Met Gala 2023: ಬ್ಲ್ಯಾಕ್ ಗೌನ್‌ನಲ್ಲಿ ಮಿಂಚಿದ ಇಶಾ ಅಂಬಾನಿ, ಡಾಲ್‌ ಬ್ಯಾಗ್‌ ಬೆಲೆ ಕೇಳಿದ್ರೆ ದಂಗಾಗ್ತೀರಾ!

First Published | May 3, 2023, 4:09 PM IST

ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೆಟ್ ಗಾಲಾ 2023 ಅದ್ದೂರಿಯಾಗಿ ನಡೆದಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಅದ್ದೂರಿ ಈವೆಂಟ್ ನಲ್ಲಿ ಭಾರತೀಯ ಸ್ಟಾರ್ಸ್ ಕೂಡ ಮಿಂಚಿದ್ದಾರೆ. ಅದರಲ್ಲೂ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆದ್ರು.

ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ಮೆಟ್ ಗಾಲಾ 2023' ಫ್ಯಾಷನ್ ಈವೆಂಟ್‌ನಲ್ಲಿ ಬಾಲಿವುಡ್‌, ಹಾಲಿವುಡ್ ತಾರೆಯರು ತಮ್ಮ ಅತ್ಯಾಕರ್ಷಕ ದಿರಿಸಿನಿಂದ ಎಲ್ಲರ ಗಮನ ಸೆಳೆದರು. ಹಾಗೆಯೇ ಈ ಬಾರಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಸಹ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದು, ಹೈಲೈಟ್ ಆಗಿತ್ತು.

ಈ ಬಾರಿ ಇಶಾ ಅಂಬಾನಿ ಸಂಪೂರ್ಣ ಕಪ್ಪು ಬಣ್ಣದ ಸ್ಯಾಟಿನ್‌ ಸ್ಯಾರಿ ಗೌನ್‌ನಲ್ಲಿ ಮಿಂಚಿದರು. ಇಶಾ ಅವರ ಸಂಪೂರ್ಣ ಗೌನ್ ಅನ್ನು ಮುತ್ತುಗಳು ಮತ್ತು ವಜ್ರಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ನೇಪಾಳಿ-ಅಮೆರಿಕನ್ ಡಿಸೈನರ್ ಪ್ರಬಲ್ ಗುರುಂಗ್ ಅವರ ಕಲೆಕ್ಷನ್‌ನಿಂದ ಈ ಉಡುಪನ್ನು ಧರಿಸಿದ್ದರು.

Latest Videos



ಮಿನುಗುವ ಗೌನ್‌ಗೆ ತಕ್ಕಂತೆ ವಜ್ರದ ನೆಕ್ಲೇಸ್ ಧರಿಸಿದ್ದರು. ಇಶಾ ಅಂಬಾನಿ ಈ ಬಾರಿ ತುಂಬಾ ನ್ಯಾಚುರಲ್ ಮೇಕಪ್ ಮಾಡಿಸಿಕೊಂಡಿದ್ದರು. ವಿಶಿಷ್ಟವಾಗಿದ್ದ ಡಾಲ್ ಬ್ಯಾಗ್ ಎಲ್ಲರ ಗಮನ ಸೆಳೆಯಿತು.

ಇಶಾ ಅವರ ಡಿಸೈನರ್ ಬ್ಯಾಗ್ ಭಾರತೀಯ ಸಂಪ್ರದಾಯದ ಮೇಲಿನ ಅವರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ ಸಾಂಪ್ರದಾಯಿಕ ಭಾರತೀಯ ವಧುವಿನ ಲುಕ್‌ನಿಂದ ಪ್ರೇರಿತಗೊಂಡ ಗೊಂಬೆಯ ಮುಖವನ್ನು ಒಳಗೊಂಡಿರುವ ಕ್ಲಚ್, ಆಕೆಯ ಒಟ್ಟಾರೆ ನೋಟಕ್ಕೆ ಚೆನ್ನಾಗಿ ಒಪ್ಪುತ್ತಿತ್ತು. ಈ ಬ್ಯಾಗ್ ಬೆಲೆ ಬ್ಯಾಗ್ ಬೆಲೆ ಭರ್ತಿ 24 ಲಕ್ಷ ರೂ.

ಉದ್ಯಮಿ ಮುಕೇಶ್ ಅಂಬಾನಿಯ ಕುಟುಂಬ ಸದಸ್ಯರು ಯಾವಾಗಲೂ ತಮ್ಮ ಬೆಲೆಬಾಳುವ ಡ್ರೆಸ್, ಆಭರಣ ಹಾಗೂ ಆಸೆಸರೀಸ್‌ಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಲಕ್ಷ ಲಕ್ಷ ಕೋಟಿ ಬೆಲೆಬಾಳುವ ಆಭರಣ, ಹ್ಯಾಂಡ್‌ ಬ್ಯಾಗ್‌ಗಳನ್ನು ಧರಿಸುತ್ತಾರೆ.

ಇಶಾ ಅಂಬಾನಿ 2017ರಲ್ಲಿ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದರು.ಈ ಫ್ಯಾಷನ್ ಇವೆಂಟ್‌ನಲ್ಲಿ ಅವರು ಕ್ರಿಶ್ಚಿಯಾನ್ ಡಯೋರ್ ಡಿಸೈನ್ ಮಾಡಿದ ಡ್ರೆಸ್ ಧರಿಸಿದ್ದರು. 2019ರಲ್ಲಿ ಪ್ರಬಾಲ್ ಗುರಂಗ್ ಡಿಸೈನ್ ಮಾಡಿದ ಲಾವೆಂಡರ್ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್ ನಟಿಯರಾದ ಪ್ರಿಯಾಂಕ ನಿಕ್ ಜೋನಾಸ್, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಸಹ ಮೆಟ್ ಗಾಲಾ ಫ್ಯಾಷನ್ ಇವೆಂಟ್‌ನಲ್ಲಿ ಕಾಣಿಸಿಕೊಂಡರು ದೀಪಿಕಾ ಹಾಗೂ ಆಲಿಯಾ ಬಿಳಿಬಣ್ಣದ ಡ್ರೆಸ್‌ನಲ್ಲಿ ಮಿಂಚಿದರೆ, ಪ್ರಿಯಾಂಕ ಬ್ಲ್ಯಾಕ್ ಅಂಡ್ ವೈಟ್ ಡ್ರೆಸ್ ಧರಿಸಿದ್ದರು.

click me!