Republic Day Outfit Ideas: ತಿರಂಗಾ ಡ್ರೆಸ್ ಐಡಿಯಾ: ಗಣರಾಜ್ಯೋತ್ಸವದ ಸಂಭ್ರಮಕ್ಕೆ ತ್ರಿವರ್ಣದ ಸ್ಪರ್ಶ

Published : Jan 10, 2026, 11:30 AM IST

ಈ ಗಣರಾಜ್ಯೋತ್ಸವದಂದು ತ್ರಿವರ್ಣ ಬಣ್ಣದ ಸೀರೆ, ಕುರ್ತಾ, ಅಥವಾ ಫ್ಯೂಷನ್ ಉಡುಗೆಗಳನ್ನು ಧರಿಸಿ ವಿಶೇಷವಾಗಿ ಕಾಣಿಸಿಕೊಳ್ಳಿ. ನಿಮ್ಮ ನೋಟವನ್ನು ಮತ್ತಷ್ಟು ಆಕರ್ಷಕವಾಗಿಸಲು ತ್ರಿವರ್ಣ ಬಳೆಗಳು, ನೇಲ್ ಆರ್ಟ್ ಮತ್ತು ಐಶ್ಯಾಡೋವನ್ನು ಬಳಸಿ ಸ್ಟೈಲಿಶ್ ಆಗಿ ಮಿಂಚಬಹುದು.

PREV
18
ಸ್ಪೆಷಲ್ ಡ್ರೆಸ್

ಜನವರಿ 26, 2023 ರಂದು ದೇಶವು ತನ್ನ ಸಂವಿಧಾನದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಗಣರಾಜ್ಯೋತ್ಸವದಂದು ಶಾಲೆ, ಕಾಲೇಜು, ಕಚೇರಿಗಳಲ್ಲಿ ಧ್ವಜಾರೋಹಣ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ  ವಿಶೇಷ ದಿನದಂದು ಸ್ಪೆಷಲ್ ಡ್ರೆಸ್ ಧರಿಸಿ ನೀವು ಎಲ್ಲರಿಗಿಂತ ಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣಬಹುದು.

28
ಕೇಸರಿ, ಬಿಳಿ ಮತ್ತು ಹಸಿರು

ಗಣರಾಜ್ಯೋತ್ಸವದಂದು ನೀವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಸುಂದರವಾದ ಸೀರೆಯನ್ನು ಧರಿಸಬಹುದು. ಇದರಲ್ಲಿ ಜಾರ್ಜೆಟ್, ಶಿಫಾನ್, ಸಿಲ್ಕ್ ಅಥವಾ ಕಾಟನ್‌ನಂತಹ ಫ್ಯಾಬ್ರಿಕ್‌ಗಳು ಚೆನ್ನಾಗಿ ಕಾಣುತ್ತವೆ. ಈ ರೀತಿಯ ಸೀರೆಗಳು ಗಣತಂತ್ರದ ದಿನವನ್ನು ಮತ್ತಷ್ಟು ವಿಶೇ‍‍ಷವಾಗಿಸುತ್ತದೆ.

38
ಫ್ಯಾಶನ್ ಫ್ಯೂಷನ್

ತ್ರಿವರ್ಣ ಬಣ್ಣದಲ್ಲಿ ಏನಾದರೂ ವಿಭಿನ್ನವಾಗಿ ಧರಿಸಲು ಬಯಸಿದರೆ, ಫ್ಯಾಶನ್ ಫ್ಯೂಷನ್ ಸೀರೆಯನ್ನು ಟ್ರೈ ಮಾಡಬಹುದು. ಕೇಸರಿ ಬಣ್ಣದ ಧೋತಿಯ ಮೇಲೆ ಹಸಿರು ಬ್ಲೌಸ್ ಜೊತೆ ಬಿಳಿ ಬಣ್ಣದ ಹಾಫ್ ಡ್ರೇಪ್ ಸೀರೆ ಧರಿಸಬಹುದು. ಈ ಸ್ಟೈಲ್ ತುಂಬಾ ವಿಶಿಷ್ಟವಾಗಿ ಕಾಣುತ್ತದೆ. ಈ ಸ್ಟೈಲ್ ನಿಮ್ಮನ್ನು ಮತ್ತಷ್ಟು ಸ್ಟೈಲಿಶ್ ಆಗುವಂತೆ ಮಾಡುತ್ತದೆ. 

