Published : Nov 16, 2023, 11:15 AM ISTUpdated : Nov 16, 2023, 12:41 PM IST
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್‌ಗಾಗಿ ನಟಿ ಅನುಷ್ಕಾ ಶರ್ಮಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫುಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಪಂದ್ಯದ ವೇಳೆ ನಟಿ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಿದ್ದರು. ಆದರೆ ನಟಿ ಧರಿಸಿದ್ದ ಸಿಂಪಲ್ ಆಗಿರೋ ಟೀ ಶರ್ಟ್ ಬೆಲೆ ತಿಳಿದರೆ ನೀವು ದಂಗಾಗೋದು ಖಂಡಿತ.
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ವೃತ್ತಿಜೀವನದ 50ನೇ ಏಕದಿನ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಒಟ್ಟಾರೆ 80ನೇ ಶತಕವಾಗಿದೆ.
28
ಕಿವೀಸ್ ಎದುರು ಆಕರ್ಷಕ ಅರ್ಧಶತಕ ಸಿಡಿಸುತ್ತಿದ್ದಂತೆಯೇ, ಸಚಿನ್ ತೆಂಡುಲ್ಕರ್ ಹಾಗೂ ಶಕೀಬ್ ಅಲ್ ಹಸನ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ತೆಂಡುಲ್ಕರ್‌ಗೆ ನಮಸ್ಕರಿಸಿ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಮಾಡಿದ್ದು ಎಲ್ಲರ ಗಮನ ಸೆಳೀತು.
38
ನವೆಂಬರ್ 15ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್‌ಗಾಗಿ ನಟಿ ಅನುಷ್ಕಾ ಶರ್ಮಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫುಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಪಂದ್ಯದ ವೇಳೆ ನಟಿ ಟೀಂ ಇಂಡಿಯಾ ಹಾಗೂ ಅವರ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಿದ್ದರು.
48
ವಿರಾಟ್ ಮೈದಾನದಲ್ಲಿದ್ದಾಗ ದಂಪತಿಗಳು ಹಲವಾರು ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಅನುಷ್ಕಾ ಶರ್ಮಾರ ಸ್ಟೈಲಿಶ್ ಉಡುಗೆ.
58
ನಟಿ ವೈಟ್‌ನಲ್ಲಿ ಹಸಿರು ಡಿಸೈನ್ ಇರೋ ಓವರ್ ಸೈಜ್‌ಡ್ ಟೀ ಶರ್ಟ್‌ನ್ನು ಧರಿಸಿದ್ದರು. ಇದಕ್ಕೆ ಮ್ಯಾಚಿಂಗ್ ಶಾರ್ಟ್ಸ್ ಧರಿಸಿದ್ದು ಕಂಪ್ಲೀಟ್ ಲುಕ್ ಸಖತ್ತಾಗಿತ್ತು.
68
ಅನುಷ್ಕಾ ಶರ್ಮಾ ಪೆಪ್ಪಿ ಪ್ರಿಂಟೆಡ್ ಕೋ-ಆರ್ಡ್ ಸೆಟ್ ಅನ್ನು ಧರಿಸಿದ್ದು, ಇದರ ಬೆಲೆ ತಿಳಿದರೆ ನೀವು ದಂಗಾಗೋದು ಖಂಡಿತ. ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಧರಿಸಿದ್ದ ಸ್ಟೈಲಿಶ್ ಕೋ-ಆರ್ಡ್ ಸೆಟ್ ಧ್ರುವ ಕಪೂರ್ ಡಿಸೈನ್ ಮಾಡಿರುವಂಥದ್ದು. ಟೀ ಶರ್ಟ್ ಬೆಲೆ ಬರೋಬ್ಬರಿ 19,500 ರೂ.
78
ಅದೇ ಡಿಸೈನ್‌ನ ಶಾರ್ಟ್ ಜೊತೆ ಇದನ್ನು ಖರೀದಿಸಲು ಬಯಸಿದರೆ ಇದರ ಬೆಲೆ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ನಿಮಗೆ 27,500 ರೂ. ಆಗುತ್ತದೆ.
88
ಇನ್ನೊಂದೆಡೆ ಬೇಬಿ ಬಂಪ್ ಕಾಣದಿರಲು ಅನುಷ್ಕಾ ಶರ್ಮಾ ಈ ಓವರ್ ಸೈಜ್‌ಡ್ ಟೀ ಶರ್ಟ್ ಧರಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.