ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಖಡಕ್ ಆಟ, ಮಾತಿನ ಮೂಲಕ ಬೆಂಕಿ ಅಂತಾನೆ ಫೇಮಸ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ತನಿಷಾ ಸಖತ್ ಆಕ್ಟಿವ್. ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಾರೆ. ಇತ್ತೀಚಿಗೆ ತಮ್ಮ ಜ್ಯುವೆಲ್ಲರಿಯಲ್ಲಿ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ತನಿಷಾ ಲುಕ್‌ಗೆ ಅಭಿಮಾನಿಗಳು ಬ್ಯೂಟಿಫುಲ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್, ಪ್ರೆಟ್ಟೀ, ಬ್ಯೂಟಿ ವಿತ್ ಬ್ರೈನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತನಿಷಾ ನ್ಯೂ ಲುಕ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ನಮ್ಮ ಬೆಂಕಿ ಅಂದ್ರೆ ಸುಮ್ಮೇನಾ, ಎಷ್ಟು ಚಂದ ನಮ್ಮ ಹುಡುಗಿ ಸೂಪರ್, ನಗು ಮುಖದ ಚೆಲುವೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಲವ್ಲೀ, ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ಲೇಡಿ ಡಾನ್, ಲವ್ ಯೂ ಸೋ ಮಚ್, ಓನರ್ ಪ್ಲಸ್ ಮಾಡೆಲ್ ಸೂಪರ್ ಕಾಂಬೋ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು. ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ.
ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ಸಹ ತನಿಷಾ ಹವಾ ಕಡಿಮೆಯಾಗಿಲ್ಲ. ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ನಟಿ ತನಿಷಾ ಕುಪ್ಪಂಡ ಆರ್‌ಆರ್ ನಗರದಲ್ಲಿ ನಾನ್‌ವೆಜ್ ಹೊಟೆಲ್ ನಡೆಸ್ತಾ ಇದಾರೆ. ಅವರು ತಮ್ಮ ಮೇಕಪ್‌ಗಾಗಿಯೇ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.