ಭಾರತದ ಅತ್ಯಂತ ಕಿರಿಯ ಗೋಲ್ಡನ್ ಮ್ಯಾನ್ ಎಂದು ಕರೆಸಿಕೊಳ್ಳುವ ವ್ಯಕ್ತಿ ಹರ್ಷವರ್ಧನ್ ಪಂಡರ್ಕರ್. ಇವರು ವಯಸ್ಸಿನಲ್ಲಿ ಕಿರಿಯರಾಗಿದ್ದು, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ಬರೀಬ್ಬರಿ 10ರಿಂದ 12 ಕೆ.ಜಿ. ಬಂಗಾರದ ಆಭರಣಗಳನ್ನು ಮೈಮೇಲೆ ಧರಿಸಿಕೊಳ್ಳುತ್ತಾರೆ. ಇವರು ಕೂಡ ಪುಣೆ ಮೂಲದವರಾಗಿದ್ದಾರೆ.
ದೀಪಕ್ ಪೋಕಲೆ ಅವರು ಅತಿಹೆಚ್ಚು ಚಿನ್ನಾಭರಣ ಧರಿಸುವುದರಲ್ಲಿ ನಂಬರ್ 9ನೇ ಸ್ಥಾನದಲ್ಲಿದ್ದಾರೆ. ಇವರು ಹಲವು ದೊಡ್ಡ ದೊಡ್ಡ ಸರಗಳನ್ನು ಕುತ್ತಿಗೆಗೆ ಧರಿಸುವ ಜೊತೆಗೆ ಒಂದು ಸರಕ್ಕೆ ಪಪ್ಪಾ-9 ಎಂಬ ಹೆಸರಿನ ದಪ್ಪನಾದ ಲಾಕೆಟ್ ಧರಿಸಿಕೊಂಡು ಓಡಾಡುತ್ತಾರೆ. ಇನ್ನು ಇವರ 10 ಬೆರಳುಗಳು ಕೂಡ ಬಂಗಾರದಿಂದ ತುಂಬಿ ತುಳುಕುತ್ತಿರುತ್ತವೆ.
ಮಹಾರಾಷ್ಟ್ರದ ಪುಣೆಯ ಮತ್ತೊಬ್ಬ ವ್ಯಕ್ತಿ ದತ್ತಾತ್ರೇಯ ಫುಗೆ ಅವರು ಕೂಡ ಬಂಗಾರದ ಮನುಷ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಸುಮಾರು 6.5 ಕೆ.ಜಿ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡುತ್ತಿದ್ದ ಇವರು ಇತ್ತೀಚೆಗೆ 3.5 ಕೆ.ಜಿ.ಯ ಬಂಗಾರದ ಅಂಗಿಯನ್ನು (Gold Shirt) ಮಾಡಿಸಿಕೊಂಡಿದ್ದಾರೆ.
ದೇಶದಲ್ಲಿ ಪುಣೆ ಮೂಲದ ಅಕ್ಷಯ್ ಬಾರ್ನೆ ಅವರು ದೇಶದಲ್ಲಿ ಅತಿಹೆಚ್ಚು ಚಿನ್ನಾಭರಣಗಳನ್ನು ಧರಿಸಿ ಓಡಾಡುವವರಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಇವರು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮೈಮೇಲೆ ಸುಮಾರು 3 ರಿಂದ 6 ಕೆ.ಜಿವರೆಗೆ ಚಿನ್ನಾಭರಣಗಳನ್ನ ಧರಿಸಿಕೊಂಡು ಬರುತ್ತಾರೆ. ಇವರಿಗೆ ಅಷ್ಟೇ ಪ್ರಮಾಣದಲ್ಲಿ ಭದ್ರತೆಯೂ ಇರುತ್ತದೆ.
ಮಹಾರಾಷ್ಟ್ರ ಪುಣೆ ಮೂಲದ ಮಲ್ಲವ್ ಅಂಡ್ ಸನ್ಸ್ ಪ್ರೈವೇಟ್ ಲಿ. ನಿರ್ದೇಶಕರಾದ ನಿಶಿಕಾಂತ್ ಮಲ್ಲವ್ ಬಂಗಾರದ ಆಭರಣಗಳನ್ನು ಧರಿಸಿ ರೀಲ್ಸ್ ಮಾಡಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಪುಣೆಯ ಮಲ್ಲವ್ ಅಂಡ್ ಸನ್ಸ್ ಪ್ರೈವೇಟ್ ಲಿ. ನಿರ್ದೇಶಕರಾದ ನಿಶಿಕಾಂತ್ ಮಲ್ಲವ್ ಅವರ ಸಹೋದರರಾದ ಆಕಾಶ್ ಮಲ್ಲವ್ ಕೂಡ ಚಿನ್ನಾಭರಣ ಧರಿಸುವುದಲ್ಲಿ ನಿಸ್ಸೀಮರು. ಆಕಾಶ್ ಮತ್ತು ನಿಶಿಕಾಂತ್ ಅವರನ್ನು ಗೋಲ್ಡನ್ ಬ್ರದರ್ಸ್ ಎಂದು ಕರೆಯಲಾಗುತ್ತದೆ.
