ಬೆಲೆ ಹೆಚ್ಚಿದ್ರು ರಿಸ್ಕ್ ತೆಗೆದುಕೊಳ್ಳೋಕೆ ಹೆಣ್ಮಕ್ಳು ರೆಡಿ, ಚೆಂದ ಕಾಣಲು IV ಥೆರಪಿ ಮೊರೆ ಹೋದ ಬೆಂಗಳೂರಿಗರು

Published : Feb 25, 2026, 12:11 PM IST

Beauty Trend IV therapy : ಬೆಳ್ಳಗೆ ಕಾಣ್ಬೇಕು, ಹೊಳೆಯುವ ಚರ್ಮ ಇರ್ಬೇಕು, ವಯಸ್ಸಾಗಿದ್ದು ಕಾಣ್ಬಾರದು ಅಂತ ಜನರು ಏನೇನೋ ಬ್ಯೂಟಿ ಪ್ರಾಡಕ್ಟ್ ಬಳಸ್ತಾರೆ. ಈಗ ಬೆಂಗಳೂರಿನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದೇನು, ಖರ್ಚೆಷ್ಟು? ಮಾಹಿತಿ ಇಲ್ಲಿದೆ.

PREV
16
ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ IV ಥೆರಪಿ ಕೇಜ್

ವಯಸ್ಸು ಮರೆಮಾಚಿ ಹೊಳೆಯುವ ಚರ್ಮ ಪಡೆಯಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಸಿಲಿಕಾನ್ ಸಿಟಿಯಲ್ಲಿ ಈ ಬ್ಯೂಟಿ ಟ್ರೆಂಡ್ ಸದ್ದು ಮಾಡ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ನಿಧಾನವಾಗಿ ಈ ಬ್ಯೂಟಿ ಸಿಕ್ರೇಟ್ ಫಾಲೋ ಮಾಡಲು ಶುರು ಮಾಡ್ತಿದ್ದಾರೆ. ಇದ್ರಿಂದ ಬ್ಯೂಟಿ ಕ್ಲಿನಿಕ್ ಬ್ಯುಸಿಯಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ Glow Drip ಜಾಹೀರಾತನ್ನು ನೀವು ನೋಡಿರ್ಬಹುದು. ಮುಂಬೈ, ದೆಹಲಿಯಲ್ಲಿ ಮನೆ ಮಾತಾಗಿದ್ದ ಈ ಟ್ರೆಂಡ್ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಗ್ಲುಟಾಥಿಯೊನ್, ಕೊಲಾಜನ್ ಸೇರಿದಂತೆ ಪ್ರೋಟೀನ್ಗಳನ್ನು ನೇರವಾಗಿ ರಕ್ತಪ್ರವಾಹಕ್ಕೆ ಸೇರಿಸುವ IV ಥೆರಪಿ ಈಗ ವೆಲ್ಲ್ನೆಸ್ ಆಯ್ಕೆಯಾಗಿ ಮಾರಾಟವಾಗುತ್ತಿದೆ.

26
IV ಥೆರಪಿ ಹೆಗೆ ಕೆಲ್ಸ ಮಾಡುತ್ತದೆ?

ಹಿಂದೆ ಗ್ಲುಟಾಥಿಯೊನ್, ಕೊಲಾಜನ್ ಗಳನ್ನು ಟ್ಯಾಬ್ಲೆಟ್, ಪೌಡರ್, ಗಮ್ಮೀಸ್ ರೂಪದಲ್ಲಿ ತೆಗೆದುಕೊಳ್ಳಲಾಗುತ್ತಿತ್ತು.ಆದ್ರೆ IV ಥೆರಪಿಯಲ್ಲಿ ಪೋಷಕಾಂಶಗಳನ್ನು ನೇರವಾಗಿ ರಕ್ತಪ್ರವಾಹಕ್ಕೆ ಸೇರಿಸಲಾಗುತ್ತದೆ. ಕಾಲಜನ್ ದೇಹದ ನೈಸರ್ಗಿಕ ಅಂಟು. ಇದು ಚರ್ಮವನ್ನು ದೃಢವಾಗಿ, ಕೀಲುಗಳನ್ನು ನಮ್ಯವಾಗಿ ಮತ್ತು ಮೂಳೆಗಳನ್ನು ಬಲವಾಗಿಡುತ್ತದೆ. ಇದು ವಯಸ್ಸನ್ನು ಮುಚ್ಚಿಡುತ್ತದೆ. ಗ್ಲುಟಾಥಿಯೋನ್ ದೇಹದ ಸೂಪರ್ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಜೀವಕೋಶಗಳನ್ನು ರಕ್ಷಿಸುತ್ತದೆ. ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಚರ್ಮಕ್ಕೆ ಹೊಳಪು ನೀಡಿ, ಚರ್ಮದ ಆರೋಗ್ಯ ಕಾಪಾಡುತ್ತದೆ.

