ಪ್ರೇಮಾನಂದ ಜೀ ಮಹಾರಾಜರ (Premanadaji Maharaj) ಆಶ್ರಮಕ್ಕೆ ಅವರ ಪ್ರವಚನಗಳನ್ನು ಕೇಳಲು ಅನೇಕ ಭಕ್ತರು ಬರುತ್ತಾರೆ. ಈ ಸಮಯದಲ್ಲಿ, ಜನರು ಮಹಾರಾಜ ಜೀ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ, ಇದು ಅನೇಕ ಜನರ ಸಂದಿಗ್ಧತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಬಾರಿ ಈ ಸಂದರ್ಭದಲ್ಲಿ ಟ್ಯಾಟೂ ಬಗ್ಗೆ ಪ್ರಶ್ನೆ ಕೇಳಿದ್ದು, ಆ ಬಗ್ಗೆ ಪ್ರೇಮಾನಂದ ಮಹಾರಾಜ್ ಏನು ಹೇಳಿದ್ದಾರೆ ನೋಡೋಣ.
28
ಇತ್ತೀಚಿನ ದಿನಗಳಲ್ಲಿ ಹಚ್ಚೆ (Tattoo trend) ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದ್ದು, ಅದು ಫ್ಯಾಷನ್‌ನ ಒಂದು ಭಾಗವೂ ಆಗಿದೆ. ಆದರೆ ಕೆಲವೊಮ್ಮೆ ಜನರು ಹಚ್ಚೆ ಹಾಕಿಸಿಕೊಳ್ಳುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ, ಆ ತಪ್ಪುಗಳು ಮುಂದೆ ನಿಮ್ಮನ್ನು ಪಾಪದ ಭಾಗವಾಗಿಸಬಹುದು.
38
ಅನೇಕ ಬಾರಿ ಜನರು ದೇವರಲ್ಲಿ ತಮ್ಮ ನಂಬಿಕೆಯನ್ನು ತೋರಿಸಲು ತಮ್ಮ ದೇಹದ ಮೇಲೆ ದೇವರ ಹಚ್ಚೆ (Tattoo of God) ಹಾಕಿಸಿಕೊಳ್ಳುತ್ತಾರೆ. ಶಿವನ ದೊಡ್ಡದಾದ ಚಿತ್ರ, ತ್ರಿಶೂಲ, ಡಮಾರು, ದುರ್ಗಾ ದೇವಿ, ಶ್ರೀಕೃಷ್ಣಾ, ನರಸಿಂಹ… ಹೀಗೆ ಬೇರೆ ಬೇರೆ ದೇವರ ಟ್ಯಾಟೂ ಹಾಕಿಸುತ್ತಾರೆ.
ಪ್ರೇಮಾನಂದ ಜಿ ಮಹಾರಾಜ್ ಇತ್ತೀಚೆಗೆ ದೇಹದ ಮೇಲೆ ದೇವರ ಹಚ್ಚೆ ಹಾಕಿಸಿಕೊಳ್ಳಬೇಕೇ ಅಥವಾ ಬೇಡವೇ ಎಂದು ಹೇಳಿದ್ದಾರೆ. ನೀವು ಕೂಡ ದೇಹದ ಮೇಲೆ ಯಾವುದೇ ದೇವರ ಟ್ಯಾಟೂ ಹಾಕಿಸುವ ಪ್ಲ್ಯಾನ್ ಮಾಡಿದ್ರೆ, ಅದಕ್ಕೂ ಮುನ್ನ ಹಾಕೋದು ಸರೀನಾ? ತಪ್ಪಾ ? ಅನ್ನೋದನ್ನು ತಿಳಿಯೋದು ಉತ್ತಮ.
58
ದೇವರೆಂದರ ಒಂದು ಶಕ್ತಿ, ಅದೇ ರೀತಿಯ ದೇವರ ನಾಮಕ್ಕೆ ಅಪಾರ ಶಕ್ತಿ ಇದೆ ಮತ್ತು ಆತನ ನಾಮ ಜಪಿಸುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ, ಭಕ್ತಿಯಿಂದ ನಾಮಜಪ ಮಾಡಿದ್ರೆ, ದೇವರ ಆಶೀರ್ವಾದ ಯಾವಾಗ್ಲೂ ನಮ್ಮ ಮೇಲಿರುತೆ ಎಂದು ಪ್ರೇಮಾನಂದ್ ಜಿ ಮಹಾರಾಜ್ ಹೇಳುತ್ತಾರೆ.
68
ಆದರೆ ದೇಹದ ಯಾವುದೇ ಭಾಗದಲ್ಲಿ ದೇವರ ಚಿತ್ರ ಅಥವಾ ಹಚ್ಚೆ ಹಾಕಿಸಿಕೊಳ್ಳಬಾರದು ಎನ್ನುತ್ತಾರೆ ಪ್ರೇಮಾನಂದ ಜೀ. ಯಾಕೆ ದೇವರ ಟ್ಯಾಟೂ ಹಾಕಿಸಬಾರದು. ಹಾಕಿದ್ರೆ ಏನಾಗುತ್ತೆ? ಸಮಸ್ಯೆ ಏನು ಅನ್ನೋದನ್ನು ನೋಡೋಣ.
78
ದೇಹದ ಮೇಲೆ ದೇವರ ಹಚ್ಚೆ ಹಾಕಬಾರದು, ಯಾಕಂದ್ರೆ ಸ್ನಾನ ಮಾಡುವಾಗ ನೀರು ದೇಹದ ಮೇಲೆ ಬೀಳುತ್ತದೆ ಮತ್ತು ಅದೇ ನೀರು ದೇವರ ಹಚ್ಚೆಯ ಮೇಲೂ ಹೋಗುತ್ತದೆ, ಅದು ದೇವರಿಗೆ ಮಾಡುವಂತಹ ಅವಮಾನ (disrespecting god) ಎನ್ನುತ್ತಾರೆ ಪ್ರೇಮಾನಂದ ಜೀ.
88
ಅಷ್ಟೇ ಅಲ್ಲ, ನಾವು ದಿನವಿಡೀ ಅನೇಕ ಅಶುದ್ಧ ವಸ್ತುಗಳನ್ನು ಮುಟ್ಟುತ್ತೇವೆ, ಕೆಟ್ಟ ಕೆಲಸಗಳನ್ನು ಕೂಡ ಮಾಡುತ್ತೇವೆ, ನಂತರ ಅದೇ ಕೈಗಳಿಂದ ದೇವರ ಹಚ್ಚೆಯನ್ನು ಮುಟ್ಟುತ್ತೇವೆ. ಇದೆಲ್ಲವೂ ದೇವರಿಗೆ ಮಾಡುವಂತಹ ಅವಮಾನವಾಗಿದೆ. ಹಾಗಾಗಿ, ಟ್ಯಾಟೂ ಹಾಕೋದನ್ನು ತಪ್ಪಿಸಿ ಎನ್ನುತ್ತಾಅರೆ ಪ್ರೇಮಾನಂದ ಮಹಾರಾಜರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.