ಮಲಗುವ ಮುನ್ನ ಈ 3 ಕೆಲಸ ಮಾಡಿ… ಬೆಳಗ್ಗೆ ಎದ್ದರೆ ಕರ್ಲಿ ಹೇರ್ ನೋಡಿ ನೀವೇ ಫಿದಾ ಆಗ್ತೀರಾ!

Published : Jul 30, 2026, 09:10 PM IST

Curly Hair Tips: ಕರ್ಲರ್, ಹೀಟರ್ ಯಾವುದೇ ಬಳಸದೆ ಕೂದಲನ್ನು ನೈಸರ್ಗಿಕವಾಗಿ ಕರ್ಲಿ ಮಾಡಬೇಕೇ? ಹಾಗಿದ್ರೆ ರಾತ್ರಿ ಮಲಗುವ ಮೊದಲು ಈ ಸಿಂಪಲ್ ಟಿಪ್ಸ್ ಅನುಸರಿಸಿ. ಅಷ್ಟೇ ಬೆಳಿಗ್ಗೆ ಎದ್ದಾಗ ಸುಂದರ ಕರ್ಲ್ಸ್ ಹೇರ್ ನೋಡಿ ನೀವೇ ಶಾಕ್ ಆಗ್ತೀರಿ. ಹೇಗೆ ಮಾಡೋದು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್.

PREV
15
ನೀವು ಪ್ರತಿದಿನ ಹೇರ್ ಕರ್ಲರ್ ಬಳಸುತ್ತೀರಾ?

ಅನೇಕ ಮಹಿಳೆಯರು ಕಚೇರಿಗೆ ಹೋಗುವ ಮೊದಲು ತಮ್ಮ ಕೂದಲನ್ನು ಸ್ಟ್ರೇಟ್ ಅಥವಾ ಕರ್ಲಿ ಮಾಡುತ್ತಾರೆ. ಒಂದು ಅಥವಾ ಎರಡು ಬಾರಿ ಹೀಗೆ ಮಾಡುವುದು ಸಮಸ್ಯೆಯಲ್ಲ. ಆದರೆ ಪ್ರತಿದಿನ ಹೀಟ್ ಬಳಸುವುದರಿಂದ ಕೂದಲಿಗೆ ಸಾಕಷ್ಟು ಹಾನಿಯಾಗಬಹುದು. ಇದರಿಂದ ಕೂದಲು ಉದುರುವುದು ಮಾತ್ರವಲ್ಲದೆ ಒಣಗಿದಂತೆ ಹಾಗೂ ನಿರ್ಜೀವವಾಗಿ ಕಾಣಬಹುದು.

25
ಈ ರೀತಿಯಾಗಿ ಸುಲಭವಾಗಿ ಕರ್ಲಿ ಹೇರ್ ಪಡೆಯಿರಿ

ಕರ್ಲಿ ಹೇರ್ ತುಂಬಾ ಆಕರ್ಷಕವಾಗಿ ಕಾಣುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ಬೆಳಿಗ್ಗೆ ಎದ್ದ ತಕ್ಷಣ ಹೆಚ್ಚು ಸಮಯ ತೆಗೆದುಕೊಳ್ಳದೇ ಅಥವಾ ಶ್ರಮವಿಲ್ಲದೆ ನೈಸರ್ಗಿಕ ಕರ್ಲಿ ಕೂದಲು ಬೇಕೆಂದರೆ, ಇಲ್ಲಿ ನೀಡಿರುವ ಟಿಪ್ಸ್‌ಗಳನ್ನು ಅನುಸರಿಸಿ. ಈ ಸರಳ ವಿಧಾನಗಳಿಂದ ಬೆಳಿಗ್ಗೆ ಎದ್ದ ತಕ್ಷಣ ಸುಂದರವಾದ ಕರ್ಲಿ ಹೇರ್ ಪಡೆಯಬಹುದು.

