ಸ್ಟೈಲಿಶ್, ಕಂಫರ್ಟಬಲ್ ಲುಕ್ ಗಾಗಿ ಹುಡುಗರ ಶರ್ಟ್ ಹಾಕಿ ನೋಡಿ!

Published : Jun 04, 2022, 05:13 PM IST

ಈಗನ  ಹುಡುಗಿಯರು ಮನೆಯಲ್ಲಿ ಆರಾಮದಾಯಕ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಅದು ಔಟಿಂಗ್ ಇರಲಿ ಅಥವಾ ಮನೆಯಲ್ಲಿ ಆರಾಮವಾಗಿ ಇರೋದು ಇರಲಿ, ಡ್ರೆಸ್ ಮಾತ್ರ ತುಂಬಾನೆ ಫ್ರೀ ಆಗಿರಬೇಕು. ನೀವು ಮನೆಯಲ್ಲಿ ಆರಾಮದಾಯಕ ಮತ್ತು ಮುದ್ದಾದ ಲುಕ್ ಪಡೆಯಲು ಬಯಸಿದ್ರೆ ನೀವು ಸಹೋದರ ಅಥವಾ ತಂದೆಯ ಬಟ್ಟೆಗಳನ್ನು ಸಹ ಧರಿಸಬಹುದು.

PREV
15
ಸ್ಟೈಲಿಶ್, ಕಂಫರ್ಟಬಲ್ ಲುಕ್ ಗಾಗಿ ಹುಡುಗರ ಶರ್ಟ್ ಹಾಕಿ ನೋಡಿ!

ಹೌದು, ನಾವೇನು ಸುಳ್ಳು ಹೇಳ್ತಿಲ್ಲಾಪ್ಪಾ, ಬಾಯ್ ಫ್ರೆಂಡ್ ಶರ್ಟ್ ಅನ್ನೋದು ಮಾತ್ರ ನಿಮಗೆ ಗೊತ್ತಿರಬಹುದು, ಆದ್ರೆ ನಿಮ್ಮ ಪತಿ, ಸಹೋದರ ಮತ್ತು ತಂದೆಯ ಬಟ್ಟೆಗಳೊಂದಿಗೆ ನೀವು ಸ್ಟೈಲಿಶ್ ಮತ್ತು ಕಂಫರ್ಟೇಬಲ್ ಲುಕ್ ಪಡೆಯಬಹುದು. ಅಪ್ಪ, ಸಹೋದರ ಮತ್ತು ಗಂಡನ ಡ್ರೆಸ್ ನ್ನು ಹೇಗೆ ಸ್ಟೈಲಿಶ್(Stylish) ಆಗಿ ಧರಿಸೋದು ಎಂದು ತಿಳಿಯೋಣ.

25

ಜೀನ್ಸ್ ನೊಂದಿಗೆ ಲೂಸ್ ಟಿ-ಶರ್ಟ್(Loose Tshirt) ಹೀಗೆ ಸ್ಟೈಲ್ ಮಾಡಿ 
ಕೂಲ್ ಮತ್ತು ಸ್ಟೈಲಿಶ್ ಲುಕ್ ಗಾಗಿ ನೀವು ಜೀನ್ಸ್ ನೊಂದಿಗೆ ಲೂಸ್ ಟಿ-ಶರ್ಟ್ ಧರಿಸಬಹುದು. ಈ ದಿನಗಳಲ್ಲಿ ಲೂಸ್ ಆದ ಟಿ-ಶರ್ಟ್ ಗಳು ಸಹ ಸಾಕಷ್ಟು ಟ್ರೆಂಡ್ ನಲ್ಲಿವೆ. ಆರಾಮದಾಯಕ ಮತ್ತು ಸ್ಟನ್ನಿಂಗ್ ಸ್ಟೈಲ್ ಗಾಗಿ ಜೀನ್ಸ್ ನೊಂದಿಗೆ, ನಿಮ್ಮ ಸಹೋದರನ ಅಥವಾ ಅಪ್ಪನ ಲೂಸ್  ಟಿ-ಶರ್ಟ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ. 

