Home Remedies for Cracked Heels: ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಯ ಸಮಸ್ಯೆ ಹೆಚ್ಚಾಗುತ್ತದೆ. ನಡೆಯಲು ಕಷ್ಟವಾಗುತ್ತದೆ. ಆದ್ದರಿಂದ ಬಿರುಕು ಬಿಟ್ಟ ಹಿಮ್ಮಡಿ ಗುಣವಾಗಲು ನೀವು ಈ ಮನೆಮದ್ದುಗಳನ್ನ ಟ್ರೈ ಮಾಡ್ಬೋದು.
ಚಳಿಗಾಲದಲ್ಲಿ ಚರ್ಮ ಮತ್ತು ಹಿಮ್ಮಡಿ ಬೇಗನೆ ಬಿರುಕು ಬಿಡಲು ಪ್ರಾರಂಭಿಸುತ್ತವೆ. ನೀವು ಚಪ್ಪಲಿ ಅಥವಾ ಬೂಟುಗಳನ್ನು ಧರಿಸದಿದ್ದರೆ ಅಥವಾ ಹೆಚ್ಚು ಬರಿಗಾಲಿನಲ್ಲಿ ಇದ್ದರೆ ಬಿರುಕು ಬಿಟ್ಟ ಹಿಮ್ಮಡಿಯ ಸಮಸ್ಯೆ ಮತ್ತಷ್ಟು ಪೇಚಿಗೆ ಸಿಲುಕಿಸಬಹುದು. ಅಷ್ಟೇ ಅಲ್ಲ, ಧೂಳು ಮತ್ತು ಕೊಳಕು ತಗುಲಿ ಚರ್ಮವು ಇನ್ನಷ್ಟು ಹಾನಿಗೊಳಗಾಗುತ್ತದೆ. ಕೆಲವೊಮ್ಮೆ ಹಿಮ್ಮಡಿಗಳ ