Sonakshi Sinha’s Beauty Secrets: ಸೋನಾಕ್ಷಿ ಸಿನ್ಹಾಗೆ 38 ವರ್ಷ ತುಂಬಿದ್ದು, ಅವರ ಸುಂದರ ತ್ವಚೆಯ ರಹಸ್ಯ 'Less is More'. ಮೊಯಿಶ್ಚರೈಸ್ ಮಾಡಿಕೊಂಡ ನಂತರ ಅಲೋವೆರಾ ಜೆಲ್, ಜೊಜೊಬಾ ಮತ್ತು ಬಾದಾಮಿ ಎಣ್ಣೆ ಪೇಸ್ಟ್ ಅವರ ತ್ವಚೆಯ ಆರೈಕೆಯ ದಿನಚರಿಯಾಗಿದೆ.
ಬಾಲಿವುಡ್‌ನ ಅತ್ಯಂತ ಪವರ್‌ಫುಲ್ ನಟಿ ಸೋನಾಕ್ಷಿ ಸಿನ್ಹಾ. ಇವರ ಪ್ರತಿಯೊಂದು ಸ್ಟೈಲ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಬೇಗ ವೈರಲ್ ಆಗುತ್ತದೆ. ವಿಶೇಷವಾಗಿ ಸೋನಾಕ್ಷಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾದ ನಂತರ, ಅವರು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂದಹಾಗೆ ಮೊನ್ನೆ ಜೂನ್ 2 ರಂದು ಸೋನಾಕ್ಷಿಗೆ 38 ವರ್ಷ ತುಂಬಿತು. ಆದರೆ ಈ ವಯಸ್ಸಿನಲ್ಲೂ, ಸೋನಾಕ್ಷಿಯ ಸುಂದರ ಮತ್ತು ಹೊಳೆಯುವ ತ್ವಚೆ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಹಾಗಾಗಿ ಸೋನಾಕ್ಷಿ ತನ್ನ ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಯಾವ ದಿನಚರಿಯನ್ನು ಅನುಸರಿಸುತ್ತಾರೆ ಎಂಬುದನ್ನು ನಾವಿಂದು ನೋಡೋಣ..
24
ತ್ವಚೆ ಆರೈಕೆಯಲ್ಲಿ ಸೋನಾಕ್ಷಿಯವರ ಏಕೈಕ ಟಿಪ್ಸ್
ಜನಪ್ರಿಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೋನಾಕ್ಷಿ, ತನ್ನ ಹೆತ್ತವರಿಂದ ಉತ್ತಮ ತ್ವಚೆಯನ್ನು ಅನುವಂಶಿಕವಾಗಿ ಪಡೆದಿದ್ದೇನೆ ಎಂದು ರಿವೀಲ್ ಮಾಡಿದ್ದಾರೆ. ಆದರೆ 30 ವರ್ಷ ದಾಟಿದ ನಂತರ ಸೋನಾಕ್ಷಿ ತನ್ನ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರು. ತ್ವಚೆಯ ಆರೈಕೆಯ ಬಗ್ಗೆ ಅರಿತುಕೊಂಡರು. ತ್ವಚೆಯ ಆರೈಕೆಯ ದಿನಚರಿ ಬಹಳ ಸರಳವಾಗಿದೆ ಎಂದು ಹೇಳಿರುವ ಸೋನಾಕ್ಷಿ, "ತ್ವಚೆಯನ್ನು ಮೊಯಿಶ್ಚರೈಸ್ ಮಾಡಿಕೊಂಡು ನಾನು ಜೊಜೊಬಾ ಮತ್ತು ಬಾದಾಮಿ ಎಣ್ಣೆಯನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುತ್ತೇನೆ. ಇದೇ ನನ್ನ ತ್ವಚೆ ಆರೈಕೆಯ ಮಂತ್ರ." ಎಂದು ತಿಳಿಸಿದ್ದಾರೆ ಸೋನಾಕ್ಷಿ.
34
ತಾಯಿ ಹೇಳಿದ ಮನೆಮದ್ದುಗಳು
ಸೋನಾಕ್ಷಿ ಹೇಳುವಂತೆ ತನ್ನ ತಾಯಿ ತನಗೆ ಅನೇಕ ದೇಸಿ ಬ್ಯೂಟಿ ಮಾಸ್ಕ್‌ಗಳು ಮತ್ತು ಪ್ಯಾಕ್‌ಗಳನ್ನು ತಯಾರಿಸಲು ಕಲಿಸಿದ್ದಾರೆ. ತ್ವಚೆಯು ತುಂಬಾ ಒಣಗಿದಾಗ, ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಲು ಸಲಹೆ ನೀಡುತ್ತಾರೆ. ತಾಯಿ ತುಂಬಾ ಇಷ್ಟಪಡುವ ಒಂದು ವಿಶೇಷ ವಿಧಾನವೆಂದರೆ ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾದ ಪೇಸ್ಟ್. ತಾಜಾ ಅಲೋವೆರಾ ಎಲೆ ಕತ್ತರಿಸಿ ನೇರವಾಗಿ ಮುಖದ ಮೇಲೆ ಉಜ್ಜುತ್ತಾರೆ. ಸೋನಾಕ್ಷಿ ಪ್ರಕಾರ, "ಇದು ತುಂಬಾ ಉಲ್ಲಾಸಕರವೆನಿಸುತ್ತದೆ ಮತ್ತು ಚರ್ಮಕ್ಕೆ ಹೊಸ ಜೀವ ನೀಡುತ್ತದೆ."
ಸೋನಾಕ್ಷಿ ಮಾತ್ರವಲ್ಲ, ಎಲ್ಲಾ ಸೌಂದರ್ಯ ತಜ್ಞರು ಹೇಳುವ ಪ್ರಕಾರ, ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಜೆಲ್ ಎರಡೂ ತ್ವಚೆಗೆ ಉತ್ತಮ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಮುಲ್ತಾನಿ ಮಿಟ್ಟಿ ನಿಮ್ಮ ಮುಖದ ಮೇಲಿನ ಮೊಡವೆಗಳಿಗೆ ಒಂದು ವರದಾನವಾಗಿದೆ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ತಾತ್ಕಾಲಿಕವಾಗಿ ರಂಧ್ರಗಳನ್ನು ಕುಗ್ಗಿಸುತ್ತದೆ. ಹೆಲ್ತ್‌ಲೈನ್ ಪ್ರಕಾರ, ಅಲೋವೆರಾವು ಆರ್ಧ್ರಕ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ಅದು ಎಸ್ಜಿಮಾ, ಬಿಸಿಲಿನ ಬೇಗೆ ಮತ್ತು ಒಣ ಚರ್ಮಕ್ಕೆ ಪರಿಹಾರ ನೀಡುತ್ತದೆ.