ಸುಸ್ಸೂ ಮಾಡಿಕೊಂಡಂತೆ ಕಾಣೋ ಈ ಜೀನ್ಸ್ ಬೆಲೆ ಬರೋಬ್ಬರಿ 50,000 ರೂ! ಯಾರ್ರೀ ಧರಿಸ್ತಾರೆ?

First Published | Apr 28, 2024, 11:54 AM IST

ಫ್ಯಾಶನ್ ಹೆಸರಿನಲ್ಲಿ ಏನೇನೆಲ್ಲ ಮಾಡ್ತಾರ್ರೀ? ಯಾರಾದ್ರೂ ಪ್ಯಾಂಟಲ್ಲಿ ಸುಸ್ಸೂ ಮಾಡ್ಕೊಂಡ್ರೆ ಅಸಹ್ಯ ಅಂತಾರೆ, ಅದೇ ಪ್ಯಾಂಟನ್ನು ಮೂತ್ರದ ಕಲೆಯಂತೆ ಮಾಡಿ ಮಾರಿದ್ರೆ 50,000 ರುಪಾಯಿಗೆ ಕೊಳ್ತಾರೆ!
 

ಫ್ಯಾಶನ್ ಜಗತ್ತಿನಲ್ಲಿ ಸೃಜನಶೀಲತೆಗೆ ಯಾವುದೇ ಮಿತಿಯಿಲ್ಲ ಎಂಬುದು ನಿಜವೇ? ಆದರೆ, ಹೀಗೆ ಸುಸ್ಸೂ ಮಾಡಿಕೊಂಡಂತೆ ಕಾಣೋ ಜೀನ್ಸ್ ಸೃಜನಶೀಲತೆಯೋ ಅಥವಾ ಮರುಳೋ ತಿಳಿದವರು ಹೇಳಬೇಕು. 

ಖ್ಯಾತ ವಿನ್ಯಾಸಕಾರರಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಅವರ ಮೆದುಳಿನ ಕೂಸು ಜೋರ್ಡಾನ್ಲುಕಾ ತಮ್ಮ ಇತ್ತೀಚಿನ ಡೆನಿಮ್ ಪ್ಯಾಂಟನ್ನು ಪ್ರದರ್ಶಿಸಿದ್ದಾರೆ.
 

Tap to resize

ಈ ಪುರುಷರ ಜೀನ್ಸ್ ಪ್ಯಾಂಟ್‌ಗಳು ತೊಡೆಸಂದು ಪ್ರದೇಶದಲ್ಲಿ ಕಪ್ಪು ಕಲೆಯನ್ನು ಹೊಂದಿದೆ, ನೀವು ಅದರಲ್ಲಿ ಮೂತ್ರ ವಿಸರ್ಜಿಸಿದಂತೆ ಕಾಣಿಸುತ್ತದೆ. ಇಂಥಾ ಈ ವೈಪರೀತ್ಯದ ಅವತಾರಕ್ಕಾಗಿ ಬರೋಬ್ಬರಿ 50000 ರೂಪಾಯಿ ಕೊಟ್ಟು ಕೊಳ್ಳಬೇಕಂತೆ!

ನಿಜವಾಗಿ ಮೂಲ ಜೀನ್ಸ್‌ಗಳು $811 (ಅಂದಾಜು ₹67,6000) ಭಾರಿ ಬೆಲೆಯೊಂದಿಗೆ ಬರುತ್ತವೆ. ಬ್ರಿಟಿಷ್-ಇಟಾಲಿಯನ್ ಪುರುಷರ ಉಡುಪುಗಳು ಈಗ ಅದೇ ಜೀನ್ಸ್‌ನ ಹಗುರವಾದ ತೊಳೆಯುವಿಕೆಯನ್ನು $608 (ಸುಮಾರು ₹50,000) ಗೆ ಮಾರಾಟ ಮಾಡುತ್ತಿವೆ.