35
ಸ್ವಲ್ಪ ಒದ್ದೆಯಾದ ಕೂದಲಿಗೆ ಜಡೆ ಹಾಕಿ

ಇದು ಕೇಳಲು ವಿಚಿತ್ರವಾಗಿ ಅನಿಸಬಹುದು. ಆದರೆ ಕೂದಲನ್ನು ಸ್ವಲ್ಪ ಒದ್ದೆಯಾಗಿ ಇಡುವುದರಿಂದ ಉತ್ತಮ ಫಲಿತಾಂಶ ಸಿಗಬಹುದು. ಆದರೆ ಕೂದಲು ತುಂಬಾ ಒದ್ದೆಯಾಗಿರಬಾರದು. ಇಲ್ಲದಿದ್ದರೆ ತಲೆನೋವು ಉಂಟಾಗುವ ಸಾಧ್ಯತೆ ಇರುತ್ತದೆ. ಮಲಗುವ ಮೊದಲು ಸ್ವಲ್ಪ ಒದ್ದೆಯಾದ ಕೂದಲಿಗೆ ಸಡಿಲ ಜಡೆ ಅಥವಾ ಲೋ ಬನ್ ಕಟ್ಟಿಕೊಳ್ಳಿ. ಇದರಿಂದ ರಾತ್ರಿಯಿಡೀ ಕೂದಲು ಒಂದು ಆಕಾರದಲ್ಲಿ ಇರುತ್ತದೆ. ಬೆಳಿಗ್ಗೆ ಅದನ್ನು ಬಿಚ್ಚಿದಾಗ ನ್ಯಾಚುರಲ್ಸ್ ವೇವ್ಸ್ ಹೇರ್ ಅಥವಾ ಬೌನ್ಸಿ ಕರ್ಲ್ಸ್ ಕಾಣಿಸುತ್ತವೆ.

45
ಕಂಡೀಷನರ್ ಅಥವಾ ಕರ್ಲ್ ಕ್ರೀಮ್ ಬಳಸುವುದನ್ನು ಮರೆಯಬೇಡಿ

ಮಲಗುವ ಮೊದಲು ಕೂದಲಿನ ಉದ್ದದ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಲೀವ್-ಇನ್ ಕಂಡೀಷನರ್, ಕರ್ಲ್ ಕ್ರೀಮ್ ಅಥವಾ ಹೇರ್ ಸೀರಮ್ ಹಚ್ಚಿ. ಇದರಿಂದ ಕೂದಲಿನ ತೇವಾಂಶ ಉಳಿಯುತ್ತದೆ, ಫ್ರಿಜ್ ಕಡಿಮೆಯಾಗುತ್ತದೆ ಮತ್ತು ಬೆಳಿಗ್ಗೆ ಕರ್ಲ್ಸ್ ಹೆಚ್ಚು ಸ್ಪಷ್ಟವಾಗಿ ಹಾಗೂ ಮೃದುವಾಗಿ ಕಾಣಿಸುತ್ತವೆ. ಆದರೆ ಕ್ರೀಮ್ ಅನ್ನು ಅತಿ ಕಡಿಮೆ ಪ್ರಮಾಣದಲ್ಲೇ ಬಳಸಬೇಕು. ಇಲ್ಲದಿದ್ದರೆ ಕೂದಲು ಜಿಗುಟಾಗುವ ಸಾಧ್ಯತೆ ಇರುತ್ತದೆ.

55
ಸಿಲ್ಕ್ ಅಥವಾ ಸ್ಯಾಟಿನ್ ದಿಂಬಿನ ಕವರ್ ಬಳಸಿ

ಸಾಧ್ಯವಾದರೆ ಹತ್ತಿಯ ದಿಂಬಿನ ಹೊದಿಕೆಯ ಬದಲು ಸಿಲ್ಕ್ ಅಥವಾ ಸ್ಯಾಟಿನ್ ಪಿಲ್ಲೋ ಕವರ್ ಬಳಸಿ. ಇದರಿಂದ ಕೂದಲಿನ ಮೇಲೆ ಉಂಟಾಗುವ ಘರ್ಷಣೆ ಕಡಿಮೆಯಾಗುತ್ತದೆ, ರಾತ್ರಿಯಿಡೀ ಕರ್ಲ್ಸ್‌ನ ಆಕಾರ ಉತ್ತಮವಾಗಿ ಉಳಿಯುತ್ತದೆ. ಮಲಗುವಾಗ ಕೂದಲನ್ನು ಸಡಿಲವಾಗಿ ಕಟ್ಟಿಕೊಳ್ಳುವುದರಿಂದ ರಾತ್ರಿ ಪೂರ್ತಿ ಅದು ಪರ್ಫೆಕ್ಟ್ ಕರ್ಲ್ ಪಡೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories