ಈ ಎರಡು ಜ್ಯೂಸ್ ಕೇವಲ 15 ದಿನಗಳಲ್ಲಿ ಮುಖದ ಕಲೆ ಮಾಯವಾಗಿಸುತ್ತೆ!

First Published | Oct 26, 2023, 6:04 PM IST

ನೀವು ಈ ಎರಡೂ ಜ್ಯೂಸ್ ಗಳನ್ನು ಕುಡಿದರೆ, ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ಮುಖದ ಮೇಲೆ ಹಠಮಾರಿ ಕಲೆಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಅವು ಯಾವುವು ಅನ್ನೋದನ್ನು ತಿಳಿಯೋಣ. 
 

ಪ್ರತಿಯೊಬ್ಬರೂ ತಮ್ಮ ಸ್ಕಿನ್ (skin care) ಬಗ್ಗೆ ತುಂಬಾ ಚಿಂತಿತರಾಗಿರುತ್ತಾರೆ. ಅದರಲ್ಲೂ ಚಳಿಗಾಲ ಬಂದ್ರೆ ಸಾಕು, ಸಾಕಷ್ಟು ಸ್ಕಿನ್ ಪ್ರಾಬ್ಲಮ್ಸ್ ಕಾಣಿಸಿಕೊಳ್ಳುತ್ತವೆ. ಇದರಿಂದ ಸ್ಕಿನ್ ಯಾವ ರೀತಿ ಚೆನ್ನಾಗಿ ಇಟ್ಟುಕೊಳ್ಳೋದು ಅನ್ನೋ ಚಿಂತೆ ಕಾಡಲು ಶುರುವಾಗುತ್ತೆ. ನಿಮಗೂ ಹಾಗೆ ಅನಿಸಿದ್ರೆ ಕೆಲವೊಂದು ಜ್ಯೂಸ್ ನಿಮ್ಮ ಸಹಾಯಕ್ಕೆ ಬರುತ್ತೆ.

ಚಳಿಗಾಲದಲ್ಲಿ, ಸಾಕಷ್ಟು ವರ್ಣರಂಜಿತ ತರಕಾರಿ (colorful vegetables) ಮತ್ತು ಹಣ್ಣುಗಳು ದೊರೆಯುತ್ತವೆ. ಈ ಋತುವಿನಲ್ಲಿ ತರಕಾರಿಗಳು ತುಂಬಾ ಅಗ್ಗವಾಗಿರುತ್ತವೆ, ಆದ್ದರಿಂದ ತಿನ್ನುವ ಆನಂದ ದ್ವಿಗುಣಗೊಳ್ಳುತ್ತದೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೂ ಉತ್ತಮ ಆಹಾರಗಳೂ ಇರುತ್ತವೆ. 
 

Tap to resize

ಬೀಟ್ರೂಟ್ ಮತ್ತು ಆಮ್ಲಾ (Beetroot and amla) ಕೂಡ ಈ ಋತುವಿನಲ್ಲಿ ಕಡಿಮೆ ದರದಲ್ಲಿ ದೊರೆಯುತ್ತವೆ. ಹಾಗಾಗಿ, ಜನರು ಬೀಟ್ರೂಟ್ ಸಲಾಡ್ ಮತ್ತು ನೆಲ್ಲಿಕಾಯಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ನೀವು ಈ ಎರಡೂ ಜ್ಯೂಸ್ ಮಾಡಿ ಕುಡಿದರೆ, ಅದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಮುಖದ ಮೇಲಿನ ಹಠಮಾರಿ ಕಲೆಗಳ ಪರಿಣಾಮವನ್ನು ಸಹ ಕಡಿಮೆ ಮಾಡಬಹುದು. 
 

ಬೀಟ್ರೂಟ್ ಮತ್ತು ನೆಲ್ಲಿಕಾಯಿ ಜ್ಯೂಸ್
ಬೀಟ್ರೂಟ್ ಮತ್ತು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಚರ್ಮಕ್ಕೆ ಒಂದಲ್ಲ, ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಎರಡರ ಜ್ಯೂಸ್ ಕುಡಿಯುವುದರಿಂದ ಚರ್ಮವನ್ನು ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಇವೆರಡೂ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಹಾಗಾಗಿ ಚರ್ಮವು ಆರೋಗ್ಯದಿಂದ (healthy skin) ಇರಲು ಸಹಾಯ ಮಾಡುತ್ತೆ.

ಆಮ್ಲಾದಲ್ಲಿ ವಿಟಮಿನ್ ಸಿ (Vitamin C) ಸಮೃದ್ಧವಾಗಿದೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಅಲ್ಲದೇ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಜೊತೆಗೆ ಹೈಪರ್ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಚರ್ಮದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಸ್ಕಿನ್ ಹೊಳೆಯುತ್ತದೆ.

ಈ ಎರಡರ ಜ್ಯೂಸ್ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ನಿಮ್ಮ ಚರ್ಮವು ಹೈಡ್ರೇಟ್ ಆಗಿದ್ದರೆ, ವಯಸ್ಸಾದ ಚಿಹ್ನೆಯ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ನಿಮ್ಮ ಚರ್ಮವನ್ನು ಮೃದುವಾಗಿ (soft skin) ಮತ್ತು ಹೊಳೆಯುವಂತೆ ಮಾಡುತ್ತದೆ. 
 

 ಬಿಟ್ರೂಟ್ ಮತ್ತು ನೆಲ್ಲಿಕಾಯಿ ಈ ಎರಡೂ ಜ್ಯೂಸ್ ಗಳು ಅವುಗಳ ನಿರ್ವಿಷೀಕರಣ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿವೆ. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. 

Latest Videos

click me!