ಈ ಜೀನ್ಸ್ ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. 'ಇಷ್ಟೊಂದು ಮೊತ್ತ ಕೊಟ್ಟು ಇಂಥ ಜೀನ್ಸ್ ಧರಿಸೋ ಬದಲು ನಾನೇ ಸುಸ್ಸೂ ಮಾಡಿಕೊಂಡು ಈ ಬ್ರ್ಯಾಂಡಿನದು ಎನ್ನುತ್ತೇನೆ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮತ್ತೊಬ್ಬರು ಕಾಮೆಂಟ್ ಮಾಡಿ, 'ನಮ್ಮ ಹಳೆಯ ಜೀನ್ಸ್ ಮೇಲೇ ಕೊಂಚ ಎಣ್ಣೆ ಸುರಿದು ಕಲೆ ಮಾಡಿಕೊಂಡರೂ ಆದೀತು, ಹೀಗೆಯೇ ಕಾಣುತ್ತದೆ' ಎಂದಿದ್ದಾರೆ. ಇನ್ನೊಬ್ಬರು 'ಈ ಜೀನ್ಸ್ ಬೆಲೆ ಕೇಳಿದರೇ ಮೂತ್ರ ಮಾಡಿಕೊಳ್ಳುವಂತಾಗುತ್ತದೆ' ಎಂದಿದ್ದಾರೆ.

ತಾಯಿಯೊಬ್ಬರು ಕಾಮೆಂಟ್ ಮಾಡಿ, 'ನನ್ನ ಮಗುವಿನ ಬಟ್ಟೆ ಪ್ರತಿದಿನ ಇದೇ ಫ್ಯಾಶನ್‌ನಲ್ಲಿ ಇರುತ್ತದೆ. ನನ್ನ ಕಂದ ದೊಡ್ಡ ಫ್ಯಾಶನ್ ವಿನ್ಯಾಸಕಾರ' ಎಂದಿದ್ದಾರೆ. ಇಷ್ಟಕ್ಕೂ ಇಂಥ ಪ್ಯಾಂಟನ್ನು ಯಾರು ಯಾಕಾದರೂ ಧರಿಸುತ್ತಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. 

ಚಿತ್ರವಿಚಿತ್ರ ಫ್ಯಾಶನ್
ಇದೆಂಥಾ ಫ್ಯಾಶನ್? ಫ್ಯಾಶನ್ ಹೆಸರಲ್ಲಿ ಏನೆಲ್ಲ ಮಾಡುತ್ತಿದ್ದೇವೆ? ಯಾರಾದರೂ ಬಡವ ಹರಿದ ಜೀನ್ಸ್ ಧರಿಸಿದ್ದರೆ, ಭಿಕ್ಷುಕ ಎನ್ನುತ್ತೇವೆ. ಅದೇ ಶ್ರೀಮಂತರು ಧರಿಸಿದರೆ ಫ್ಯಾಶನ್. ಯಾರೋ ಪ್ಯಾಂಟಿನಲ್ಲಿ ಅಸಹಾಯಕತೆಯಿಂದ ಮೂತ್ರ ಮಾಡಿಕೊಂಡರೆ ಅಸಹ್ಯ ಮಾಡಿಕೊಳ್ಳುತ್ತೇವೆ. ಅದೇ ಬ್ರ್ಯಾಂಡೆಂಡ್ ಜೀನ್ಸ್ ಕಂಪನಿ ಹಾಗೆ ಮಾಡಿದರೆ ಎಷ್ಟು ಸಾವಿರವಾದರೂ ಕೊಟ್ಟು ಧರಿಸುತ್ತಾರೆ. ಜೀನ್ಸ್ ಒಳಉಡುಪುಗಳು, ಮಣ್ಣು ಮೆತ್ತಿದಂತೆ ಕಾಣೋ ಪ್ಯಾಂಟ್.. ಫ್ಯಾಶನ್ ಜಗತ್ತು ಕ್ರಿಯೇಟಿವಿಟಿ ಮತ್ತು ಅತಿರೇಖಗಳ ನಡುವೆ ವ್ಯತ್ಯಾಸ ಗುರುತಿಸಬೇಕಿದೆ. 

Latest Videos

click me!