ಸಂಜಯ್ ಗುಜಾರ್ ಒಬ್ಬ ಭಾರತೀಯ ಉದ್ಯಮಿ, ನಟ, ರೂಪದರ್ಶಿ ಮತ್ತು ಚಲನಚಿತ್ರ ಹಣಕಾಸುದಾರ. ಮಹಾರಾಷ್ಟ್ರದ ಪುಣೆ ಮೂಲದವರು. ಸಂಜಯ್ ಗುಜಾರ್ ಮತ್ತು ಭಾರತೀಯ ಉದ್ಯಮಿ ಸನ್ನಿ ವಾಘಚೌರೆ ಅತ್ಯಾಪ್ತ ಸ್ನೇಹಿತನಾಗಿದ್ದಾನೆ. ಇವರಿಬ್ಬರನ್ನು ಭಾರತದ ಗೋಲ್ಡನ್ ಗೈಸ್ ಎಂದು ಕರೆಯಲಾಗುತ್ತದೆ.
ಮತ್ತೊಬ್ಬ ಪುಣೆ ಮೂಲಕ ವ್ಯಕ್ತಿ ಪ್ರಶಾಂತ್ ಲಕ್ಷ್ಮಣ್ ಸಪ್ಕಲ್ ಅವರು ಕೂಡ ಅತಿಹೆಚ್ಚು ಬಂಗಾರ ಧರಿಸುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಮೈಮೇಲೆ ಸಾಮಾನ್ಯ ದಿನಗಳಲ್ಲಿಯೂ ಕಡಿಮೆ ಎಂದರೂ 5 ಕೆ.ಜಿ. ಭಮಾಗರವನ್ನು ಧರಿಸಿಕೊಂಡಿರುತ್ತಾರೆ. ಇವರು ಬಡ ಜನರಿಗೆ ಸಹಾಯ ಮಾಡಲೆಂದೇ ಎನ್‌ಎಸ್‌ಎಸ್ ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.
ಮೈಮೇಲೆ ಸುಮಾರು 6 ಕೆ.ಜಿಯಿಂದ 8 ಕೆ.ಜಿವರೆಗೆ ಬಂಗಾರವನ್ನು ಧರಿಸುವ ವೈಭವ್ ಬೊರಾಟೆ ಅವರು ಕೂಡ ಭಾರತದ ಚಿನ್ನದ ಮನುಷ್ಯ ಎಂದೇ ಖ್ಯಾತಿಯಾಗಿದ್ದಾರೆ. ಇವರು ಹೆಚ್ಚಾಗಿ ದುಬಾರಿ ಮತ್ತು ಐಷಾರಾಮಿ ಕಾರನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದಾರೆ.
ಸನ್ನಿ ವಾಘಚೌರೆ ಒಬ್ಬ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ಹಣಕಾಸುದಾರ. ಪುಣೆಯ ಚಿನ್ನದ ಮನುಷ್ಯ ಎಂದು ಪ್ರಸಿದ್ಧರಾಗಿದ್ದಾರೆ. ಈಗ 34 ವರ್ಷದವರಾಗಿರುವ ಇವರು ಮೈತುಂಬಾ ಚಿನ್ನಾಭರಣ ಧರಿಸುತ್ತಾರೆ. ಹಿಂದಿ ಬಿಗ್‌ಬಾಸ್ 16ನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರು ಕಾರು, ಶೂಶ್, ಮೊಬೈಲ್ ಕವರ್ ಎಲ್ಲವೂ ಚಿನ್ನದ್ದನ್ನೇ ಮಾಡಿಸಿಕೊಂಡಿದ್ದಾರೆ.
ವೀಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://www.instagram.com/reel/CzgSl9oAVt2/?igsh=MXg1N3BrNHdtN21uNw%3D%3D