ಆರೆಂಜ್‌ ಕಲರ್ ಲೆಹಂಗಾದಲ್ಲಿ ಮಿಂಚಿದ ಮಹೇಶ್‌ಬಾಬು ಮಗಳು..ಫ್ಯೂಚರ್ ಹೀರೋಯಿನ್ ಎಂದ ಫ್ಯಾನ್ಸ್!

Published : Apr 21, 2024, 04:23 PM ISTUpdated : Apr 21, 2024, 04:26 PM IST

ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಮುದ್ದಿನ ಮಗಳು ಸಿತಾರಾ ಘಟ್ಟಮನೇನಿ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಮುದ್ದು ಬೆಡಗಿ ಇತ್ತೀಚಿಗೆ ಆರೆಂಜ್ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ.

PREV
18
ಆರೆಂಜ್‌ ಕಲರ್ ಲೆಹಂಗಾದಲ್ಲಿ ಮಿಂಚಿದ ಮಹೇಶ್‌ಬಾಬು ಮಗಳು..ಫ್ಯೂಚರ್ ಹೀರೋಯಿನ್ ಎಂದ ಫ್ಯಾನ್ಸ್!

ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಮುದ್ದಿನ ಮಗಳು ಸಿತಾರಾ ಘಟ್ಟಮನೇನಿ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಮುದ್ದು ಬೆಡಗಿ ಇತ್ತೀಚಿಗೆ ಆರೆಂಜ್ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ.

28

ಗಾಢ ಆರೆಂಜ್‌ ಬಣ್ಣದ ಸೈಡ್‌ಗೆ ಸಿಲ್ವರ್ ಡಿಸೈನ್‌ ಇರೋ ಗ್ರ್ಯಾಂಡ್ ಲೆಹಂಗಾ ಇದಾಗಿದ್ದು, ಇದಕ್ಕೆ ಒಪ್ಪುವಂತೆ ಸಿತಾರಾ ವಜ್ರದ ಕಿವಿಯೋಲೆ ಹಾಗೂ ನೆಕ್ಲೇಸ್‌ನ್ನು ಸಹ ಧರಿಸಿ ಮುದ್ದಾಗಿ ನಗೆ ಬೀರಿದ್ದಾರೆ.

38

ಸೂಪರ್‌ಸ್ಟಾರ್‌ ಮಗಳ ಲುಕ್‌ ನೋಡಿ ನೆಟ್ಟಿಗರು ವಾವ್ ಅಂದಿದ್ದಾರೆ. ಶೈನಿಂಗ್ ಬ್ರೈಟರ್ ದೆನ್ ಆರೆಂಜ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ಬ್ಯೂಟಿಫುಲ್ ಪ್ರಿನ್ಸೆಸ್ ವಾವ್‌ ಎಂದು ಕಾಮೆಂಟಿಸಿದ್ದಾರೆ.

48

ಮತ್ತೆ ಕೆಲವು ಅಭಿಮಾನಿಗಳು ಬ್ಯೂಟಿಫುಲ್‌, ಪ್ರೆಟ್ಟೀ, ಡ್ಯಾಡೀಸ್ ಟಿಟಲ್ ಪ್ರಿನ್ಸೆಸ್, ಎಂದೆಲ್ಲಾ ಹೊಗಳಿದ್ದಾರೆ. ವೆರಿ ನೈಸ್ ಪಿಕ್, ಸೂಪರ್‌, ಫ್ಯೂಚರ್ ಹೀರೋಯಿನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

58
mahesh babu daughter sitara dance

ಇಷ್ಟು ಚಿಕ್ಕ ವಯಸ್ಸಿಗೆ ಸಿತಾರಾ ಬ್ರ್ಯಾಂಡ್‌ ಹಾಗೂ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾರೆ.  ಈ ಹಿಂದೆ ಸಿತಾರಾ ವರುಣ್ ಚಲ್ಲಿಕಮ್ ಡಿಸೈನ್ ಮಾಡಿರುವ ಲೆಹೆಂಗಾ ಸೆಟ್‌ ಧರಿಸಿದ್ದು ಇದರ ಬೆಲೆ ಸುಮಾರು 2,10,000 ರೂಪಾಯಿ ಎನ್ನಲಾಗಿದೆ.

68

ಈ ಹಿಂದೆ ಸಿತಾರಾ ಅವರ ಆಭರಣ ಬ್ರಾಂಡ್‌ನ ಜಾಹೀರಾತನ್ನು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸಲಾಯಿತು. ಸಿತಾರ ಜೊತೆಗೆ ಮಹೇಶ್ ಮತ್ತು ನಮ್ರತಾ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ದಿನದ ಚಿತ್ರಗಳನ್ನು ಹಂಚಿಕೊಂಡಿದ್ದರು. 

78

ಇನ್‌ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಿತಾರಾ ಸುಮಾರು 700ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

88

ಮಹೇಶ್ ಬಾಬು ಮತ್ತು ನಮ್ರತಾ 2005 ರಲ್ಲಿ ವಿವಾಹವಾದರು. ದಂಪತಿಗೆ 16 ವರ್ಷದ ಗೌತಮ್ ಎಂಬ ಮಗನೂ ಇದ್ದಾನೆ. ಕಳೆದ ವರ್ಷ ಮಹೇಶ್ ಬಾಬು ಅಭಿನಯದ ಸರ್ಕಾರ ವಾರಿ ಪಟ ಚಿತ್ರದ ಮೂಲಕ ಸಿತಾರಾ ಮೊದಲ ಬಾರಿಗೆ ನಟಿಸಿದ್ದರು.

Read more Photos on
click me!

Recommended Stories