ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಭಾಗವಾಗಿ ಬೆಂಗಳೂರಿನ ವಂಡರ್‌ಲಾದಲ್ಲಿ ಸ್ವಿಮ್‌ಸೂಟ್ ಸುತ್ತು ನಡೆಯಿತು. ಜೈಪುರದಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೂ ಮುನ್ನ ನಡೆದ ಈ ನಿರ್ಣಾಯಕ ಸುತ್ತಿನಲ್ಲಿ, ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 52 ಫೈನಲಿಸ್ಟ್‌ಗಳು ಭಾಗವಹಿಸಿದ್ದರು.
ಬರುವ ಆಗಸ್ಟ್ 23 ರಂದು ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ 2026 (Miss Universe India) ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೂ ಮುನ್ನ, ಬೆಂಗಳೂರು, ಇಂದೋರ್ ಮತ್ತು ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಇವುಗಳ ಒಂದೊಂದು ರೌಂಡ್ಗಳನ್ನು ಆಯೋಜಿಸಲಾಗುತ್ತಿದೆ. ಇವೆಲ್ಲವೂ ಮೌಲ್ಯಮಾಪನ ಸುತ್ತುಗಳಾಗಿವೆ. ಮಿಸ್ ಯೂನಿವರ್ಸ್ ಇಂಡಿಯಾ 2026 ವಿಜೇತರು ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ.
26
ಬೆಂಗಳೂರಿನಲ್ಲಿ ಸ್ವಿಮ್ ಸೂಟ್ ಸುತ್ತು
ಇದರ ಅಂಗವಾಗಿ ಬೆಂಗಳೂರಿನಲ್ಲಿ ನಿನ್ನೆ ಅರ್ಥಾತ್ ಜುಲೈ 29ರಂದು ಸ್ವಿಮ್‌ಸೂಟ್ (Swim Suit) ಸುತ್ತು ಬೆಂಗಳೂರಿನ ವಂಡರ್‌ಲಾದಲ್ಲಿ ನಡೆಯಿತು.ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ ಗೆಲ್ಲುವ ಸ್ಪರ್ಧಿಗೆ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.
36
52 ಫೈನಲಿಸ್ಟ್‌ಗಳು
ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 52 ಫೈನಲಿಸ್ಟ್‌ಗಳು ಪೂಲ್‌ಸೈಡ್ ರ್ಯಾಂಪ್‌ನಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ತೀರ್ಪುಗಾರರ ಗಮನ ಸೆಳೆದರು.
ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧೆ ನಿರ್ಣಾಯಕ ಹಂತ ತಲುಪಿದ್ದು, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡಲಾಯಿತು.
56
ಸ್ಪರ್ಧಿಗಳ ಆತ್ಮವಿಶ್ವಾಸದ ಸ್ಪರ್ಧೆ
ಸ್ವಿಮ್‌ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ಬಾರಿ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರುವ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯೂ ಕಾರ್ಯಕ್ರಮದಲ್ಲಿ ಪ್ರತಿಬಿಂಬಿತವಾಯಿತು.
66
ಇಲ್ಲಿಯವರೆಗಿನ ಸ್ಪರ್ಧೆ
ಇದಕ್ಕೂ ಮುನ್ನ ಸ್ಯಾಶಿಂಗ್ ಸಮಾರಂಭ, ಪರಿಚಯಾತ್ಮಕ ರ್ಯಾಂಪ್ ವಾಕ್, ಭಾಷಣ ಸುತ್ತು ಹಾಗೂ ಗಾಲಾ ಡಿನ್ನರ್ ಸೇರಿದಂತೆ ಹಲವು ಸುತ್ತುಗಳು ಯಶಸ್ವಿಯಾಗಿ ನಡೆದಿದ್ದವು. ಗ್ರ್ಯಾಂಡ್ ಫಿನಾಲೆಗೂ ಮುನ್ನ ಇನ್ನೂ ಹಲವು ಮೌಲ್ಯಮಾಪನ ಸುತ್ತುಗಳು ನಡೆಯಲಿದ್ದು, ಬಳಿಕ ಎಲ್ಲ ಫೈನಲಿಸ್ಟ್‌ಗಳು ಆಗಸ್ಟ್ 23ರಂದು ಜೈಪುರದಲ್ಲಿ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.