ನೇರಳೆ ಬಣ್ಣದ ಸೀರೇಲಿ ಮಿಂಚಿದ ಅನುಪಮಾ ಗೌಡ, ಮೂಗುತಿ ಇದ್ದಿದ್ರೆ ಇನ್ನೂ ಸೂಪರ್ ಆಗಿ ಕಾಣಿಸ್ತಿತ್ತು ಎಂದ ಫ್ಯಾನ್ಸ್!

Published : Mar 13, 2024, 02:02 PM IST

ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ನೇರಳೆ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. 

PREV
18
ನೇರಳೆ ಬಣ್ಣದ ಸೀರೇಲಿ ಮಿಂಚಿದ ಅನುಪಮಾ ಗೌಡ, ಮೂಗುತಿ ಇದ್ದಿದ್ರೆ ಇನ್ನೂ ಸೂಪರ್ ಆಗಿ ಕಾಣಿಸ್ತಿತ್ತು ಎಂದ ಫ್ಯಾನ್ಸ್!

ನಿರೂಪಕಿಯಾಗಿ ಎಲ್ಲರ ಮನಸ್ಸು ಗೆದ್ದಿರುವಾಕೆ ಅನುಪಮಾ ಗೌಡ. ಮೊದಲು ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದು,ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಎಲ್ಲರ ಮನಗೆಲ್ಲುತ್ತಿದ್ದಾರೆ.

28

ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನೇರಳೆ ಬಣ್ಣದ ಸೀರೆಯುಟ್ಟು ಮುದ್ದಾಗಿ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.

38

ಅನುಪಮಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೊಗಳಲು ಪದಗಳೇ ಸಾಲವು, ಸೋ ಕ್ಯೂಟ್, ಬರ್ತಾ ಬರ್ತಾ ವಯಸ್ಸು ಕಮ್ಮಿ ಆಗ್ತಾ ಇದೆ, ನಗು ಚೆಂದ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿ ಹೊಗಳಿದ್ದಾರೆ.

48

ಮತ್ತೆ ಕೆಲವರು, ಪರ್ಪಲ್ ಬ್ಯೂಟಿ, ಸುಂದ್ರಿ, ಅನು ಬ್ಯೂಟಿ, ಸ್ಯಾರಿಯಲ್ಲಿ ನೀವು ಅದ್ಭುತವಾಗಿ ಕಾಣುತ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, 'ಮೂಗುತಿ ಇದ್ದಿದ್ರೆ ಇನ್ನೂ ಸೂಪರ್ ಆಗಿ ಕಾಣಿಸ್ತಾ ಇತ್ತು' ಎಂದು ಹೊಗಳಿದ್ದಾರೆ.

58

ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ. ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು. 

68

ಆ ನಂತರ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

78
Anupama gowda

ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.

88

ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. 

Read more Photos on
click me!

Recommended Stories