ಅದ್ಧೂರಿ ಡ್ರೆಸ್, ಡೈಮಂಡ್ ನೆಕ್ಲೇಸ್ ಧರಿಸಿ ಮಿಂಚಿದ ಅಂಬಾನಿ ಸೊಸೆ; ಅಂಗೈಯಗಲದ ಪರ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ!

First Published | Nov 6, 2023, 2:54 PM IST

ನೀತಾ ಅಂಬಾನಿ ಯಾವಾಗಲೂ ಕಾಸ್ಟ್ಲೀ ಸೀರೆ, ಆಸೆಸ್ಸರೀಸ್‌ ಧರಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಅಂಬಾನಿ ಸೊಸೆ ಇದೇ ರೀತಿ ಸ್ಟೈಲ್‌ ಐಕಾನ್‌ ಆಗಿ ಗುರುತಿಸಿಕೊಂಡಿದ್ದಾರೆ. ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಅದ್ಧೂರಿ ಡ್ರೆಸ್ ಹಾಕ್ಕೊಂಡು, ಲೇಯರ್ಡ್ ಡೈಮಂಡ್ ನೆಕ್ಲೇಸ್‌ ಧರಿಸಿ ಮಿಂಚಿದ್ರು.

ಭಾರತದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ. ಬಿಲಿಯನ್‌ಗಟ್ಟಲೆ ಆಸ್ತಿಯನ್ನು ಹೊಂದಿರುವ ಅಂಬಾನಿ ಫ್ಯಾಮಿಲಿ ಯಾವಾಗಲೂ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಕಾಸ್ಟ್ಲೀ ಬಟ್ಟೆ, ಆಸೆಸ್ಸರೀಸ್‌ ಧರಿಸಿ ಅಂಬಾನಿ ಲೇಡೀಸ್‌ನ್ನು ಪಾರ್ಟಿಗಳಲ್ಲಿ ಕಾಣಬಹುದು. ಅವರ ಅದ್ಧೂರಿ ಡ್ರೆಸ್ಸಿಂಗ್‌ ಸ್ಟೈಲ್‌, ಜ್ಯುವೆಲ್ಲರಿ ಸೆಟ್‌ ಎಲ್ಲರ ಗಮನ ಸೆಳೆಯುತ್ತದೆ. 

ನೀತಾ ಅಂಬಾನಿ ಯಾವಾಗಲೂ ಕಾಸ್ಟ್ಲೀ ಸೀರೆ ಧರಿಸಿ, ಪರ್ಸ್‌ ಹಿಡಿದುಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಅಂಬಾನಿ ಸೊಸೆ ಇದೇ ರೀತಿ ಸ್ಟೈಲ್‌ ಐಕಾನ್‌ ಆಗಿ ಗುರುತಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿ ಮದುವೆಯಾಗಲಿರುವ ರಾಧಿಕಾ ಮರ್ಚೆಂಟ್ ಯಾವಾಗಲೂ ಗ್ರ್ಯಾಂಡ್ ಡ್ರೆಸ್‌, ಆಸೆಸ್ಸರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

Tap to resize

ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಗ್ರ್ಯಾಂಡ್‌ ಘರಾರಾ ಸೆಟ್ ಅನ್ನು ಧರಿಸಿದ್ದರು. ನಿನ್ನೆ ನಡೆದ ದೀಪಾವಳಿ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಭಾರವಾದ ಕಸೂತಿ ಮತ್ತು ಸ್ಟೋನ್ ವರ್ಕ್‌ ಇರುವ ದಂತದ ವರ್ಣದ ಘರಾರಾ ಸೆಟ್‌ನ್ನುಧರಿಸಿದ್ದರು. 

ಆಕೆಯ ಸಾಂಪ್ರದಾಯಿಕ ಉಡುಪಿನಲ್ಲಿ ಫ್ಲೇರ್ಡ್ ಪ್ಯಾಂಟ್, ಚೋಲಿ ಮತ್ತು ಮ್ಯಾಚಿಂಗ್ ದುಪಟ್ಟಾ ಸೇರಿದ್ದವು. ಡ್ರೆಸ್‌ ಮುತ್ತಿನ ಕಸೂತಿ ಮತ್ತು ನೆಕ್‌ಲೈನ್ ಅನ್ನು ಒಳಗೊಂಡಿತ್ತು. ಗ್ರ್ಯಾಂಡ್ ಡ್ರೆಸ್‌ಗೆ ಒಪ್ಪುವಂತೆ ರಾಧಿಕಾ ಲೇಯರ್ಡ್ ಡೈಮಂಡ್ ನೆಕ್ಲೇಸ್ ಮತ್ತು ಅತ್ಯದ್ಭುತವಾದ ಕಿವಿಯೋಲೆಗಳನ್ನು ಧರಿಸಿದ್ದರು. ಸರಳವಾದ ಮೇಕಪ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
 

ರಾಧಿಕಾ ಮರ್ಚೆಂಟ್, ನೀತಾ ಅಂಬಾನಿ ಮತ್ತು ಅಂಜಲಿ ಮರ್ಚೆಂಟ್ ಜೊತೆ ಮನೀಶ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡರು.
ಪಾರ್ಟಿಯ ಕೆಲವು ವೀಡಿಯೋಗಳಲ್ಲಿ, ರಾಧಿಕಾ ತನ್ನ ಅತ್ತೆ ನೀತಾ ಅಂಬಾನಿ ಮತ್ತು ಅವರ ಸಹೋದರಿ ಅಂಜಲಿ ಮರ್ಚೆಂಟ್ ಅವರೊಂದಿಗೆ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ನೀತಾ ಅಂಬಾನಿ ರಫಲ್ ಬಾರ್ಡರ್‌ನ ನೀಲಿ ಬಣ್ಣದ ಸೀರೆಯನ್ನು ಉಟ್ಟಿದ್ದರು. ಪರ್ಲ್ ಕೇಪ್‌ನೊಂದಿಗೆ ಅದನ್ನು ವಿನ್ಯಾಸಗೊಳಿಸಲಾಗಿತ್ತು. ಅಂಜಲಿ ಗುಲಾಬಿ ಬಣ್ಣದ ಸೀರೆಯನ್ನು ಪಾರ್ಟಿಗಾಗಿ ಆರಿಸಿಕೊಂಡಿದ್ದರು.

ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆದದ್ದು ರಾಧಿಕಾ ಮರ್ಚೆಂಟ್ ಅವರ ಸ್ಟೈಲಿಶ್ ಕ್ಲಚ್. ರಾಧಿಕಾ ಅವರ ಕ್ಲಚ್ ಐಷಾರಾಮಿ ಬ್ರ್ಯಾಂಡ್‌ ಜುಡಿತ್ ಲೀಬರ್‌ನದ್ದಾಗಿದೆ.

ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ 'ಜಸ್ಟ್ ಫಾರ್ ಯು ಬೋ' ಕ್ಲಚ್‌ನ ಬೆಲೆ USD 5,995 ಆಗಿದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು  4,98,539 ರೂ. ಆಗಿದೆ

ರಾಧಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದೆ. ಅಂಬಾನಿ ಸೊಸೆ ಯಾವ ಬಾಲಿವುಡ್ ನಟಿಗೂ ಕಡಿಮೆಯಿಲ್ಲ ಎಂದು ಜನರು ಮಾತನಾಡಿಕೊಳ್ತಿದ್ದಾರೆ.

Latest Videos

click me!