ಯಾವ ರೀತಿಯ ಜೀನ್ಸ್ ನಿಮಗೆ ಸರಿ ಹೊಂದುತ್ತೆ ಗೊತ್ತಾ?

First Published | May 10, 2023, 4:44 PM IST

ಡೆನಿಮ್ ನಮ್ಮ ಸರ್ವಋತು ಫ್ರೆಂಡ್ ಮತ್ತು ವಿಶೇಷವಾಗಿ ಡೆನಿಮ್ ಪ್ಯಾಂಟ್ ಅಥವಾ ಜೀನ್ಸ್ ವಿಷಯಕ್ಕೆ ಬಂದಾಗ, ಅವುಗಳನ್ನು ವರ್ಷದ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸಂದರ್ಭದಲ್ಲಿ ಧರಿಸಬಹುದು. ಹೆಚ್ಚಾಗಿ ಕ್ಯಾಶುಯಲ್ ಉಡುಗೆಯಾಗಿದ್ದರೂ, ಸರಿಯಾದ ರೀತಿಯ ಟಾಪ್ ಮತ್ತು ಸ್ಟೈಲಿಂಗ್ನೊಂದಿಗೆ, ಕ್ಯಾಶುವಲ್ ಕಾರ್ಯಕ್ರಮಗಳಿಗೆ ಜೀನ್ಸ್ ಧರಿಸಬಹುದು. ಆದರೆ, ನಿಮ್ಮ ದೇಹಕ್ಕೆ ಸರಿಯಾದ ಡೆನಿಮ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. 

ಡೆನಿಮ್(Denim) ಡಿಸೈನರ್ ಹೇಳೋ ಪ್ರಕಾರ, ನಿಮ್ಮ ಫಿಟ್ ಬಗ್ಗೆ ನಿರ್ಧರಿಸುವಾಗ ಜೀನ್ಸ್  ಅಲ್ಟಿಮೇಟ್ ಫ್ರೆಂಡ್. ಯಾಕಂದ್ರೆ ಅದು ದಿನದ ಪ್ರಾರಂಭ ಅಥವಾ ಕೊನೆ ಯಾವುದೇ ಇರಲಿ ನಿಮಗೆ ಸರಿಹೊಂದಬೇಕು. ಮತ್ತು ಒಮ್ಮೆ ನೀವು ನಿಮ್ಮ ದೇಹದ ಪ್ರಕಾರವನ್ನು ಗುರುತಿಸಿದ ನಂತರ, ಸರಿಯಾದ ರೀತಿಯ ಜೀನ್ಸ್ ಆಯ್ಕೆ ಮಾಡಲು ಈಝಿಯಾಗಿಸುತ್ತೆ. ನಮಗೆ ತಿಳಿದಿರುವಂತೆ ಜೀನ್ಸ್ ಯಾವಾಗಲೂ ಸ್ಟೈಲ್ ನಲ್ಲಿರುತ್ತೆ. ನಿಮ್ಮ ದೇಹದ ಪ್ರಕಾರವನ್ನು ಅವಲಂಬಿಸಿ ಯಾವ ರೀತಿಯ ಡೆನಿಮ್ ಪ್ಯಾಂಟ್ ನಿಮಗೆ ಉತ್ತಮವಾಗಿ ಹೊಂದಿಕೊಳ್ಳುತ್ತೆ ಎಂಬುದನ್ನು ಕಂಡುಹಿಡಿಯೋಣ.

ವಿವಿಧ ದೇಹ ಪ್ರಕಾರಗಳಿಗೆ ಡೆನಿಮ್
ಡೆನಿಮ್ ಡಿಸೈನರ್ಸ್, ವಿವಿಧ ದೇಹ ಪ್ರಕಾರಗಳಲ್ಲಿ ಯಾವ ರೀತಿಯ ಡೆನಿಮ್ ಉತ್ತಮವಾಗಿ ಕಾಣುತ್ತದೆ ಎಂದು ಇಲ್ಲಿ ಹೇಳಿದ್ದಾರೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ. 

Tap to resize

ಆಪಲ್ ಬಾಡಿ ಶೇಪ್ ಗಾಗಿ(Apple body shape) ಡೆನಿಮ್
ಆಪಲ್ ಬಾಡಿ ಶೇಪ್: ದೇಹದ ಕರ್ವ್ಸ್ ಮತ್ತು ಪೂರ್ಣತೆಯು ದೇಹದ ಮಧ್ಯಭಾಗದಲ್ಲಿ ಕಂಡರೆ, ಇದನ್ನು ಆಪಲ್ ಬಾಡಿ ಶೇಪ್ ಎನ್ನಲಾಗುತ್ತೆ. 
ಡೆನಿಮ್: ಆಪಲ್ ಬಾಡಿ ಶೇಪ್‌ಗಳಿಗೆ, ಸ್ಟ್ರೈಟ್ ಲೆಗ್ ಡೆನಿಮ್ ಸೂಕ್ತವಾಗಿದೆ. ಇದು ಕೆಳಭಾಗಕ್ಕೆ ಬಾಕ್ಸ್ ಶೇಡ್ ನೀಡುವ ಮೂಲಕ ಸಹಾಯ ಮಾಡುತ್ತೆ, ಆದರೆ "ಬಾಯ್ ಫ್ರೆಂಡ್" (ಟೇಪರ್ಡ್ ಮತ್ತು ಟೈಲರ್ಡ್) ಡೆನಿಮ್ ದೇಹಕ್ಕೆ ಸ್ಟ್ರಕ್ಚರ್ ನೀಡುವ ಮೂಲಕ ಸಹಾಯ ಮಾಡುತ್ತೆ.

