ಶಾರೂಕ್‌ ಖಾನ್ ಮಗಳ ಲೈಫ್‌ಸ್ಡೈಲ್‌ ಕೂಡಾ ಸಖತ್‌ ಲಕ್ಸುರಿಯಸ್‌, ಧರಿಸೋ ಸ್ಕರ್ಟ್‌ ಬೆಲೆನೇ ಭರ್ತಿ 45 ಲಕ್ಷ!

First Published Nov 16, 2023, 3:18 PM IST

ಸೆಲೆಬ್ರಿಟಿಗಳ ಲೈಫ್‌ಸ್ಟೈಲ್‌ ಯಾವಾಗಲೂ ಅಲ್ಟ್ರಾ ಲಕ್ಸುರಿಯಸ್ ಆಗಿರುತ್ತದೆ. ಬಾಲಿವುಡ್ ತಾರೆಯರ ಬಂಗಲೆ, ಕಾಸ್ಟ್ಲೀ ಕಾರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಹಾಗೆಯೇ ಸದ್ಯ ಕಿಂಗ್‌ಖಾನ್‌ ಮಗಳು ಸುಹಾನಾ ತನ್ನ ಲಕ್ಸುರಿಯಸ್ ಜೀವನಶೈಲಿಯಿಂದಾನೇ ಬೆರಗು ಮೂಡಿಸುತ್ತಿದ್ದಾರೆ. ಇತ್ತೀಚಿಗೆ ಅವರು ಧರಿಸಿದ ಡ್ರೆಸ್ ಹಾಗೂ ಪರ್ಸ್‌ ಬೆಲೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

ಸೆಲೆಬ್ರಿಟಿಗಳ ಲೈಫ್‌ಸ್ಟೈಲ್‌ ಯಾವಾಗಲೂ ಅಲ್ಟ್ರಾ ಲಕ್ಸುರಿಯಸ್ ಆಗಿರುತ್ತದೆ. ಬಾಲಿವುಡ್ ತಾರೆಯರ ಬಂಗಲೆ, ಕಾಸ್ಟ್ಲೀ ಕಾರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಹಾಗೆಯೇ ನಟ-ನಟಿಯರು ಯಾವಾಗ್ಲೂ ತಾವು ಧರಿಸೋ ಡ್ರೆಸ್‌, ಪರ್ಸ್‌ನಿಂದಾನೇ ಎಲ್ಲರ ಗಮನ ಸೆಳೆಯುತ್ತಾರೆ. ಹಾಗೆಯೇ ಸದ್ಯ ಕಿಂಗ್‌ಖಾನ್‌ ಮಗಳು ಸುಹಾನಾ ತನ್ನ ಲಕ್ಸುರಿಯಸ್ ಜೀವನಶೈಲಿಯಿಂದಾನೇ ಬೆರಗು ಮೂಡಿಸುತ್ತಿದ್ದಾರೆ. 

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಈಗಾಗಲೇ ನಿಜವಾದ ಫ್ಯಾಷನಿಸ್ಟ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಸೆಲೆಬ್ರಿಟಿ ಕಿಡ್ ಜೋಯಾ ಅಖ್ತರ್ ಚಿತ್ರ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ. 

ಸುಹಾನಾ ಖಾನ್‌ ಯಾವಾಗ್ಲೂ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಕಾಣಿಸಿಕೊಳ್ಳುತ್ತಾರೆ. 4.3 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಸುಹಾನಾ, ಮಾಡರ್ನ್‌ ಫೋಟೋಗಳನ್ನು ಆಗಾಗ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗೆ ಸುಹಾನಾ ಖಾನ್ ಬ್ಲ್ಯಾಕ್‌ ಶಾರ್ಟ್‌ ಸ್ಲಿಟ್ ಡ್ರೆಸ್ ಹಾಕ್ಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದು ಎಲ್ಲರ ಗಮನ ಸೆಳೀತಿದೆ. ಅದಕ್ಕಿಂತ ಹೆಚ್ಚಾಗಿ ಡ್ರೆಸ್ ಬೆಲೆ ಹಾಗೂ ಸುಹಾನಾ ಕೈಯಲ್ಲಿ ಹಿಡಿದುಕೊಂಡಿರೋ ಪರ್ಸ್‌ ಬೆಲೆ ಎಲ್ಲರನ್ನೂ ಬೆರಗುಗೊಳಿಸಿದೆ. 