35

ವೈಟ್ ಶರ್ಟ್(White shirt)
ಅಪ್ಪ ಅಥವಾ ಸಹೋದರನ ಬಿಳಿ ಶರ್ಟ್ ನೊಂದಿಗೆ, ನೀವು ಸ್ಟೈಲಿಶ್ ಲುಕ್ ಹೊಂದಬಹುದು. ನೀವು ಬಿಳಿ ಶರ್ಟ್ ಅನ್ನು ಸ್ಕರ್ಟ್ ನೊಂದಿಗೆ ಸ್ಟೈಲ್ ಮಾಡಬಹುದು. ಚಳಿಗಾಲದಲ್ಲಿ ಕ್ರಾಪ್ ಸ್ವೆಟರ್ ಮತ್ತು ಬಿಳಿ ಸ್ನೀಕರ್ ಅನ್ನು ವೈಟ್ ಶರ್ಟ್ ನೊಂದಿಗೆ ಕಂಬೈನ್ ಮಾಡುವ ಮೂಲಕ ಸ್ಟೈಲಿಶ್ ಆಗಿ ಕಾಣಬಹುದು.

45

ಡೆನಿಮ್ ಶರ್ಟ್ (Denim shirt)
ನೀವು ನಿಮ್ಮ ಸಹೋದರನ ಡೆನಿಮ್ ಶರ್ಟ್ ಗಳನ್ನು ಜಾಕೆಟ್ ನಂತೆ ಸ್ಟೈಲ್ ಮಾಡಬಹುದು. ಬಿಳಿ ಶರ್ಟ್ ಜೊತೆ ಜಾಕೆಟ್ ನಂತೆ ನೀಲಿ ಜೀನ್ಸ್ ಇರುವ ಡೆನಿಮ್ ಶರ್ಟ್ ಟ್ರೈ ಮಾಡಬಹುದು. ನೀವು ಲೂಸ್ ಶರ್ಟ್ ನೊಂದಿಗೆ ಡೆನಿಮ್ ಶರ್ಟ್ ಅನ್ನು ಸಹ ಒಮ್ಮೆ ಸ್ಟೈಲ್ ಮಾಡಿ ನೋಡಿ.

55

ಓವರ್ ಸೈಜ್ ಟೀ ಶರ್ಟ್ (Over size Tshirt)
ಲೂಸ್  ಶರ್ಟ್ ಧರಿಸಿ ಸ್ಟನ್ನಿಂಗ್ ಮತ್ತು ಬ್ಯೂಟಿಫುಲ್ ಲುಕ್ ಪಡೆಯಲು, ನೀವು ಓವರ್ ಸೈಜ್ ಟಿ-ಶರ್ಟ್ ನ ಟಾಪ್ ನಂತೆ ಹಾಕಬಹುದು. ಓವರ್-ಸೈಜ್ ಟಿ-ಶರ್ಟ್ ನೊಂದಿಗೆ, ನೀವು ಓವರ್-ಸೈಜ್ ಶರ್ಟ್ ಅನ್ನು ಸ್ಟೈಲ್ ಮಾಡಬಹುದು. ಇದು ನಿಮಗೆ ಸ್ಟೈಲಿಶ್ ಮಾತ್ರವಲ್ಲದೆ ಆರಾಮದಾಯಕ ಲುಕ್ ನೀಡುತ್ತೆ. ಹೌಸ್ ಪಾರ್ಟಿಯ ಸಮಯದಲ್ಲಿ ನೀವು ಈ ಲುಕ್ ನಿಂದ ಸಹ ಸ್ಟೈಲ್ ಮಾಡಬಹುದು.

Read more Photos on
click me!

Recommended Stories