ಹವರ್ ಗ್ಲಾಸ್ ಫಿಗರ್ (Hour glass figure)
ಹವರ್ ಗ್ಲಾಸ್: ತೆಳ್ಳಗಿನ ಸೊಂಟದೊಂದಿಗೆ, ವೆಲ್ ಡಿಫೈನ್ಡ್ ಕರ್ವ್ಸ್  ಹೊಂದಿರುವ ದೇಹವನ್ನು ಹವರ್ ಗ್ಲಾಸ್ ಫಿಗರ್ ಎನ್ನಲಾಗುತ್ತೆ.
ಡೆನಿಮ್: ಈ ಫಿಗರ್ ಹೊಂದಿರುವವರು,  ಸ್ಟ್ರೈಟ್ ಲೆಗ್ ಡೆನಿಮ್ ಟ್ರೈ ಮಾಡಬಹುದು. ಇದು ದೇಹದ ಮೇಲ್ಭಾಗದ ಕರ್ವ್ಸ್ ಹೆಚ್ಚಿಸುವ ಮೂಲಕ ಸುಂದರವಾಗಿ ಕಾಣಲು ಸಹಾಯ ಮಾಡುತ್ತೆ, ಆದರೆ ನೀವು ಫ್ಲೇರ್ ಮತ್ತು ಸ್ಕಿನ್ನಿ ಜೀನ್ಸ್ ಸಹ ಟ್ರೈ ಮಾಡಬಹುದು. 

ಪೀರ್ ಬಾಡಿ(Pear body shape) ಆಕಾರಕ್ಕಾಗಿ ಡೆನಿಮ್
ಪೀರ್ ಬಾಡಿ ಶೇಪ್: ಈ ದೇಹದ ಪ್ರಕಾರವು ದೇಹದ ಕೆಳಭಾಗದಲ್ಲಿ, ವಿಶೇಷವಾಗಿ ಸೊಂಟ, ಬಟ್ ಮತ್ತು ತೊಡೆಯ ಪ್ರದೇಶಗಳಲ್ಲಿ ಹೆಚ್ಚು ತುಂಬಿದಂತಿರುತ್ತೆ.
ಡೆನಿಮ್: ಪೀರ್ ಬಾಡಿ ಶೇಪ್ ಹೊಂದಿರುವವರಿಗೆ, ಫ್ಲೇರ್ ಜೀನ್ಸ್ ಸೂಕ್ತ. ಇದು ಪರ್ಫೆಕ್ಟ್ ಶೇಪ್ ಮತ್ತು ಪ್ರೊಪೋಶನೇಟ್ ಫಿಗರ್ ರಚಿಸಲು ಉಪಯುಕ್ತವಾಗಿದೆ, ಆದರೆ ಸ್ಕಿನ್ನಿ ಜೀನ್ಸ್ ಒಟ್ಟಾರೆ ಸೌಂದರ್ಯವನ್ನು ರಚಿಸಲು ಟಾಪ್ ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೆ.

ಅಥ್ಲೆಟಿಕ್ ಬಾಡಿ ಟೈಪ್ ಗೆ (Athletic body type)ಡೆನಿಮ್
ಅಥ್ಲೆಟಿಕ್: ಅಥ್ಲೆಟಿಕ್ ದೇಹದ ಪ್ರಕಾರಗಳು ದೇಹ ಪೂರ್ತಿಯಾಗಿ ಸ್ಟ್ರಾಂಗ್ ಆಗಿರುತ್ತೆ, ಅಲ್ಲಿ ಭುಜ ಮತ್ತು ಸೊಂಟದ ಉದ್ದವು ಹೆಚ್ಚು ಕಡಿಮೆ ಸಮಾನವಾಗಿರುತ್ತೆ . 
ಡೆನಿಮ್: ಅಥ್ಲೆಟಿಕ್ ಬಾಡಿ ಟೈಪ್ ಗೆ, ಬಾಯ್ಫ್ರೆಂಡ್ ಜೀನ್ಸ್ ಸೂಕ್ತ. ಇದು ನಿಮ್ಮ ಕ್ಯಾಶುಯಲ್, ಸ್ಪೋರ್ಟಿ ಸೆಕ್ಸಿನೆಸ್ ಪ್ರದರ್ಶಿಸಲು ಉತ್ತಮವಾಗಿದೆ, ಅಲ್ಲದೇ ಸ್ಕಿನ್ನಿ ಜೀನ್ಸ್ ನಿಮ್ಮ ಟೋನ್ಡ್ ಕಾಲು ಮತ್ತು ದೃಢವಾದ ಸ್ನಾಯುಗಳನ್ನು ತೋರಿಸಲು ಸೂಕ್ತವಾಗಿದೆ.

Latest Videos

click me!