ವಿಚಿತ್ರ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಕೇಕ್ನಿಂದ ಮಾಡಿದ ಡ್ರೆಸ್ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ತಾನು ಪ್ರಸಿದ್ಧಿ ಮತ್ತು ಹಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಉರ್ಫಿ.
ಉರ್ಫಿ ಜಾವೇದ್ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡುವ ನಟಿ ಈಕೆ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ.
26
ಡ್ರೆಸ್ ಗುಟ್ಟು ರಟ್ಟು
ಅಷ್ಟಕ್ಕೂ, ನಟಿ ತಮ್ಮ ಬಟ್ಟೆ, ಡ್ರೆಸ್ ಸೆನ್ಸ್, ಟೀಕೆ ಸೇರಿದಂತೆ ತಮ್ಮ ಜೀವನದಲ್ಲಿ ಹಣ ಎಷ್ಟು ಮಹತ್ವದ್ದು ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾನು ಏನೇ ಮಾಡಿದರೂ ಅದು ನನ್ನ ಸಲುವಾಗಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾವುದೇ ಹೆಣ್ಣುಮಕ್ಕಳನ್ನು ಮೆಚ್ಚಿಸುವ ಉದ್ದೇಶವೂ ನನಗೆ ಇಲ್ಲ, ಯಾವುದೇ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವೂ ಇಲ್ಲ ಎಂದಿದ್ದರು.
36
ಶ್ರೀಮಂತೆ ಆಗಬೇಕು
ನಾನು ಇದನ್ನು ಫೇಮಸ್ ಆಗಲು ಮತ್ತು ಶ್ರೀಮಂತೆ ಆಗುವುದಕ್ಕಾಗಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ನೋಡಿ ಯಾರೂ ಮೆಚ್ಚಿಕೊಳ್ಳಬೇಕಾದದ್ದೂ ಇಲ್ಲ ಎಂದಿದ್ದರು ಉರ್ಫಿ.
ಇದೀಗ ನಟಿ ಸಂಪೂರ್ಣ ಕೇಕ್ ಇರುವ ಡ್ರೆಸ್ ಒಂದನ್ನು ಧರಿಸಿ ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಆ ಕೇಕ್ನ ಒಂದು ಭಾಗವನ್ನು ಕಟ್ ಮಾಡಿ ಬಂದವರಿಗೆ ತಿನ್ನಲು ಕೊಟ್ಟಿದ್ದಾರೆ. ಅಯ್ಯಯ್ಯೋ ಪೂರ್ತಿ ಕೊಟ್ಟರೆ ಏನ್ ಗತೀನಪ್ಪಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಅಂದಹಾಗೆ ಹುಟ್ಟುಹಬ್ಬಕ್ಕೆ ಈ ರೀತಿಯ ಡ್ರೆಸ್ ಧರಿಸಿ ಬಂದಿದ್ಧಾರೆ ನಟಿ.
56
ಹೆಚ್ಚು ಹಣ ಬೇಕು
ಅಷ್ಟಕ್ಕೂ, ನಟಿ ಇದಾಗಲೇ ತಮಗೆ ಹಣ ಹೆಚ್ಚು ಬೇಕು ಎಂದು ಮಾತನಾಡಿದ್ದರು. ಹೆಚ್ಚು ಹಣ ಬಂದ ತಕ್ಷಣ ಏನು ಮಾಡುವಿರಿ ಎನ್ನುವ ಪ್ರಶ್ನೆಗೆ ಉರ್ಫಿ, ನಾನು ರಾಯ್ಸ್ರಾಯ್ ಕಾರು ಖರೀದಿ ಮಆಡುತ್ತೇನೆ. ಇದು ನನ್ನ ಆಸೆ ಎಂದಿದ್ದಾರೆ. ಇದೇ ವೇಳೆ, ನಾನು ಹಣವನ್ನು ತುಂಬಾ ಇಷ್ಟಪಡುತ್ತೇನೆ. ಹಣ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಹಣಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಹಣ ಇದ್ದರೆ ಸುಖ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.
66
ಭಾರಿ ಸದ್ದು ಮಾಡಿದ್ದ ನಟಿ
ಕೆಲವು ದಿನಗಳ ಹಿಂದೆ ನಟಿ ಭಾರಿ ಸದ್ದು ಮಾಡಿದ್ದರು. ಇದಕ್ಕೆ ಕಾರಣ ನಟಿ, ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಸೆ*ಕ್ಸ್ ಮಾಡಿಲ್ಲ ಎಂದು ಸುದ್ದಿಯಾಗಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.