36
ಬೆಂಗಳೂರಿನ ಕ್ಲಿನಿಕ್ ಗೆ ಬಹು ಬೇಡಿಕೆ

ಬೆಂಗಳೂರಿನಲ್ಲಿ ಅನೇಕರು IV ಥೆರಪಿ ಮಾಡಿಸಿಕೊಳ್ತಿದ್ದಾರೆ. ದಿನಕ್ಕೆ ಸರಾಸರಿ 7 ರಿಂದ 10 ಮಂದಿ IV ಥೆರಪಿಗೆ ಬರ್ತಿದ್ದಾರೆ ಅಂತ ಕೆಲ ಕ್ಲಿನಿಕ್ ಮಾಹಿತಿ ನೀಡಿದೆ. ಮದುವೆ ಹಾಗೂ ಹಬ್ಬದ ಸೀಸನ್ ಗಳಲ್ಲಿ ಇದ್ರ ಸಂಖ್ಯೆ ಹೆಚ್ಚು. ಈ ಹಿಂದೆ 40 ರಿಂದ 50 ವರ್ಷದೊಳಗಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದರು. ಆದ್ರೀಗ ಎಲ್ಲ ವಯಸ್ಸಿನವರು IV ಥೆರಪಿ ಮಾಡಿಸಿಕೊಳ್ತಿದ್ದಾರೆ. ಕನಕಪುರ ರಸ್ತೆಯಲ್ಲಿರುವ ಕ್ಲಿನಿಕ್ ಒಂದು IV ಥೆರಪಿಗೆ ಆರಂಭಿಕ 10 ಸಾವಿರ ರೂಪಾಯಿ ಚಾರ್ಜ್ ಮಾಡ್ತಿದೆ. ಹ್ಯಾಂಗ್ ಓವರ್ ಡ್ರಿಪ್ ಕೂಡ ಇಲ್ಲಿ ಲಭ್ಯವಿದೆ. ಬೆಲೆಗಳು ಕ್ಲಿನಿಕ್ ಹಾಗೂ ಟ್ರಿಟ್ಮೆಂಟ್ ಗೆ ತಕ್ಕಂತೆ ಭಿನ್ನವಾಗಿರುತ್ತವೆ.

46
IV ಥೆರಪಿಗೆ ಎಷ್ಟು ಖರ್ಚು?

ಸಾಮಾನ್ಯವಾಗಿ ಒಂದು ಸೆಷನ್ ಗೆ 5 ಸಾವಿರದಿಂದ 30 ಸಾವಿರದವರೆಗೆ ಖರ್ಚಾಗುತ್ತದೆ. IV ಥೆರಪಿಗೆ ಒಳಗಾಗುವ ವ್ಯಕ್ತಿ 10 ಸೆಷನ್ ಅಟೆಂಡ್ ಮಾಡ್ಬೇಕು. ಕ್ಲಿಯರ್ ಸ್ಕಿನ್ ಡ್ರಿಪ್, ಫ್ಯಾಟ್ ಬರ್ನ್ ಡ್ರಿಪ್, ಪಿಸಿಒಎಸ್ ಸಪೋರ್ಟ್ ಡ್ರಿಪ್, ಹೇರ್ ಫಾಲ್ ಕಂಟ್ರೋಲ್ ಸೇರಿದಂತೆ ಅನೇಕ ಟ್ರೀಟ್ಮೆಂಟ್ ನೀಡುತ್ತವೆ.

56
ಥೆರಪಿಗೊಳಗಾದವರ ಅಭಿಪ್ರಾಯ

ಈಗಾಗಲೇ IV ಥೆರಪಿ ಮಾಡಿಸಿಕೊಂಡವರಿಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಬೇರೆ ಬ್ಯೂಟಿ ಟ್ರೀಟ್ಮೆಂಟ್ ಗಿಂತ ಇದಕ್ಕೆ ಹೆಚ್ಚು ಖರ್ಚಾಗುತ್ತದೆ. ಆದ್ರೆ ಖರ್ಚು ಮಾಡಿದ ಒಂದೊಂದು ಪೈಸೆಗೂ ಒಳ್ಳೆ ರಿಸಲ್ಟ್ ಸಿಕ್ಕಿದೆ ಎಂದು ಮಹಿಳೆಯರು ತಿಳಿಸಿದ್ದಾರೆ. IV ಥೆರಪಿ ಸ್ವಲ್ಪ ನೋವಿನಿಂದ ಕೂಡಿದ್ರೂ ಸೌಂದರ್ಯಕ್ಕಾಗಿ ಜನರು ಇದನ್ನು ಮಾಡಿಸಿಕೊಳ್ಳಲು ಸಿದ್ದರಾಗ್ತಿದ್ದಾರೆ.

66
IV ಥೆರಪಿ ಅಡ್ಡಪರಿಣಾಮ

ತಜ್ಞರ ಪ್ರಕಾರ ಸೂಕ್ತ ಜಾಗದಲ್ಲಿ ಇದನ್ನು ಮಾಡಿಸಿಕೊಳ್ಳುವ ಅಗತ್ಯವಿದೆ. ಸರಿಯಾದ ಮಾಹಿತಿ ಇಲ್ಲದ ಕ್ಲಿನಿಕ್ ಗೆ ಭೇಟಿ ನೀಡಿದ್ರೆ ನಿಮ್ಮ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಅಲರ್ಜಿ, ವಾಂತಿ, ವಾಕರಿಕೆ, ತಲೆ ನೋವು, ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು, ಎಲೆಕ್ಟ್ರೋಲೈಟ್ ಅಸಮತೋಲನ ಕಾಣಿಸಿಕೊಳ್ಳುತ್ತದೆ. ಗಂಭೀರ ಸಂದರ್ಭದಲ್ಲಿ ಅನಾಫೈಲ್ಯಾಕ್ಟಿಕ್ ಶಾಕ್, ಬಹು ಅಂಗ ವೈಫಲ್ಯ ಕಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories