ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಣ್ಸನ್ನೆಯಿಂದಲೇ ಸುದ್ದಿಯಾದ ನಟಿ ಪ್ರಿಯಾ ವಾರಿಯರ್. ಮೊದಲ ಸಿನಿಮಾದಲ್ಲಿಯೇ ಕಣ್ ಹೊಡೆದು, ವೀಡಿಯೋ ವೈರಲ್ ಆಗಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ನ್ಯಾಷನಲ್ ಕ್ರಶ್ ಎಂದು ಎಲ್ಲರೂ ಕೊಂಡಾಡಿದ್ದರು. ಪ್ರಿಯಾ ವಾರಿಯರ್, ಮೊದಲ ಸಿನಿಮಾದಲ್ಲಿಯೇ ನಟನೊಂದಿಗೆ ಲಿಪ್ಲಾಕ್ ಸಹ ಮಾಡಿದ್ದರು.
ಪ್ರಿಯಾ ವಾರಿಯರ್, 'ಒರು ಅಡಾರ್ ಲವ್' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಸೀರೆ, ಮಾಡರ್ನ್ ಡ್ರೆಸ್ನಲ್ಲಿ ಸಖತ್ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ. ಈ ಹಾಟ್ ಫೋಟೋಗಳು ಸಖತ್ ವೈರಲ್ ಆಗುತ್ತವೆ.
ಓಣಂ ಹಬ್ಬದ ಸಂದರ್ಭದಲ್ಲಿ ನಟಿ ಬಿಳಿ ಸೀರೆಯನ್ನುಟ್ಟು ನದಿಯಲ್ಲಿ ಮಿಂದೆದ್ದು ಮೈಮಾಟ ಪ್ರದರ್ಶನ ಮಾಡಿದ್ದರು. ಬ್ಲೌಸ್ ಬಟನ್ ಹಾಕದೆ ಫೋಟೋಗೆ ಫೋಸ್ ನೀಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಸದ್ಯ ರೆಡ್ ಲೆಹಂಗಾದಲ್ಲಿ ಪ್ರಿಯಾ ವಾರಿಯರ್ ಬೋಲ್ಡ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.
ಕೆಂಪು ಬಣ್ಣದ ಮೈತುಂಬಾ ಝರಿಯಿರುವ ಸ್ಕರ್ಟ್ ಹಾಗೂ ಬ್ಲೌಸ್ ಧರಿಸಿ ದುಪ್ಪಟ್ಟಾ ಹಿಡಿದುಕೊಂಡು ಮಾದಕವಾಗಿ ಮಿಂಚಿದ್ದಾರೆ. ಅದರಲ್ಲೂ ಅರ್ಧ ಎದೆ ಕಾಣುವ ಡೀಪ್ ಬ್ಲೌಸ್ ಧರಿಸಿದ್ದು ಪ್ರಿಯಾ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫುಲ್ ಹ್ಯಾಪಿಯಾಗಿದ್ದಾರೆ. ಪ್ರಿಯಾ ಟೆಂಪರೇಚರ್ ಫುಲ್ ಏರಿಸ್ತಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೈಮಾಟದ ಫೋಟೋಗಳನ್ನು ಪ್ರದರ್ಶನ ಮಾಡುತ್ತಾ ಫ್ಯಾನ್ಸ್ಗಳನ್ನು ರಂಜಿಸುತ್ತಾರೆ. ಅದೇ ರೀತಿ ಈಗ ಕೆಂಪು ಬಣ್ಣದ ಲೆಹಂಗಾದಲ್ಲಿ ಸಖತ್ ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ. ಅದಕ್ಕೆ ಗ್ರ್ಯಾಂಡ್ ಜ್ಯುವೆಲ್ಲರಿಯನ್ನು ಸಹ ಧರಿಸಿದ್ದು, ಅಭಿಮಾನಿಗಳು ಗಾರ್ಜಿಯಸ್ ಅಂತಿದ್ದಾರೆ.
ತಮ್ಮ ಫೋಟೋ ಪೋಸ್ನಲ್ಲಿ ಬಿಂಕ, ಬಿನ್ನಾಣದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ಹಾಟ್ ಫೇವರಿಟ್ ಆಗಿರುವ ಪ್ರಿಯಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅಭಿಮಾನಿಗಳು ಬ್ಯೂಟಿ, ಸೆಕ್ಸೀ, ಹಾಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು 'ನಿಮಗೋಸ್ಕರ ನಾವು ಹಾರ್ಟ್, ಕಿಡ್ನಿ, ಲಿವರ್ ಎಲ್ಲವನ್ನೂ ಕೊಡೋಕೆ ರೆಡಿ' ಎಂದಿದ್ದಾರೆ.
ಮತ್ತೆ ಕೆಲವರು, 'ಇನ್ನೊಮ್ಮೆ ಕಣ್ ಹೊಡೀರಿ ಮ್ಯಾಮ್' ಎಂದು ಬೇಡಿಕೆಯಿಟ್ಟಿದ್ದಾರೆ. ಮತ್ತೆ ಹಲವರು 'ನೀವು ಟೆಂಪರೇಚರ್ ಹೆಚ್ಚಿಸುತ್ತಿದ್ದೀರಿ' ಎಂದಿದ್ದಾರೆ. ಕಣ್ಸನ್ನೆ ವೀಡಿಯೋ ಮೂಲಕ ಸ್ಟಾರ್ ಆಗಿರುವ ನಟಿ ಪ್ರಿಯಾ ವಾರಿಯರ್, ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್ನಲ್ಲಿ ಈವರೆಗೂ ಸದ್ದು ಮಾಡಿಲ್ಲ.
ಸದ್ಯ ಪ್ರಿಯಾ ವಾರಿಯರ್ ಬಳಿ 'ಯಾರಿಯನ್ 2', 'ಲವ್' ಹ್ಯಾಕರ್ಸ್, '3 ಮಂಕೀಸ್', 'ಜುಲಿಯಾನಾ' ಮತ್ತು 'ಶ್ರೀದೇವಿ ಬಂಗಲೆ' ಸೇರಿದಂತೆ ಅನೇಕ ಚಿತ್ರಗಳಿವೆ. ಈಕೆ ಮಲಯಾಳಂ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ.