Lightweight Mangalsutra Designs 2026: ಮಹಿಳೆಯರು ಇತ್ತೀಚೆಗೆ ಸಿಂಪಲ್, ಹಗುರವಾದ ಹಾಗೂ ಸ್ಟೈಲೀಶ್ ಮಾಂಗಲ್ಯ ಸರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಫೋಟೋ ಗ್ಯಾಲರಿಯಲ್ಲಿ ದಿನನಿತ್ಯದ ಬಳಕೆಗೆ ಸೂಕ್ತವಾದ ಜನಪ್ರಿಯ ಡಿಸೈನ್ಗಳನ್ನು ನೋಡಬಹುದು.
ಎಲ್ಲಾ ಕಾಲಕ್ಕೂ ಮಾಂಗಲ್ಯ ಸರದ ಡಿಸೈನ್ಗಳು ಜನಪ್ರಿಯ. ಬನ್ನಿ, ಕೆಲವು ಹೊಸ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.
26
ಬೆಲೆಯೂ ಕಡಿಮೆ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಿಂಪಲ್ ಹಾಗೂ ಎಲಿಗೆಂಟ್ ಡಿಸೈನ್ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಗುರವಾದ ಸರದ ಜೊತೆ ಚಿಕ್ಕ ಚಿನ್ನದ ಪೆಂಡೆಂಟ್ ಕತ್ತಿನಲ್ಲಿ ಸುಂದರವಾಗಿ ಕಾಣುತ್ತದೆ. ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಕಡಿಮೆ ತೂಕದಿಂದಾಗಿ ಬೆಲೆಯೂ ಕಡಿಮೆ ಇರುತ್ತದೆ.
36
ಸಾಂಪ್ರದಾಯಿಕ ಲುಕ್‌ಗೆ
ಸಾಂಪ್ರದಾಯಿಕ ಲುಕ್ ಇಷ್ಟಪಡುವವರಿಗೆ ಈ ಆಯ್ಕೆ ಉತ್ತಮ. ಇದರಲ್ಲಿ ಕ್ಲಾಸಿಕ್ ಕಪ್ಪು ಮಣಿಗಳನ್ನು ಬಳಸಲಾಗಿರುತ್ತದೆ. ಸಣ್ಣ ಹೂವಿನ ಅಥವಾ ಜಿಯೋಮೆಟ್ರಿಕ್ ಪೆಂಡೆಂಟ್ನೊಂದಿಗೆ ಇದು ಕಚೇರಿ ಮತ್ತು ಕ್ಯಾಶುಯಲ್ ಬಳಕೆಗೆ ಸೂಕ್ತವಾಗಿದೆ.
1 ಗ್ರಾಂ ಗೋಲ್ಡ್ ಮಾಂಗಲ್ಯ ಸರ ಜನಪ್ರಿಯ ಆಯ್ಕೆಯಾಗಿದೆ. ಇದು ಆಕರ್ಷಕ ಫಿನಿಶಿಂಗ್ ಮತ್ತು ಟ್ರೆಂಡಿ ವಿನ್ಯಾಸಗಳಲ್ಲಿ ಲಭ್ಯವಿದೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.
56
ಪಾರ್ಟಿ, ಫಂಕ್ಷನ್ಗಳಿಗೆ ಸೂಕ್ತ
ಗೋಲ್ಡ್ ಜೊತೆ ವೈಟ್ ಅಥವಾ ರೋಸ್ ಗೋಲ್ಡ್ ಕಾಂಬಿನೇಷನ್ನ ಮಾಂಗಲ್ಯ ಸರಗಳು ಸದ್ಯ ಟ್ರೆಂಡ್ನಲ್ಲಿವೆ. ಇವು ಮಾಡರ್ನ್ ಲುಕ್ ನೀಡುವುದಲ್ಲದೆ, ಪಾರ್ಟಿ ಮತ್ತು ಫಂಕ್ಷನ್ಗಳಿಗೆ ಸೂಕ್ತವಾಗಿವೆ. ಕಡಿಮೆ ತೂಕದಲ್ಲಿ ಸ್ಟೈಲಿಶ್ ಆಯ್ಕೆಗಳು ಇದರಲ್ಲಿ ಲಭ್ಯ.
66
ಶಾರ್ಟ್ ಚೈನ್ ಡಿಸೈನ್
ಉದ್ದನೆಯ ಸರ ಇಷ್ಟಪಡದವರಿಗೆ ಶಾರ್ಟ್ ಚೈನ್ ಡಿಸೈನ್ ಹೇಳಿ ಮಾಡಿಸಿದ್ದು. ಹಗುರವಾದ ತೂಕ, ಫ್ಯಾಶನಬಲ್ ಲುಕ್ನಿಂದಾಗಿ ಇದು ಕಾಲೇಜು ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.