ಸಾರಾ ತೆಂಡೂಲ್ಕರ್ ಸ್ಟೈಲಿಶ್ ಲುಕ್‌, ಅಬ್ಬಬ್ಬಾ ಕೈಯಲ್ಲಿರೋ ಪುಟ್ಟ ಬ್ಯಾಗ್‌ ಬೆಲೆ ಇಷ್ಟೊಂದಾ?

Published : Nov 10, 2023, 12:02 PM IST

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ ಅಪ್ರತಿಮ ಸೌಂದರ್ಯ ಮತ್ತು ಸ್ಟೈಲಿಶ್‌ ಲುಕ್‌ನಿಂದ  ಯಾವಾಗಲೂ ಎಲ್ಲರ ಗಮನ ಸೆಳೆಯುತ್ತಾರೆ. ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಖತ್‌ ಟ್ರೆಂಡೀಯಾಗಿ ಕಾಣಸಿಗುತ್ತಾರೆ. ಹಾಗೆಯೇ ಇತ್ತೀಚಿಗೆ ಸಾರಾ ಸ್ಟೈಲಿಶ್ ಬ್ಯಾಗ್‌ ಎಲ್ಲರ ಗಮನ ಸೆಳೆದಿದೆ.ಅದರ ಬೆಲೆಯಂತೂ ದಂಗಾಗುವಂತಿದೆ.

PREV
18
ಸಾರಾ ತೆಂಡೂಲ್ಕರ್ ಸ್ಟೈಲಿಶ್ ಲುಕ್‌, ಅಬ್ಬಬ್ಬಾ ಕೈಯಲ್ಲಿರೋ ಪುಟ್ಟ ಬ್ಯಾಗ್‌ ಬೆಲೆ ಇಷ್ಟೊಂದಾ?

ಕ್ರಿಕೆಟ್ ಎಂದರೆ ತಕ್ಷಣಕ್ಕೆ ನೆನಪಾಗೋದು ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್. ದಿಗ್ಗಜ ಕ್ರಿಕೆಟಿಗ ಮಾಡಿದ ಎಲ್ಲಾ ವಿಶ್ವ ದಾಖಲೆಗಳನ್ನು ಹೊರತುಪಡಿಸಿ, ಅವರಿಬ್ಬರು ಮಕ್ಕಳಾದ ಸಾರಾ ತೆಂಡುಲ್ಕರ್ ಮತ್ತು ಅರ್ಜುನ್‌ ತೆಂಡುಲ್ಕರ್ ಸಹ ಆಗಾಗ ಸುದ್ದಿಯಲ್ಲಿರುತ್ತಾರೆ.

28

ಅದರಲ್ಲೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ತಮ್ಮ ಅಪ್ರತಿಮ ಸೌಂದರ್ಯ ಮತ್ತು ಸ್ಟೈಲಿಶ್‌ ಲುಕ್‌ನಿಂದ  ಯಾವಾಗಲೂ ಎಲ್ಲರ ಗಮನ ಸೆಳೆಯುತ್ತಾರೆ. ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾರಾ ಸಖತ್‌ ಟ್ರೆಂಡೀಯಾಗಿ ಕಾಣಸಿಗುತ್ತಾರೆ. ಕ್ರಿಕೆಟ್ ದೇವರ ಪುತ್ರಿಗೆ ಸಾವಿರಾರು ಅಭಿಮಾನಿಗಳೂ ಇದ್ದಾರೆ.

38

ಅರ್ಜುನ್ ತೆಂಡೂಲ್ಕರ್ ತನ್ನ ತಂದೆಯನ್ನು ಅನುಸರಿಸಿ ಕ್ರಿಕೆಟಿಗನಾಗಿ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದರೆ, ಸಾರಾ ತೆಂಡೂಲ್ಕರ್ ತನ್ನ ತಾಯಿಯಂತೆಯೇ ವೈದ್ಯಕೀಯದಲ್ಲಿ ಪದವಿ ಪಡೆದಿದ್ದಾರೆ. ಇದಲ್ಲದೆ, ಸಾರಾ ತೆಂಡೂಲ್ಕರ್ ಬೃಹತ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನ್ನು ಹೊಂದಿದ್ದಾರೆ.

48

ಸರಳವಾದ ಕಪ್ಪು ಬಣ್ಣದ ಟಾಪ್ ಮತ್ತು ಗೋಲ್ಡನ್ ಆಕ್ಸೆಸರಿಗಳೊಂದಿಗೆ ಜೋಡಿಸಲಾದ ಲೆಗ್ಗಿಂಗ್‌ಗಳನ್ನು ಧರಿಸಿದ್ದ ಸಾರಾ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು.

58

ಆದರೆ ಜನರ ಗಮನ ಸೆಳೆದಿದ್ದು ಆಕೆಯ ಕೈಯಲ್ಲಿದ್ದ ಕಾಸ್ಟ್ಲೀ ಫೆಂಡಿ ಬ್ಯಾಗ್. ಫೆಂಡಿ ಸಂಗ್ರಹದಿಂದ ನಯವಾದ ಲೆದರ್‌ನಲ್ಲಿರುವ ಸನ್‌ಶೈನ್ ಬ್ಯಾಗ್‌ನ ಬೆಲೆ ಸುಮಾರು $1420 ಆಗಿದ್ದು, ಅದು ಭಾರತೀಯ ಬೆಲೆಯಲ್ಲಿ ಸರಿಸುಮಾರು 1,18,193 ರೂ. ಆಗಿದೆ.

68

ಸಾರಾ ವಿಶೇಷ ಮತ್ತು ದುಬಾರಿ ಬ್ಯಾಗ್‌ಗಳನ್ನು ಹಿಡಿದುಕೊಂಡು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಸ್ವಲ್ಪ ಸಮಯದ ಹಿಂದೆ ಸಾರಾ ಸೇಂಟ್ ಲಾರೆಂಟ್‌ನಿಂದ ಬ್ಲ್ಯಾಕ್‌ ಕಲರ್ ಬ್ಯಾಗ್‌ ಹಿಡಿದುಕೊಂಡು ಕಾಣಿಸಿಕೊಂಡಿದ್ದರು. ಬ್ಯಾಗ್‌ನ ಬೆಲೆ ಯುರೋ 2,250 ಆಗಿದ್ದು, ಭಾರತೀಯ ಬೆಲೆಯಲ್ಲಿ ಅದು ಸರಿಸುಮಾರು 2,01,738 ರೂ. ಆಗಿ ಬದಲಾಗುತ್ತದೆ.

78

ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಲೇ ಇದೆ. ಇದರ ಬೆನ್ನಲ್ಲೇ ಇವರಿಬ್ಬರು ಆಗಾಗ ಜೊತೆಯಾಗಿ ಕಾಣಿಸಿಕೊಂಡು ಈ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡುತ್ತಾರೆ.

88

ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ಹಾಜರಾಗುವ ಮೂಲಕ ಉಹಾಪೋಹಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಈ ಬೆಳವಣಿಗೆ ನಡುವೆ ಇದೀಗ ಗಿಲ್ ಹಾಗೂ ಸಾರಾ ತಬ್ಬಿಕೊಂಡಿರುವ ಡೀಪ್‌ ಫೇಕ್ ಫೋಟೋ ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Read more Photos on
click me!

Recommended Stories