ಪಿಂಕ್ ಸೀರೆಯಲ್ಲಿ ಮಿಂಚಿದ ಚಾರು, ಸೀರೇಲಿ ಹುಡುಗಿರ ನೋಡಲೇಬಾರ್ದು ಅಂತಿದ್ದಾರೆ ಫ್ಯಾನ್ಸ್‌!

First Published | May 15, 2024, 2:21 PM IST

ರಾಮಾಚಾರಿ ಧಾರಾವಾಹಿಯ ನಟಿ ಚಾರು ಉರ್ಫ್‌ ಮೌನ ಗುಡ್ಡೆಮನೆ, ಪಿಂಕ್‌ ಕಲರ್‌ ಸೀರೆಯುಟ್ಟು ಮುದ್ದಾಗಿ ಫೋಟೋಸ್‌ಗೆ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು Mrs ರಾಮಾಚಾರಿ ಅಂದ್ರೆ ಸುಮ್ನೆನಾ ಅಂತ ಕಾಮೆಂಟ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೆಮನೆ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುವ ಚಾರು, ಹೆಚ್ಚಾಗಿ ತಮ್ಮ ಸೋಶಿಯಲ್ ಮಿಡಿಯಾದಲ್ಲೂ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡುತ್ತಿರುತ್ತಾರೆ. 

Tap to resize

ಈ ಬಾರಿ ಚಾರು ಪಿಂಕ್‌ ಕಲರ್‌ ಸೀರೆಯುಟ್ಟು ಮುದ್ದಾಗಿ ಫೋಟೋಸ್‌ಗೆ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಬ್ಯೂಟಿಫುಲ್‌, ಪ್ರೆಟ್ಟೀ, ಕ್ಯೂಟ್, ಗಾರ್ಜಿಯಸ್ ಎಂದೆಲ್ಲಾ ಹೊಗಳಿದ್ದಾರೆ.

ಮತ್ತೆ ಕೆಲ ಅಭಿಮಾನಿಗಳು,  Mrs ರಾಮಾಚಾರಿ ಅಂದ್ರೆ ಸುಮ್ನೆನಾ, ಶ್ರೀಗಂಧದ ಗೊಂಬೆ ತರ ಕಾಣ್ಸ್ತಾ ಇದೀರಾ, ಸೀರೆಲಿ ಹುಡುಗಿರ ನೋಡಲೆ‌ ಬಾರದು ನಿಲ್ಲಲ್ಲ ಟೆಂಪ್ರೆಚರು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ರಾಮಾಚಾರಿ -ಚಾರುಗಳಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದ್ದು, ಅಭಿಮಾನಿಗಳಂತೂ ಇಬ್ಬರನ್ನೂ ಸದಾ ಜೊತೆಯಾಗಿ ನೋಡಲು ಕಾಯ್ತಿರ್ತಾರೆ. ಇಲ್ಲೂ ಸಹ ನೀವು ಚೆನ್ನಾಗಿ ಕಾಣಿಸ್ತಿದ್ದೀರಾ, ನಿಮ್ಮ ಜೊತೆ ನಮ್ಮ ರಾಮಾಚಾರಿ ರಿತ್ವಿಕ್ ಇರ್ತಿದ್ರೆ ಮತ್ತೂ ಚೆನ್ನಾಗಿ ಕಾಣಿಸ್ತಿದ್ರು ಎಂದು ತಿಳಿಸಿದ್ದಾರೆ.

ಸೀರಿಯಲ್ ಬಗ್ಗೆ ಹೇಳೋದಾದರೆ ಚಾರು ಈಗ ತನ್ನ ಕುಟುಂಬಕ್ಕೆ ಅಪಾಯ ಮಾಡುತ್ತಿರೋರು ಯಾರು ಎಂದು ಕಂಡು ಹಿಡಿಯಲು ಹೊರಟಿದ್ದಾಳೆ. ಇತ್ತ ವೈಶಾಖ ಗರ್ಭಿಣಿಯಾಗಿದ್ದು,ತನ್ನ ಕೆಟ್ಟ ಬುದ್ಧಿಯನ್ನು ಬಿಟ್ಟು ಒಳ್ಳೆಯವಳಾಗಿದ್ದಾಳೆ.

ರಾಮಾಚಾರಿ ಸೀರಿಯಲ್ ಹೊರತು ಪಡಿಸಿ ಮೌನಾ ಖಾಸಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಮೇಕಪ್ ಆರ್ಟಿಸ್ಟ್‌ಗಳ ಜೊತೆ ಸೇರಿ ಫೋಟೋಶೂಟ್‌ ಮಾಡಿಸುತ್ತಾರೆ. 

ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಚಾರು ಸುಮಾರು 286 ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದಾ ನಗುತ್ತಿರಿ ಎಂದು ಬರೆದುಕೊಂಡಿದ್ದಾರೆ.

Latest Videos

click me!