ಮೈಬಣ್ಣದಿಂದ ಟ್ರೋಲ್‌ ಆಗಿದ್ದ ಕೃಷ್ಣ ಸುಂದರಿ ಈಗ ಮಿಸ್ ಆಫ್ರಿಕಾ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿ

First Published | Nov 4, 2023, 2:25 PM IST

ದಕ್ಷಿಣ ಆಫ್ರಿಕಾದ ಗೌಟೆಂಗ್‌ನಲ್ಲಿ ನಡೆಯಲಿರುವ ಮುಂಬರುವ ಮಿಸ್ ಆಫ್ರಿಕಾ ಗೋಲ್ಡನ್ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸ್ಯಾನ್ ರೆಚಾಲ್ ಗಾಂಧಿ ಸಜ್ಜಾಗುತ್ತಿದ್ದಾರೆ.  ನವೆಂಬರ್ 16 ರಿಂದ ನವೆಂಬರ್ 20 ರವರೆಗೆ ಈ ಸ್ಪರ್ಧೆ ನಡೆಯಲಿದೆ.

24 ವರ್ಷದ ಖ್ಯಾತ ಮಾಡೆಲ್ ರೆಚಾಲ್ ಗಾಂಧಿ ತಮಿಳುನಾಡನವರಾಗಿದ್ದು, ಮಿಸ್ ಪಾಂಡಿಚೇರಿ 2022 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಕೆ, ಸೌಂದರ್ಯ ಮತ್ತು ಚರ್ಮದ ಬಣ್ಣದ ಬಗ್ಗೆ ಜೊತೆಗೆ ವರ್ಣಭೇದ ಎಂಬ ಕೆಟ್ಟ ಕಲ್ಪನೆಯನ್ನು ಹೋಗಲಾಡಿಸಲು ಪಣತೊಟ್ಟಿರುವಾಕೆ. ಹೀಗಾಗಿ ಈಕೆ   15 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 

ತನ್ನದೇ ಜೀವನದಲ್ಲಿ ದೇಹದ ಬಣ್ಣದ ಕಾರಣದಿಂದ ಆದ ಕೆಟ್ಟ ಅನುಭವಗಳನ್ನು ಮಾತ್ರವಲ್ಲ ಈ ತಾರತಮ್ಯವನ್ನು ಅನುಭವಿಸಿದ ಅಸಂಖ್ಯಾತ ಹುಡುಗಿಯರಿಗೆ ಇವರು ಮಾದರಿಯಾಗಲು ಬಯಸುತ್ತಾರೆ. 

Tap to resize

ಸ್ಯಾನ್  ರೆಚಾಲ್ ಗಾಂಧಿಯವರ ತನ್ನ ಶಾಲಾ ದಿನಗಳಲ್ಲಿ  ಚರ್ಮದ ಬಣ್ಣದಿಂದಾಗಿ ಅಪಹಾಸ್ಯಕ್ಕೊಳಗಾಗಿದ್ದಳು. ಇದು ಆಕೆಯ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿತ್ತು. ಮಾತ್ರವಲ್ಲ ತನ್ನ ಸ್ವಂತ ಕುಟುಂಬದಲ್ಲಿಯೂ ಸಹ ಮೈಬಣ್ಣದ ಆಧಾರದ ಮೇಲೆ ಹೋಲಿಕೆಗಳನ್ನು ಮಾಡಿದ್ದರಿಂದ ತನ್ನ ಸ್ವಾಭಿಮಾನವು ಹೇಗೆ ನರಳಿತು ಎಂಬುದನ್ನು ಈಗ ನೆನಪಿಸಿಕೊಳ್ಳುತ್ತಾಳೆ. 

ರೆಚಾಲ್ ಗಾಂಧಿಯ ಕುಟುಂಬದಿಂದ ಬಂದ ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳು ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸಿದವು ಹೀಗಾಗಿ ತನ್ನ 8 ನೇ ಮತ್ತು 9 ನೇ ತರಗತಿಗಳಲ್ಲಿ ಫೇರ್ ಆಗುವ ಪ್ರಯತ್ನದಲ್ಲಿ ವಿವಿಧ ಸೌಂದರ್ಯವರ್ಧಕಗಳನ್ನು ಪ್ರಯೋಗಿಸಿದ್ದಾಗಿ ಹೇಳಿದ್ದಾರೆ. ಬಳಿಕ ಸಮಾಜದ ಸೌಂದರ್ಯದ ಮಾನದಂಡಗಳಿಗೆ ಅನುಸರಣೆ ನಿಜವಾದ ಸ್ವಾಭಿಮಾನದ ಮಾರ್ಗವಲ್ಲ ಎಂದು  ಅಂತಿಮವಾಗಿ ಅರಿತುಕೊಂಡು ಕ್ರಮೇಣ ತನ್ನ ನೈಸರ್ಗಿಕ ಚರ್ಮದ ಬಣ್ಣವನ್ನು ಸ್ವೀಕರಿಸಲು ಮತ್ತು ಅಳವಡಿಸಿಕೊಳ್ಳಲು ಪ್ರಾರಂಭಿಸಿದಳು. 

ಮಾಡೆಲಿಂಗ್ ಬಗ್ಗೆ ಆಕೆಯ ನಿಜವಾದ ಉತ್ಸಾಹ  ಎರಡನೇ ವರ್ಷದ ವೈದ್ಯಕೀಯ ವಿದ್ಯಾಭ್ಯಾಸದ ಸಮಯದಲ್ಲಿ ಆರಂಭವಾಯ್ತು. ಇದು ಕರ್ನಾಟಕದಲ್ಲಿ ನಡೆದ ಒಂದು ಸ್ಪರ್ಧೆಯನ್ನು ಎದುರಿಸಿದಾಗ ಪ್ರಾರಂಭವಾಯಿತು. ಆ ಸ್ಪರ್ಧೆ ಆಕೆಗೆ ತನ್ನ ಕನಸುಗಳನ್ನು ಮುಂದುವರಿಸಲು ಒಂದು ಪರಿಪೂರ್ಣ ಅವಕಾಶವೆಂಬಂತೆ ಕಂಡಿತು. ಆದರೂ, ಈ ಪ್ರಯಾಣದಲ್ಲಿ ನಿರೀಕ್ಷೆಗಿಂತ ಹೆಚ್ಚು ಸವಾಲಿನದ್ದಾಗಿದೆ ಎಂಬುದು ಸಾಬೀತಾಯಿತು ಏಕೆಂದರೆ ಆಕೆಯ ಮೈ ಬಣ್ಣದಿಂದಾಗಿ ಸೌಂದರ್ಯ ಸ್ಪರ್ಧೆಗಳಿಂದ ನಿರಾಕರಣೆಯನ್ನು ಎದುರಿಸಬೇಕಾಯಿತು. 

ಹಲವಾರು ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದ ನಂತರವೂ, ರೆಚಾಲ್ ಗಾಂಧಿ ಫ್ಯಾಷನ್ ಉದ್ಯಮದಲ್ಲಿ ಹಲವು ಪಕ್ಷಪಾತಗಳನ್ನು ಎದುರಿಸಿದರು. ಆದರೆ ದೃತಿಗೆಡದೆ ಅವೆಲ್ಲವನ್ನು ಮೆಟ್ಟಿ ನಿಂತು ಕ್ಷೇತ್ರದಲ್ಲಿ ಹೆಚ್ಚಿನ ಒಳಗೊಳ್ಳುವಿಕೆಯ ಅಗತ್ಯವನ್ನು ಎತ್ತಿ ತೋರಿಸಿದರು. 

ಈ ಎಲ್ಲಾ ಅಡೆತಡೆಗಳ ಹೊರತಾಗಿಯೂ, ಸ್ಯಾನ್ ರೀಚಲ್ ಗಾಂಧಿಯವರ ದೃಢಸಂಕಲ್ಪ ಮತ್ತು ಪರಿಶ್ರಮವು ನಿಜವಾಗಿಯೂ ಅನೇಕ ಮಾಡೆಲ್‌ಗಳಿಗೆ ಸ್ಪೂರ್ತಿದಾಯಕವಾಗಿದೆ. ಆಭರಣ ಬ್ರಾಂಡ್‌ಗೆ ಮಾಡೆಲಿಂಗ್ ಮಾಡಲು ಅವಕಾಶ ಬಂದಾಗ ರಾಷ್ಟ್ರೀಯ ಮಾಧ್ಯಮದಲ್ಲಿ ಕೃಷ್ಣ ಸುಂದರಿ ಮಾಡೆಲ್ ಅನ್ನು ನೋಡುವ ತನ್ನ ಕನಸನ್ನು ಆಕೆ ನನಸಾಗಿಸಿದಳು. 

