ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ಪ್ರಿಯಾಂಕ ಮೋಹನ್‌, ಇಂಥಾ ಫೋಟೋಸ್ ಹಾಕ್ಬೇಡಿ ಬೇಜಾರಾಗುತ್ತೆ ಎಂದ ಫ್ಯಾನ್ಸ್!

First Published Apr 19, 2024, 6:11 PM IST

ಪ್ರಿಯಾಂಕಾ ಮೋಹನ್ ದಕ್ಷಿಣ ಚಿತ್ರರಂಗದ ಪ್ರಮುಖ ನಟಿ. ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾರೆ. ಇತ್ತೀಚಿಗೆ ಪ್ರಿಯಾಂಕ ಶಾರ್ಟ್ ಡ್ರೆಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಸ್ ಕೊಟ್ಟಿದ್ದಾರೆ. ಫ್ಯಾನ್ಸ್ ಮಾತ್ರ ಈ ಗ್ಲಾಮರಸ್ ಫೋಟೋಸ್ ನೋಡಿ ಬೇಜಾರಾಗಿದ್ದಾರೆ.

ಪ್ರಿಯಾಂಕಾ ಮೋಹನ್ ದಕ್ಷಿಣ ಚಿತ್ರರಂಗದ ಪ್ರಮುಖ ನಟಿ. ಮುಖ್ಯವಾಗಿ ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾರೆ. ಯುವ ನಟಿ ತಮ್ಮ ನಟನಾ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಗಾಗ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ.

ಇತ್ತೀಚಿಗೆ ಪ್ರಿಯಾಂಕ ಗ್ಲಿಟರಿಂಗ್ ಗೌನ್‌ನಲ್ಲಿ ಬೋಲ್ಡ್ ಪೋಸ್ ನೀಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಗೋಲ್ಡನ್-ಹ್ಯೂಡ್ ಮಿನಿ ಉಡುಗೆಯನ್ನು ಧರಿಸಿರುವ ಪ್ರಿಯಾಂಕ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ನೆಟ್ಟಿಗರು ನಟಿಯ ಬೋಲ್ಡ್ ಲುಕ್‌ಗೆ ಫಿದಾ ಆಗಿದ್ದಾರೆ.

ಪ್ರಿಯಾಂಕ ಫೋಟೋಸ್‌ಗೆ ಲೈಕ್ಸ್, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಿಮ್ಮ ನೋಟ ನನ್ನನ್ನು ಕೊಲ್ಲುತ್ತಿದೆ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ಅಭಿಮಾನಿ, 'ಈ ಬೋಲ್ಡ್ ಲುಕ್‌ನಿಂದ ಟೆಂಪರೇಚರ್ ಹೆಚ್ಚಾಗಿದೆ' ಎಂದು ಬರೆದುಕೊಂಡಿದ್ದಾರೆ.

ಮತ್ತೆ ಕೆಲವು ಫ್ಯಾನ್ಸ್‌ 'ನಿಮ್ಮ ನಿಜವಾದ ಅಭಿಮಾನಿಗಳಿಗೆ ನಿಮ್ಮನ್ನು ಟ್ರೆಡಿಶನಲ್‌ ಲುಕ್‌ನಲ್ಲಿ ನೋಡುವುದೆ ಇಷ್ಟ. ಇಂಥಾ ಬೋಲ್ಡ್ ಪೋಟೋಸ್ ಶೇರ್ ಮಾಡಬೇಡಿ' ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಮೋಹನ್ 2019 ರಲ್ಲಿ ಬಿಡುಗಡೆಯಾದ 'ಒಂದು ಕಥೆ ಹೇಳಾ' ಕನ್ನಡ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 

ಆ ನಂತರ ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರಗಳಾದ ನಾನಿಯ ಗ್ಯಾಂಗ್ ಲೀಡರ್, ಎಥರ್ಕ್ಕುಂ ತುನಿಂಧವನ್, ಡಾನ್, ಟಿಕ್ ಟಾಕ್ ಮತ್ತು ಶ್ರೀಕರಂನಲ್ಲಿ ನಟಿಸಿದ್ದಾರೆ. ನಟ ಧನುಷ್ ಮತ್ತು ನಟಿ ಪ್ರಿಯಾಂಕಾ ಅರುಲ್ ಮೋಹನ್‌ ನಟನೆಯ ಕ್ಯಾಪ್ಟನ್ ಮಿಲ್ಲರ್ ಬ್ಲಾಕ್ ಬಸ್ಟರ್ ಹಿಟ್‌ ಕಂಡ 2024ನೇ ಮೊದಲ ಚಿತ್ರ.

ಸೂಪರ್ ಹಿಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಮೋಹನ್ ಬೆಡ್‌ ರೂಮ್‌ ಸೀನ್‌ಗೆ ಬಿಗ್ No ಎಂದು ಹೇಳಿದ್ದಾರೆ.  ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ 29 ವರ್ಷದ ಪ್ರಿಯಾಂಕಾ ಆನ್‌ಸ್ಕ್ರೀನ್‌ನಲ್ಲಿ ಕಿಸ್ ಮಾಡಲು ಇಚ್ಚಿಸುತ್ತಾರಾ ಇಲ್ವಾ ಎಂದು ಪ್ರಶ್ನಿಸಲಾಗಿತ್ತು.

'ಈ ವಿಚಾರದ ಬಗ್ಗೆ ಹೇಳಲು ನನಗೆ ಏನೂ ಇಲ್ಲ. ಆದರೆ ಚಿತ್ರಕಥೆ ಎಷ್ಟೇ ಡಿಮ್ಯಾಂಡ್ ಮಾಡಿದರು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಕಿಸ್ ಮಾಡಲು ಆಗಲ್ಲ' ಎಂದು ಪ್ರಿಯಾಂಕಾ ಹೇಳಿದ್ದಾರೆ.

'ನಿರ್ಮಾಪಕರು ನನಗೆ ಎಷ್ಟೇ ಕೋಟಿ ಕೊಟ್ಟರು ಸಿನಿಮಾದಲ್ಲಿ ಲಿಪ್‌ಲಾಕ್‌ ಮಾಡಲ್ಲ. ಅಷ್ಟೇ ಅಲ್ಲ ಬೆಡ್‌ ರೂಮ್‌ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ' ಎಂದಿದ್ದಾರೆ.

click me!