ rampನಲ್ಲಿ ಹೇಗೆ ನಡೆಯಬೇಕು ಎಂಬ ಮಾಹಿತಿ ಮತ್ತು ಫಿಟ್‌ನೆಸ್ ತರಬೇತಿ (Fitness Training) ಪಡೆದಿದ್ದಾರೆ.
910
21 ವರ್ಷಗಳ ಹಿಂದೆ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದರು. ಗೆದ್ದ ನಂತರ, ಅದಿತಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು, ಆದರೆ ಅವರು ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ.
1010
ಮಿಸೆಸ್ ವರ್ಲ್ಡ್ ಸ್ಪರ್ಧೆಯನ್ನು 1984 ರಲ್ಲಿ ಪ್ರಾರಂಭಿಸಲಾಯಿತು. ಈ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ಮಾತ್ರ ಭಾಗವಹಿಸುತ್ತಾರೆ. ಆರಂಭದಲ್ಲಿ ಈ ಸ್ಪರ್ಧೆಯನ್ನು ಮಿಸೆಸ್ ವುಮನ್ ಆಫ್ ದಿ ವರ್ಲ್ಡ್ ಎಂದು ಹೆಸರಿಸಲಾಗಿತ್ತು.