ಸುಹಾನಾ ಖಾನ್‌, ಬ್ಲ್ಯಾಕ್‌ ಕಾರ್ಡೆಡ್ ಕಾರ್ಸೆಟ್‌ನ್ನು ಧರಿಸಿದ್ದರು. ಇದು ಕೃತಕ ಚರ್ಮದಿಂದ ಮಾಡಲ್ಪಟ್ಟಿದೆ. ಕಪ್ಪು ಪೆನ್ಸಿಲ್ ಸ್ಕರ್ಟ್‌ನೊಂದಿಗೆ ಸುಹಾನಾ ಖಾನ್ ಇದನ್ನು ಧರಿಸಿದ್ದರು. ಇದು ಹೈ ಸ್ಲಿಟ್‌ನ್ನು ಸಹ ಒಳಗೊಂಡಿತ್ತು. ಈ ಶಾರ್ಟ್‌ನ ಬೆಲೆ ಮಾತ್ರ ಎಲ್ಲರೂ ಅಚ್ಚರಿಪಡುವಂತಿದೆ. ವರದಿಗಳ ಪ್ರಕಾರ, ಸುಹಾನಾ ಅವರ ಕಪ್ಪು ಚರ್ಮದ ಕಾರ್ಸೆಟ್ ಐಷಾರಾಮಿ ಲೇಬಲ್ ರೈಕ್ನಿ ಬ್ರ್ಯಾಂಡ್‌ನಿಂದ ಬಂದಿದೆ. ಕಪ್ಪು ಮಿಡಿ ರಿಕ್ ಓವೆನ್ಸ್‌ನಿಂದ ಬಂದಿದೆ.

ಚರ್ಮದ ಕಾರ್ಸೆಟ್ ಬೆಲೆ 38,000 ರೂ. ಮತ್ತೊಂದೆಡೆ, ವೋಗ್ ವರದಿಯ ಪ್ರಕಾರ, ಸ್ಕರ್ಟ್ ಬೆಲೆ ರೂ. 44,67,533. ಹೀಗಾಗಿ, ಒಟ್ಟಾರೆಯಾಗಿ, ಇಡೀ ಡ್ರೆಸ್ ಬೆಲೆ ಭರ್ತಿ 45,05,033 ರೂ. ಎಂದು ತಿಳಿದುಬಂದಿದೆ. ಈ ಕಾಸ್ಟ್ಲೀ ಡ್ರೆಸ್‌ಗೆ ಸುಹಾನಾ ಸಿಂಪಲ್‌ ಮೇಕಪ್ ಮಾಡಿಕೊಂಡಿದ್ದರು.

ಸಿಂಪಲ್‌ ಆಸೆಸ್ಸರೀಸ್ ಧರಿಸಿದ್ದರು. ಆದರೆ ಬ್ಲ್ಯಾಕ್‌ ಸ್ಕರ್ಟ್ ಜೊತೆಗೆ ಸುಹಾನಾ ಹಿಡಿದುಕೊಂಡಿದ್ದ ಪರ್ಸ್‌ ಬೆಲೆ ಬರೋಬ್ಬರಿ  3.2 ಲಕ್ಷ ರೂ. ಎಂದು ತಿಳಿದುಬಂದಿದೆ.

ಸುಹಾನಾ ಆಭರಣ ಬ್ರಾಂಡ್ ಇಶಾರ್ಯದಿಂದ ವಜ್ರ ಹೊದಿಕೆಯ ಕಿವಿಯೋಲೆಗಳನ್ನು ಆರಿಸಿಕೊಂಡಿದ್ದರು. ಕೈಯಲ್ಲಿ ಹಳದಿ-ಹ್ಯೂಡ್ ಮೈಕ್ರೋ ಲೇಡಿ ಡಿಯರ್ ಬ್ಯಾಗ್‌ ಹಿಡಿದುಕೊಂಡಿದ್ದರು. ಈ ಚಿಕ್ಕ ಬ್ಯಾಗ್‌ ಬೆಲೆ USD 3,900 ಆಗಿದೆ. ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಭರ್ತಿ  3,24,73 ರೂ.

click me!