ಆಕರ್ಷಕ ವೆಡ್ಡಿಂಗ್ ಗೌನ್ ಗಿನ್ನಿಸ್ ದಾಖಲೆಗೆ ಸೇರ್ಪಡೆ, ಅಬ್ಬಬ್ಬಾ ಪೋಣಿಸಿದ್ದ ಹರಳೆಷ್ಟು ಗೊತ್ತಾ?

First Published | May 11, 2023, 5:42 PM IST

ಎಲ್ಲಾ ಹೆಣ್ಣುಮಕ್ಕಳ ಪಾಲಿಗೆ ಮದುವೆ ಗೌನ್‌ ಅಂದ್ರೆ ತುಂಬಾ ಸ್ಪೆಷಲ್ ಆಗಿರುತ್ತದೆ. ತುಂಬಾ ಕಾಳಜಿಯಿಂದ ಅದನ್ನು ಸಿದ್ಧಪಡಿಸುತ್ತಾರೆ. ಆದರೆ ಇಲ್ಲೊಂದೆಡೆ ಮದುವೆ ಗೌನ್ ಗಿನ್ನಿಸ್ ದಾಖಲೆಗೇ ಸೇರ್ಪಡೆಯಾಗಿದೆ. ಆ ಗೌನ್‌ನ ವಿಶೇಷತೆಯೇನು. ಇಲ್ಲಿದೆ ಮಾಹಿತಿ.

ಗ್ರ್ಯಾಂಡ್ ಡ್ರೆಸ್‌, ಆಭರಣಗಳನ್ನು ಹೆಣ್ಣುಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹೀಗಿರುವಾಗ ಆಭರಣಗಳಿಂದ ಸಿದ್ಧಪಡಿಸಿದ ಗ್ರ್ಯಾಂಡ್ ಡ್ರೆಸ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ. ಅದರಲ್ಲೂ ಮದುವೆಗೆ ಇಂಥಾ ದಿರಿಸು ಪರ್ಫೆಕ್ಟ್‌ ಹೇಗಿರುತ್ತದೆ. ಹಾಗೆಯೇ ಇಲ್ಲೊಂದು ಮದುವೆ ಗೌನ್​​​​ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಜೊತೆಗೆ ಈ ಬಟ್ಟೆ ವಿಶೇಷ ವಿನ್ಯಾಸದಿಂದಲೇ ಗಿನ್ನೆಸ್​​ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ. ಈ ವೆಡ್ಡಿಂಗ್‌ ಗೌನ್‌ ವಿಶೇಷತೆಯೆಂದರೆ ಈ ಡ್ರೆಸ್‌ನ್ನು ಬರೋಬ್ಬರಿ 50,890 ಹರಳುಗಳನ್ನು ಬಳಸಿ ಸಿದ್ಧಪಡಿಸಲಾಗಿದೆ. ಕೈಗವಸುಗಳನ್ನು ಸಹ ಸ್ಫಟಿಕಗಳಿಂದ ಅಲಂಕರಿಸಲಾಗಿದೆ. ಬಿಳಿ ಬಣ್ಣದ ಮದುವೆ ಗೌನ್‌ ನೋಡಲು ಅತ್ಯಾಕರ್ಷಕವಾಗಿದೆ. 

Tap to resize

ಇಟಾಲಿಯನ್​​​ ಬ್ರೈಡಲ್ ಫ್ಯಾಶನ್ ಬ್ರ್ಯಾಂಡ್ ಈ ಉಡುಪನ್ನು ವಿನ್ಯಾಸಗೊಳಿಸಿದ್ದು, ಈ ಉಡುಪನ್ನು ಮೈಕೆಲಾ ಫೆರೆರೊ ಫ್ಯಾಶನ್ ಶೋನಲ್ಲಿ ಪ್ರದರ್ಶಿಸಲಾಗಿದೆ. ಈ ಉಡುಪನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳ ಸಮಯ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪ್ರದರ್ಶನದ ದಿನದಂದು, ಈ ಉಡುಪನ್ನು ಮಾಡೆಲ್ ಮಾರ್ಚೆ ಗೆಲಾನಿ ಕ್ಯಾವ್-ಅಲ್ಕಾಂಟೆ ಧರಿಸಿದ್ದರು.

ಸದ್ಯ ಈ ಆಕರ್ಷಕ ಗೌನ್ ಗಿನ್ನೆಸ್​​​ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ. ಈ ಬಟ್ಟೆಯ ವಿಶೇಷತೆಯ ಬಗ್ಗೆ ಗಿನ್ನೆಸ್​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​​ ಪೇಜ್​​ನಲ್ಲಿ ಶೇರ್​ ಮಾಡಲಾಗಿದೆ. 

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರ್ಗಸೂಚಿಗಳ ಪ್ರಕಾರ, ಬಳಸಿದ ಎಲ್ಲಾ ಹರಳುಗಳು ನೈಜವಾಗಿರಬೇಕು, ವಾಣಿಜ್ಯಿಕವಾಗಿ ಲಭ್ಯವಿರಬೇಕು ಮತ್ತು ಗುಣಮಟ್ಟ ಮತ್ತು ದೃಢೀಕರಣದ ಪ್ರಮಾಣಪತ್ರವನ್ನು ಹೊಂದಿರಬೇಕು.

ಹಿಂದಿನ ದಾಖಲೆಯನ್ನು Ozden Gelinlik Moda Tasarim Ltd. (ಟರ್ಕಿ) ಹೊಂದಿತ್ತು. 29 ಜನವರಿ 2011ರಂದು 45,024 ಸ್ಫಟಿಕಗಳೊಂದಿಗೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಫೋರಮ್ ಇಸ್ತಾನ್‌ಬುಲ್ ಶಾಪಿಂಗ್ ಮಾಲ್‌ನಲ್ಲಿ ಪ್ರಸ್ತುತಪಡಿಸಲಾಯಿತು.

Latest Videos

click me!