ಬಾಲಿವುಡ್‌ ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಈ ಮಹಿಳೆ, ಅಬ್ಬಬ್ಬಾ ಡ್ರೆಸ್ ಸಜೆಸ್ಟ್ ಮಾಡೋಕೆ ಇಷ್ಟೊಂದು ಸ್ಯಾಲರಿನಾ?

Published : Nov 02, 2023, 02:38 PM ISTUpdated : Nov 02, 2023, 02:46 PM IST

ಶಾರೂಕ್‌ ಖಾನ್, ದೀಪಿಕಾ ಪಡುಕೋಣೆ ಮತ್ತು ಕಿಯಾರಾ ಅಡ್ವಾಣಿ ಅವರಂತಹವರು ಸ್ವತಃ ತಾವು ಧರಿಸುವ ಸ್ಟೈಲಿಶ್‌ ಡ್ರೆಸ್‌ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನೀವು ಭಾವಿಸಿದರೆ ತಪ್ಪು. ಆದರೆ ಈ ಸೆಲೆಬ್ರಿಟಿಗಳ ವಾರ್ಡ್‌ರೋಬ್‌ನ್ನು ಪ್ರಮುಖ ಮಹಿಳೆಯೊಬ್ಬರು ನಿರ್ಧರಿಸುತ್ತಾರೆ. ಇವರು ಭಾರತದ ಖ್ಯಾತ ಫ್ಯಾಷನ್ ಸ್ಟೈಲಿಸ್ಟ್ ಆಗಿದ್ದಾರೆ.

PREV
17
ಬಾಲಿವುಡ್‌ ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಈ ಮಹಿಳೆ, ಅಬ್ಬಬ್ಬಾ ಡ್ರೆಸ್ ಸಜೆಸ್ಟ್ ಮಾಡೋಕೆ ಇಷ್ಟೊಂದು ಸ್ಯಾಲರಿನಾ?

ದೇಶದ ಟಾಪ್ ಸ್ಟಾರ್‌ಗಳು ಫ್ಯಾಷನ್‌ನಲ್ಲೂ ಟ್ರೆಂಡ್‌ಸೆಟರ್‌ಗಳಾಗಿದ್ದಾರೆ. ಅವರು ಇಂದು ಧರಿಸುವ ಉಡುಪು ನಾಳೆ ಫ್ಯಾಷನ್ ಆಗುತ್ತದೆ. ಹೀಗಾಗಿ ದೇಶದ ಟಾಪ್ ಚಲನಚಿತ್ರ ತಾರೆಯರು ತಾವು ಧರಿಸುವ ಬಟ್ಟೆಯ ಬಗ್ಗೆ ಸಾಕಷ್ಟು ನಿರ್ಧಿಷ್ಟವಾಗಿರುತ್ತಾರೆ. ಸರಳವಾಗಿದ್ದರೂ ಡಿಫರೆಂಟ್ ಆಗಿರುವ, ಅಟ್ರ್ಯಾಕ್ಟಿವ್ ಆಗಿರುವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

27

ಶಾರೂಕ್‌ ಖಾನ್, ದೀಪಿಕಾ ಪಡುಕೋಣೆ ಮತ್ತು ಕಿಯಾರಾ ಅಡ್ವಾಣಿ ಅವರಂತಹವರು ಸ್ವತಃ ತಾವು ಧರಿಸುವ ಸ್ಟೈಲಿಶ್‌ ಡ್ರೆಸ್‌ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನೀವು ಭಾವಿಸಿದರೆ ತಪ್ಪು. ಆದರೆ ಈ ಸೆಲೆಬ್ರಿಟಿಗಳ ವಾರ್ಡ್‌ರೋಬ್‌ನ್ನು ಪ್ರಮುಖ ಮಹಿಳೆಯೊಬ್ಬರು ನಿರ್ಧರಿಸುತ್ತಾರೆ. ಇವರು ನಗರದ ಖ್ಯಾತ ಫ್ಯಾಷನ್ ಸ್ಟೈಲಿಸ್ಟ್ ಆಗಿದ್ದಾರೆ.

37

ಟಾಪ್ ಬಾಲಿವುಡ್ ತಾರೆಗಳ ಸ್ಟೈಲಿಸ್ಟ್ ಶಲೀನಾ ನಥಾನಿ. ಪ್ರಮುಖ ಫ್ಯಾಷನ್ ಸ್ಟೈಲಿಸ್ಟ್ ಆಗಿರುವ ಶಲೀನಾ ನಥಾನಿ, ಶಾರೂಕ್‌ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ವೈಯಕ್ತಿಕ ಸ್ಟೈಲಿಸ್ಟ್ ಎಂದೇ ಪ್ರಸಿದ್ಧರಾಗಿದ್ದಾರೆ. ಫ್ಯಾಷನ್ ಕನ್ಸಲ್ಟೆಂಟ್ ಹಾಗೂ ಅಥ್ಲೀಷರ್ ಮಾಡೆಲ್ ಆಗಿರುವ ಶಲೀನಾಗೆ ಫ್ಯಾಷನ್ ಬಗ್ಗೆ ಆಸಕ್ತಿ ಇದ್ದರೂ ಅದನ್ನೇ ವೃತ್ತಿಯಾಗಿ ತೆಗೆದುಕೊಂಡಿರಲಿಲ್ಲ. 

