ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಪೆದ್ದು ಸಹನಾ ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್

Published : Apr 10, 2024, 02:09 PM IST

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್‌. ಇದರಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿರುವ ಸಹನಾ..ಯಾವಾಗ್ಲೂ ಟ್ರೆಡಿಶನಲ್‌ ಲುಕ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಕ್ಯೂಟ್ ಆಗಿ ಕಾಣಿಸ್ತಾರೆ. ಆದ್ರೆ ರಿಯಲ್‌ ಲೈಫ್‌ನಲ್ಲಿ ಸಹನಾ ಹೇಗಿದ್ದಾರೆ ನಿಮ್ಗೊತ್ತಾ?

PREV
19
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಪೆದ್ದು ಸಹನಾ ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್‌. ಇದರಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿರುವ ಸಹನಾ..ಯಾವಾಗ್ಲೂ ಟ್ರೆಡಿಶನಲ್‌ ಲುಕ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಕ್ಯೂಟ್ ಆಗಿ ಕಾಣಿಸ್ತಾರೆ. ರಿಯಲ್ ಲೈಫ್‌ನಲ್ಲಿ ಸಹನಾ ಪಾತ್ರ ಮಾಡೋ ಅಕ್ಷರಾ ತುಂಬಾ ಬ್ಯೂಟಿಫುಲ್ ಆಗಿದ್ದಾರೆ.

29

ಇನ್‌ಸ್ಟಾಗ್ರಾಂನಲ್ಲಿ ಅಕ್ಷರಾ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಯುಗಾದಿ ಹಬ್ಬಕ್ಕೂ ಅಕ್ಷರಾ ಸುಂದರವಾಗಿರುವ ಪರ್ಪಲ್‌ ಬಣ್ಣದ ಹಾಫ್ ಸ್ಯಾರಿಯುಟ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮುದ್ದಾದ ಪೋಟೋ ಎಲ್ಲರ ಗಮನ ಸೆಳೆಯುತ್ತಿದೆ.

39
Akshara

Akshara 

49

ಧಾರಾವಾಹಿಯಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾ ಪಾತ್ರ ಮಾಡುತ್ತಿರುವ ಅಕ್ಷರಾ, ಸಿಕ್ಕಾಪಟ್ಟೆ ಮುಗ್ಧ ಹೆಣ್ಮಗಳ ಪಾತ್ರವನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ದೌರ್ಜನ್ಯವೆಸಗಿದ ಗಂಡ, ಅತ್ತೆಯ ವಿರುದ್ಧವೇ ತಿರುಗಿಬಿದ್ದಿಳೋ ಸಹನಾ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

59
Akshara

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅಕ್ಷರಾ, ‘ಅಮ್ನೋರು’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ನಂತರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

69
Akshara

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಾಡೆಲಿಂಗ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ನಟಿಸಿದ್ದಾರೆ.

79

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಹಿರಿಯ ನಟಿ ಉಮಾಶ್ರೀ, ಮಂಜುಭಾಷಿಣಿ, ಹಂಸ, ರಮೇಶ್ ಪಂಡಿತ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಂಠಿ ಪಾತ್ರದಲ್ಲಿ ಧನುಷ್, ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ, ಸುಮಾ ಪಾತ್ರದಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.

89
Akshara

ಸದ್ಯ ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿಯ ಮಗಳು ಸಹನಾ ತಾಳಿ ಕಿತ್ತುಕೊಟ್ಟಿದ್ದಾಳೆ. ಹಾಗೆಂದು ಅವಳೇನೂ ಸುಮ್ಮನೇ ಹೀಗೆ ಮಾಡಲಿಲ್ಲ.  ಸಹನಾ ಮೇಲೆ ಇದೀಗ ಅನೈತಿಕ ಸಂಬಂಧದ ಆರೋಪ ಬಂದಿದೆ. ಹಾಗಾಗಿ ಆಕೆ ಇಂಥಾ ಕ್ರಮ ತೆಗೆದುಕೊಂಡಿದ್ದಾಳೆ.

99
Akshara

ಪೆದ್ದು ಪೆದ್ದಾಗಿದ್ದ ಸಹನಾ ತನಗೆ ಅನ್ಯಾಯವಾದಾಗ ಪ್ರತಿಭಟಿಸಿದ್ದಕ್ಕೆ ಪ್ರೇಕ್ಷಕರು ಸಹ ಹೆಣ್ಮಕ್ಕಳು ಹೇಗಿರಬೇಕು, ಭೇಷ್​ ಸಹನಾ ಎನ್ನುತ್ತಿದ್ದಾರೆ

Read more Photos on
click me!

Recommended Stories