ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್. ಯಾವಾಗ್ಲೂ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಸ್ಲೀವ್‌ಲೆಸ್ ಬ್ಲೌಸ್, ಸ್ಯಾರಿ ಉಟ್ಕೊಂಡ ಫೋಟೋಸ್ ಶೇರ್ ಮಾಡಿದ್ದಾರೆ.
ಅನುಪಮಾ ಪರಮೇಶ್ವರನ್ ಸದ್ಯ ತಮ್ಮ ಟಿಲ್ಲು ಸ್ವೇರ್ ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇತ್ತೀಚಿಗೆ ಈ ಸೌತ್ ನಟಿ ರೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ.
ಫುಲ್ ಪ್ರಿಂಟೆಂಡ್ ಸೀರೆಗೆ ಒಪ್ಪುವಂತೆ ಸ್ಲೀವ್‌ಲೆಸ್ ಕೂಡಾ ಧರಿಸಿ ಮುದ್ದಾಗಿ ನಗು ಬೀರಿದ್ದಾರೆ. ಇದಕ್ಕೆ ಒಪ್ಪುವಂತೆ ಮ್ಯಾಚಿಂಗ್ ಚೋಕರ್ ಸಹ ಧರಿಸಿದ್ದು, ಕರ್ಲಿ ಹೇರ್‌ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.
ಅನುಪಮಾ ಸ್ಯಾರಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಯೂಟಿಫುಲ್, ಕ್ಯೂಟಿ ಪೈ, ವಾವ್ಹ್, ದೇವತೆ, ಗಾರ್ಜಿಯಸ್ ಎಂದೆಲ್ಲಾ ಹೊಗಳಿದ್ದಾರೆ. ನೆಟ್ಟಿಗರು ಮೊದ್ಲು ಅಂಡರ್ ಆರ್ಮ್ ನೋಡ್ಕೊಳ್ಳಿ ಎಂದಿದ್ದಾರೆ.
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬಿಝಿಯಾಗಿರುವ ನಟಿಯರಲ್ಲೊಬ್ಬರು ಅನುಪಮಾ ಪರಮೇಶ್ವರನ್. ಪಡ್ಡೆ ಹುಡುಗರ ಹಾಟ್ ಫೇವರಿಟ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಮಾಡರ್ನ್ ಹಾಗೂ ಟ್ರೆಡಿಶನಲ್ ಡ್ರೆಸ್‌ನಲ್ಲಿ ಆಗಾಗ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 15 ಮಿಲಿಯನ್ ಫಾಲೋವರ್ಸ್‌ನ್ನು ಹೊಂದಿರುವ ನಟಿ, 1515 ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಇವರ ಫೋಟೋಗಳಿಗೆ ಲೈಕ್ಸ್, ಹಾರ್ಟ್ ಕೊಟ್ಟು, ಕಾಮೆಂಟ್ ಮಾಡ್ತಾನೂ ಇರ್ತಾರೆ
ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ.
ಮಲಯಾಳಂನ ಸೂಪರ್ ಹಿಟ್ ಪ್ರೇಮ್ ಸಿನಿಮಾ ಮೂಲಕ ಅನುಪಮಾ ಸಿನಿಮಾ ರಂಗಕ್ಕೆ ಕಾಲಿಟ್ಟರು.ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.