48
ಟ್ರೆಡಿಷನ್ ಆಂಡ್ ಸಿಂಪಲ್ ಲುಕ್

ಗಣರಾಜ್ಯೋತ್ಸವದಂದು ನೀವು ಸಾಂಪ್ರದಾಯಿಕ ಮತ್ತು ಸರಳ ನೋಟವನ್ನು ಬಯಸಿದರೆ, ಬಿಳಿ ಕುರ್ತಾ ಮತ್ತು ಪಲಾಝೊ ಜೊತೆಗೆ ತ್ರಿವರ್ಣ ಬಣ್ಣದ ದುಪಟ್ಟಾವನ್ನು ಧರಿಸಬಹುದು. ಸಿಂಪಲ್ ಡ್ರೆಸ್ ನಿಮ್ಮನ್ನು ಕ್ಲಾಸಿಯಾಗಿ ಕಾಣಿಸುತ್ತದೆ.

58
ಲಕ್ನೋವಿ ಕುರ್ತಾ

ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿರುವ ಈ ರೀತಿಯ ಲಕ್ನೋವಿ ಕುರ್ತಾ ಕೂಡ ಗಣರಾಜ್ಯೋತ್ಸವದಂದು ನಿಮಗೆ ಉತ್ತಮ ನೋಟವನ್ನು ನೀಡುತ್ತದೆ.

68
ತ್ರಿವರ್ಣ ಬಳೆಗಳು

ತ್ರಿವರ್ಣದ ಡ್ರೆಸ್ ಜೊತೆಗೆ, ಗಣರಾಜ್ಯೋತ್ಸವದಂದು ನೀವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಳೆಗಳನ್ನು ಧರಿಸಬಹುದು. ಇದು ನಿಮ್ಮ ನೋಟವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ.

78
ನೇಲ್ ಆರ್ಟ್

ಇತ್ತೀಚಿನ ದಿನಗಳಲ್ಲಿ ನೇಲ್ ಆರ್ಟ್ ಟ್ರೆಂಡ್ ಹೆಚ್ಚಾಗಿದೆ. ಗಣರಾಜ್ಯೋತ್ಸವದ ಥೀಮ್‌ನಲ್ಲಿ ನಿಮ್ಮ ಉಗುರುಗಳಿಗೆ ಬಣ್ಣ ಹಚ್ಚಬಹುದು ಮತ್ತು ಅದರ ಮೇಲೆ ವಿವಿಧ ವಿನ್ಯಾಸಗಳನ್ನು ಮಾಡಬಹುದು.

88
ಐಶ್ಯಾಡೋದಲ್ಲಿ ತ್ರಿವರ್ಣ ಬಣ್ಣ

ಗಣರಾಜ್ಯೋತ್ಸವದಂದು ನಿಮ್ಮ ಲುಕ್‌ನೊಂದಿಗೆ ಪ್ರಯೋಗ ಮಾಡಲು ಬಯಸಿದರೆ, ಮೇಕಪ್ ಮಾಡುವಾಗ ಐಶ್ಯಾಡೋದಲ್ಲಿ ತ್ರಿವರ್ಣ ಬಣ್ಣಗಳನ್ನು ಬಳಸಬಹುದು. ಇದು ತುಂಬಾ ಆಸಕ್ತಿದಾಯಕ ಮತ್ತು ಕ್ರಿಯೇಟಿವ್ ಆಗಿ ಕಾಣುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories