ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟ ಅನುಪಮಾ ಪರಮೇಶ್ವರನ್‌, ಸ್ವೀಟ್ ಪಾಯ್ಸನ್ ಎಂದು ಕರೆದ ಫ್ಯಾನ್ಸ್‌!

First Published | May 28, 2024, 12:39 PM IST

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ತಮ್ಮ ಹಾಟ್‌ಲುಕ್‌ನಿಂದಾನೇ ಹೆಚ್ಚು ಫೇಮಸ್ ಆಗಿದ್ದಾರೆ. ಆಗಾಗ ಬೋಲ್ಡ್‌ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಾರೆ. ಇತ್ತೀಚಿಗೆ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಫೋಸ್ ನೀಡಿದ್ದಾರೆ.

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಫೋಸ್ ನೀಡಿ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಾರೆ.

ಬ್ಲ್ಯಾಕ್ ಬಾಂಟಮ್‌ ಹಾಗೂ ಬ್ಲ್ಯಾಕ್ ಟಾಪ್‌ಗೆ ವೈಟ್‌ ಶ್ರಗ್‌ ಹಾಕಿ ಬೋಲ್ಡ್ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಇದಕ್ಕ ಲೈಕ್ಸ್, ಹಾರ್ಟ್‌ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Tap to resize

ಅಭಿಮಾನಿಗಳು, ಗಾರ್ಜಿಯಸ್‌, ಅಪ್ಸರಾ, ಬ್ಯೂಟಿಫುಲ್‌, ಸ್ವೀಟ್ ಲುಕ್ ಡಾರ್ಲಿಂಗ್‌ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು ಈ ಸಿಜ್ಲಿಂಗ್ ಫೋಟೋಸ್ ನೋಡಿ ಸ್ವೀಟ್ ಪಾಯ್ಸನ್ ಎಂದು ಕರೆದಿದ್ದಾರೆ.

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್‌ ಸದ್ಯ ತೆಲುಗು ಚಿತ್ರರಂಗದಲ್ಲೇ ಫುಲ್ ಬಿಝಿಯಾಗಿದ್ದಾರೆ. ಇವರ ಅಭಿನಯದ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ನಟಿ ಫುಲ್‌ ಆಕ್ಟಿವ್ ಆಗಿದ್ದಾರೆ.

ಮನೋಜ್ಞ ಅಭಿನಯ ಹಾಗೂ ಸೌಂದರ್ಯದಿಂದಲೇ ಅಭಿಮಾನಿಗಳ ಮನಗೆದ್ದವರು ಅನುಪಮಾ ಪರಮೇಶ್ವರನ್​. ಸೋಷಿಯಲ್ ಮೀಡಿಯಾದಲ್ಲಿ ಸೀರೆಯುಟ್ಟು ಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರುತ್ತಾರೆ. ಮಾತ್ರವಲ್ಲ ಜೀನ್ಸ್, ಮಾಡರ್ನ್ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟು ಹುಡುಗರ ನಿದ್ದೆಕೆಡಿಸುತ್ತಾರೆ.

ಅನುಪಮಾ ಪರಮೇಶ್ವರನ್‌ 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. 

ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್‌ ಆಗಾಗ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಮುಂದಿಡುವ ಡಿಮ್ಯಾಂಡ್‌ಗಳಿಗೆ ಉತ್ತರ ನೀಡುತ್ತಾರೆ. ಎಲ್ಲರಿಗೂ ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ.

Latest Videos

click me!