47

ಆದರೆ, ಫ್ಯಾಶನ್ ಮ್ಯಾಗಜೀನ್‌ನಲ್ಲಿ ಇಂಟರ್ನ್‌ಶಿಪ್ ಮುಗಿದ ನಂತರ ಇದೇ ವೃತ್ತಿಯನ್ನು ಆಯ್ದುಕೊಳ್ಳಲು ನಿರ್ಧರಿಸಿದರು. ವರದಿಗಳ ಪ್ರಕಾರ, ಶಲೀನಾ ತನ್ನ ಸೆಲೆಬ್ರಿಟಿ ಕ್ಲೈಂಟ್‌ಗಳಿಂದ ಪ್ರತಿ ಶಿಫ್ಟ್‌ಗೆ 75,000 ರಿಂದ 1 ಲಕ್ಷ ರೂ. ಆಗಿದೆ. ಹಲವಾರು ಟಾಪ್‌ ನಟ-ನಟಿಯರಿಗೆ ಈಕೆ ಫ್ಯಾಷನ್ ಸ್ಟೈಲಿಸ್ಟ್ ಆಗಿದ್ದಾರೆ. ಈ ತಾರೆಗಳು ಹಲವು ವಿಭಿನ್ನ ದಿರಿಸುಗಳಲ್ಲಿ ಕಾರ್ಯಕ್ರಮಗಳಲ್ಲಿ ಮಿಂಚುವುದನ್ನು ನೋಡಬಹುದು.

57

ಪ್ರಸ್ತುತ ಈಗ ಶಲೀನಾ ನಥಾನಿ, ಶಾರೂಕ್‌ ಖಾನ್‌, ಮತ್ತು ದೀಪಿಕಾ ಮಾತ್ರವಲ್ಲದೆ ತಮನ್ನಾ ಭಾಟಿಯಾ, ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಶ್ರದ್ಧಾ ಕಪೂರ್, ಭೂಮಿ ಪೆಡ್ನೇಕರ್ ಮತ್ತು ರಾಧಿಕೆ ಆಪ್ಟೆ ಅವರಂತಹ ಇತರ ಉನ್ನತ ತಾರೆಗಳ ಸ್ಟೈಲಿಸ್ಟ್ ಆಗಿದ್ದಾರೆ. 

67

ಸಂದರ್ಶನವೊಂದರಲ್ಲಿ, ಸ್ಟೈಲಿಸ್ಟ್ ಕೆಲಸವು ಸರಳವಲ್ಲ ಎಂದು ಶಲೀನಾ ಬಹಿರಂಗಪಡಿಸಿದ್ದರು. ವರದಿಗಳ ಪ್ರಕಾರ ಶಲೀನಾ, ಶಾರೂಕ್‌ಗೆ ಗಾಢ ಬಣ್ಣಗಳು ಇಷ್ಟವಿಲ್ಲ. ಆದ್ದರಿಂದ ಕಡು ನೀಲಿ ಅಥವಾ ಕಪ್ಪು ಬಟ್ಟೆ ಡಿಸೈನ್ ಮಾಡಿದಾಗ ಇದು ತಿಳಿ ಬಣ್ಣ ಎಂದು ಸುಳ್ಳು ಹೇಳುತ್ತಿದ್ದೆ ಎಂದಿದ್ದಾರೆ. 

77

ನಟನ ಆಲಿವ್ ತ್ವಚೆಯ ಮೇಲೆ ಗಾಢ ಬಣ್ಣಗಳು ಚೆನ್ನಾಗಿ ಕಾಣುವುದರಿಂದ ಅದನ್ನು ಮಾಡುತ್ತೇನೆ ಎಂದು ಅವರು ಹೇಳಿದರು. ಅದೇ ಸಂದರ್ಶನದಲ್ಲಿ, ಶಾಲೀನ್ SRK ಅವರ ವಾರ್ಡ್‌ರೋಬ್‌ನಲ್ಲಿ ಭಾರತದಲ್ಲಿ ಲಭ್ಯವಿಲ್ಲದ ಹಲವಾರು ಬ್ರ್ಯಾಂಡ್‌ಗಳಿವೆ ಎಂದು ಬಹಿರಂಗಪಡಿಸಿದರು.

Read more Photos on
click me!

Recommended Stories