ತನ್ನ ಎಂಟು ವರ್ಷಗಳ ವೃತ್ತಿಜೀವನದಲ್ಲಿ  ನಾಲ್ಕು ಟೈಟಲ್‌ ಗೆದ್ದಿದ್ದಾರೆ. ಮೂರು ಬಾರಿ ರನ್ನರ್ ಅಪ್ ಆಗಿದ್ದಾರೆ ಮತ್ತು ಏಳು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಾಡೆಲ್ ಆಗುವ ನಿರ್ಧಾರಕ್ಕೆ ಮಾಜಿ ವಿಶ್ವ ಸುಂದರಿ  ಐಶ್ವರ್ಯಾ ರೈ ಅವರಿಂದ ಬಲವಾಗಿ ಪ್ರಭಾವಿತವಾಗಿದ್ದಾರಂತೆ. 

ರೆಚಾಲ್ ಗಾಂಧಿ  ತನ್ನ ಮೈಬಣ್ಣದ ಆಧಾರದ ಮೇಲೆ ಗುರುತಿಸಿಕೊಳ್ಳುವ  ಬದಲು ತನ್ನ ಪ್ರತಿಭೆಯಿಂದ ಹೆಸರುವಾಸಿಯಾಗಲು ಬಯಸುತ್ತಾಳೆ. ಜೊತೆಗೆ ಚಾಲ್ತಿಯಲ್ಲಿರುವ ಸೌಂದರ್ಯದ ಮಾನದಂಡಗಳಿಗೆ ಸವಾಲೆಸೆಯುವಲ್ಲಿ ದೃಢನಿಶ್ಚಯವನ್ನು ಹೊಂದಿದ್ದಾಳೆ. ವಿಶೇಷವಾಗಿ ಭಾರತದಲ್ಲಿ ಕಪ್ಪು ಚರ್ಮ ಹೊಂದಿರುವವರಿಗೆ ಮಾದರಿಯಾಗಲು ಬಯಸಿದ್ದಾಳೆ.

ತನ್ನ ಮಾಡೆಲಿಂಗ್ ವೃತ್ತಿಜೀವನದ ಜೊತೆಗೆ, ಸ್ಯಾನ್  ರೆಚಾಲ್ ಗಾಂಧಿ ಕೋಟೊದಲ್ಲಿ 'ಪಾಂಡಿಚೆರಿ ಕ್ವೀನ್ಸ್' ಸಮುದಾಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ, ಇದು ವಿಶೇಷ ಮಹಿಳಾ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ, ಅಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಸಹ ಸದಸ್ಯರಿಗೆ ಸ್ಫೂರ್ತಿ ನೀಡುತ್ತಾರೆ. ಈ ಸಮುದಾಯವು ಯುವತಿಗೆ ಪರಸ್ಪರ ಬೆಂಬಲ ಮತ್ತು ಪ್ರೇರಣೆಯಿಂದ ಅಭಿವೃದ್ಧಿ ಹೊಂದುವುದನ್ನು ಕಲಿಸಿಕೊಡುತ್ತದೆ.

ಫ್ಯಾಶನ್ ಉದ್ಯಮದಲ್ಲಿ ತಾರತಮ್ಯವನ್ನು ಎದುರಿಸುವುದರಿಂದ ಹಿಡಿದು ಚರ್ಮದ ಬಣ್ಣಕ್ಕೆ ಸಂಬಂಧಿಸಿದ ಸವಾಲಿನ ಪೂರ್ವಗ್ರಹಗಳವರೆಗೆ, ಸ್ಯಾನ್ ರೆಚಲ್ ಗಾಂಧಿ ತಮ್ಮನ್ನು ತಾವು ಪ್ರತಿಪಾದಿಸಲು ಮತ್ತು ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳ ನಿರ್ಬಂಧಗಳಿಂದ ಮುಕ್ತರಾಗಲು ಬಯಸುವ ಅದೆಷ್ಟೋ ಮಂದಿಗೆ  ಸ್ಫೂರ್ತಿಯ ಸೆಲೆಯಾಗಿದ್ದಾರೆ.  

Latest Videos

click me!