ಆದಾಗ್ಯೂ, ಲಿಪ್ ಸ್ಟಿಕ್ (Lipstick) ಹಚ್ಚುವಾಗ ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸರಿಯಾದ ರೀತಿಯಲ್ಲಿ ಲಿಪ್ ಸ್ಟಿಕ್ ಹಚ್ಚುವುದು ಒಂದು ಕಲೆ. ಅದನ್ನು ಪರ್ಫೆಕ್ಟ್ ಆಗಿ ಹಚ್ಚಲು, ನಿಮಗೆ ಟೆಕ್ನಿಕ್ (Technic) ಮತ್ತು ಪ್ರಾಕ್ಟೀಸ್ ಅಗತ್ಯ. ನೀವು ಮೊದಲ ಬಾರಿಗೆ ಲಿಪ್ ಸ್ಟಿಕ್ ಮತ್ತು ಲಿಪ್ ಕಲರ್ (Lip Color) ಹಚ್ಚೋರಾಗಿದ್ರೆ, ಇಲ್ಲಿದೆ ನೋಡಿ ಅಗತ್ಯ ಸಲಹೆಗಳು. ಇದರ ಸಹಾಯದಿಂದ ನೀವು ಈ ಆರ್ಟ್ ನ ಮಾಸ್ಟರ್ ಆಗುತ್ತೀರಿ.
ನಿಮ್ಮ ಲಿಪ್ ಸ್ಟಿಕ್ (Lipstick) ಬೇಗ ಹಾಳಾದರೆ ಅಥವಾ ಹರಡಿದರೆ ಅಥವಾ ನಿಮ್ಮ ಹಲ್ಲುಗಳಲ್ಲಿ (Teeth) ಸಿಲುಕಿಕೊಂಡರೆ, ನೀವು ಸರಿಯಾಗಿ ಲಿಪ್ ಸ್ಟಿಕ್ ಹಚ್ಚಿಲ್ಲ ಎಂದರ್ಥ. ಹಾಗಿದ್ರೆ ಬನ್ನಿ ಲಿಪ್ ಸ್ಟಿಕ್ ಹಚ್ಚಲು ಪರ್ಫೆಕ್ಟ್ ಸ್ಸ್ಟೈಲ್ ಯಾವುದು ಎಂದು ತಿಳಿದುಕೊಳ್ಳೋಣ.
ಹಂತ 1: ಲಿಪ್ ಸ್ಟಿಕ್ ಗಾಗಿ ನಿಮ್ಮ ತುಟಿಗಳನ್ನು ಸಿದ್ಧಪಡಿಸಿಕೊಳ್ಳಿ
ಲಿಪ್ ಸ್ಟಿಕ್ ಹಚ್ಚುವ ಮೊದಲು ಯಾವಾಗಲೂ ಲಿಪ್ ಸ್ಟಿಕ್ ಗಾಗಿ ತುಟಿಗಳನ್ನು ಸಿದ್ಧಪಡಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ನಿಮ್ಮ ತುಟಿಗಳು ಡ್ರೈ ಆಗಿ ಮತ್ತು ಬಿರುಕು ಬಿಟ್ಟಂತೆ ಕಾಣುತ್ತವೆ. ಇದಕ್ಕಾಗಿ, ಲೈಟ್ ವೇಟ್ ಆಗಿರುವ ಒದ್ದೆಯಾದ ಮೃದುವಾದ ಟೂತ್ ಬ್ರಷ್ ನ(Toothbrush) ಸಹಾಯದಿಂದ ತುಟಿಗಳನ್ನು ಎಕ್ಸ್ ಫೋಲಿಯೇಟ್ ಮಾಡಿ.
ಅದರ ನಂತರ, ತುಟಿಗಳು ಮೃದುವಾಗಲು ಮತ್ತು ಆರೋಗ್ಯಕರವಾಗಿ ಕಾಣಲು ಮೊದಲಿಗೆ ನೀವು ಲಿಪ್ ಬಾಮ್ ಅನ್ನು(Lip balm) ಹಚ್ಚಿ. ಇದರ ನಂತರ, ನೀವು ಲಿಪ್ ಪ್ರೈಮರ್ ಅನ್ನು ಸಹ ಹಚ್ಚಬಹುದು, ಇದರಿಂದ ಲಿಪ್ ಸ್ಟಿಕ್ ದೀರ್ಘಕಾಲದವರೆಗೆ ಉಳಿಯುತ್ತದೆ ಮತ್ತು ಹರಡುವುದಿಲ್ಲ. ನಿಮ್ಮ ಲುಕ್ ಕೂಡ ಚೆನ್ನಾಗಿ ಕಾಣುತ್ತೆ.
ಹಂತ -2: ಲಿಪ್ ಸ್ಟಿಕ್ ಹಚ್ಚುವ ಮೊದಲು ಕನ್ಸೀಲರ್ ನ(Concealer) ಬೇಸ್ ಹಚ್ಚಿಕೊಳ್ಳಿ
ತುಟಿಗಳ ಬಣ್ಣದ ಟೋನ್ ಬಗ್ಗೆ ನೀವು ಯೋಚನೆ ಮಾಡುತ್ತಿದ್ದರೆ, ಲಿಪ್ ಸ್ಟಿಕ್ ಬಣ್ಣವು ನಿಮ್ಮ ತುಟಿಗಳ ಮೇಲೆ ಪರಿಪೂರ್ಣವಾಗುವಂತೆ ಕನ್ಸೀಲರ್ ನ ತಳವನ್ನು ಮೊದಲು ಬಳಕೆ ಮಾಡೋದು ಉತ್ತಮ. ನಿಮ್ಮ ತುಟಿಗಳಿಗೆ ಅನುಗುಣವಾಗಿ ಕನ್ಸೀಲರ್ ಆರಿಸಿ ಮತ್ತು ಚಪ್ಪಟೆಯಾದ ಬ್ರಶ್ ನಿಂದ ಹಚ್ಚಿ. ಅಲ್ಲದೆ ಅದರ ಮೇಲೆ ಕಾಂಪ್ಯಾಕ್ಟ್ ಹಚ್ಚಿ, ಇದರಿಂದ ಬೇಸ್ ಅನ್ನು ಸೀಲ್ ಮಾಡಬಹುದು. ಇದು ತುಟಿಯ ಬಣ್ಣವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುತ್ತದೆ.
ಹಂತ 3: ಪರ್ಫೆಕ್ಟ್ ತುಟಿಯ ಆಕಾರಕ್ಕಾಗಿ ಲಿಪ್ ಲೈನರ್(Lip liner) ಬಳಸಿ
ನೈಸರ್ಗಿಕ ಲಿಪ್ ಲೈನ್ ಅನ್ನು ಡಿಫೈನ್ ಮಾಡಲು ಮತ್ತು ಲಿಪ್ ಸ್ಟಿಕ್ ಹರಡದಂತೆ ತಡೆಯಲು ಯಾವಾಗಲೂ ಉತ್ತಮ ಲಿಪ್ ಲೈನರ್ ಬಳಸಿ. ಲಿಪ್ ಲೈನರ್ಸ್ ತುಟಿಗಳನ್ನು ಡಿಫೈನ್ ಮಾಡಲು, ರಿ ಶೇಪ್ ಮಾಡಲು ಮತ್ತು ಆಕಾರವನ್ನು ನೀಡಲು ಕಾರಣವಾಗುತ್ತವೆ. ನಿಮ್ಮ ಸ್ಕಿನ್ ಟೋನ್ ಮತ್ತು ಲಿಪ್ ಸ್ಟಿಕ್ ಬಣ್ಣಕ್ಕೆ ಅನುಗುಣವಾಗಿ ಲಿಪ್ ಲೈನರ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಲಿಪ್ ಲೈನ್ ಗೆ ಹಚ್ಚಿ. ನಂತರ ಅದರೊಳಗೆ ಲಿಪ್ ಸ್ಟಿಕ್ ಹಚ್ಚಿದ್ರೆ ಚೆನ್ನಾಗಿ ಕಾಣಿಸುತ್ತೆ.
ನಿಮ್ಮ ಲೈನ್ ನೇರವಾಗಿಲ್ಲದಿದ್ದರೆ, ಚಿಂತಿಸಬೇಡಿ, ಅದನ್ನು ಲಿಪ್ ಸ್ಟಿಕ್ ನಿಂದ ಮುಚ್ಚಿ.
ಹಂತ 4: ನಿಮ್ಮ ಆಯ್ಕೆಯ ಲಿಪ್ ಸ್ಟಿಕ್ ಹಚ್ಚಿ
ನೀವು ಮೇಲಿನ ಮೂರು ಹಂತಗಳನ್ನು ಫಿನಿಶ್ ಮಾಡಿದ್ರೆ, ಬಳಿಕ ನಿಮ್ಮ ಆಯ್ಕೆಯ ಲಿಪ್ ಸ್ಟಿಕ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ಲಿಪ್ ಬ್ರಶ್ ಸಹಾಯದಿಂದ ಚೆನ್ನಾಗಿ ಹಚ್ಚಿ. ಒಳಗಿನ ಮೂಲೆಯನ್ನು ಮರೆಯಬೇಡಿ. ಲಿಪ್ ಸ್ಟಿಕ್ ನ ಒಂದು ಕೋಟ್ ಸಾಕಾಗುವುದಿಲ್ಲ, ಆದ್ದರಿಂದ ಇನ್ನೊಂದನ್ನು ಸಹ ಹಚ್ಚಿ. ನಿಮ್ಮ ತುಟಿಗಳು ಒರಟಾಗಿದ್ದರೆ, ಮ್ಯಾಟ್ ಲಿಪ್ ಸ್ಟಿಕ್ ಅನ್ನು ಹಚ್ಚಬೇಡಿ ಏಕೆಂದರೆ ಇದು ತುಟಿಗಳನ್ನು ಒಣಗಿಸುತ್ತದೆ. ಮಾಯಿಶ್ಚರೈಸಿಂಗ್ ಲಿಪ್ ಸ್ಟಿಕ್ ಆಯ್ಕೆ ಮಾಡುವುದು ಉತ್ತಮ, ಇದು ತುಟಿಗಳನ್ನು ದೀರ್ಘ ಕಾಲದವರೆಗೆ ಹೈಡ್ರೇಟ್ (Hydrate) ಆಗಿರಿಸುತ್ತದೆ.
ಹಂತ 5: ಡೆಫಿನೇಷನ್ (Defination)
ಲಿಪ್ ಸ್ಟಿಕ್ ಹಚ್ಚುವಾಗ, ಪರ್ಫೆಕ್ಟ್ ಲುಕ್‌ಗಾಗಿ ತುಟಿಗಳ ಸುತ್ತಲೂ ಕನ್ಸೀಲರ್ ಹಚ್ಚಿ. ಇದಕ್ಕಾಗಿ, ಒಂದು ಸಣ್ಣ ಬ್ರಶ್ ಅನ್ನು ತೆಗೆದುಕೊಂಡು ತುಟಿಗಳ ಬದಿಗೆ ಕನ್ಸೀಲರ್ ಅನ್ನು ಹಚ್ಚಬಹುದು. ಇದನ್ನು ಯಾವಾಗಲೂ ಮಾಡುವ ಅಗತ್ಯವಿಲ್ಲ. ಈ ಸ್ಟೆಪ್ ಇಲ್ಲದೆಯೂ, ತುಟಿಯು ಪರ್ಫೆಕ್ಟ್ ಆಗಿ ಕಾಣುತ್ತೆ. ನೀವು ಬಯಸಿದರೆ ಲಿಪ್ ಸ್ಟಿಕ್ ನ ಮೇಲೆ ಲಿಪ್ ಗ್ಲೋಸ್ ಅನ್ನು ಸಹ ಹಚ್ಚಬಹುದು.