Latest Videos

ಸ್ಟೈಲಿಶ್‌ ಗೌನ್‌ನಲ್ಲಿ ಶೋಭಾ ಶೆಟ್ಟಿ ಹಾಟ್‌ ಲುಕ್, ತಮನ್ನಾ 2 ಎಂದ ನೆಟ್ಟಿಗರು!

First Published May 26, 2024, 5:07 PM IST

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಯಾವಾಗ್ಲೂ ಸಾಂಪ್ರದಾಯಿಕ ಲುಕ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಪೋಸ್ಟ್ ಮಾಡ್ತಿರ್ತಾರೆ. ಇತ್ತೀಚಿಗೆ ಸ್ಟೈಲಿಶ್‌ ಕಾಫಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ.

ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. 

ಇತ್ತೀಚಿಗೆ ಸ್ಟೈಲಿಶ್‌ ಕಾಫಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸ್ಲಿಟ್‌ ಗೌನ್‌ನಲ್ಲಿ ಸಖತ್‌ ಹಾಟ್ ಆಗಿ ಕಾಣಿಸುತ್ತಿದ್ದಾರೆ.

ಶೋಭಾ ಶೆಟ್ಟಿಯ ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲುಕ್ಕಿಂಗ್‌ ಗಾರ್ಜಿಯಸ್‌, ಪ್ರೆಟ್ಟೀ, ಬ್ಯೂಟಿಫುಲ್ ಎಂದೆಲ್ಲಾ ಹೊಗಳಿದ್ದಾರೆ. ಇನ್ನು ಕೆಲವರು ಓವರ್ ಮೇಕಪ್‌ ಎಂದು ತೆಗಳಿದ್ದಾರೆ.

ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯವಾಗಿರುವ ನಟಿ ಶೋಭಾ ಶೆಟ್ಟಿ ತಿಂಗಳುಗಳ ಹಿಂದೆ ತಮ್ಮ ಸಹನಟ ಯಶವಂತ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ-ಯಶವಂತ್‌ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ ತನು ಪಾತ್ರದಲ್ಲಿ ನಟಿಸಿದ್ದರು.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದ್ದರು. ಈ ಸೀರಿಯಲ್‌ನ ಟಿಆರ್‌ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.

ಬಿಗ್‌ಬಾಸ್‌ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.
ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಇನ್ನು ಶೋಭಾ, ಬಿಗ್‌ಬಾಸ್‌ನಲ್ಲಿ ಎಲ್ಲಾ ಸ್ಪರ್ಧಿಗಳಿಗಿಂತಲೂ  ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗ್ತಿತ್ತು. ಅಂದರೆ  ಒಂದು ವಾರಕ್ಕೆ 1.25 ಲಕ್ಷ ರೂಪಾಯಿಯಿಂದ 1.50 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎಂದು ಬಹಿರಂಗ ಪಡಿಸಲಾಗಿತ್ತು

click me!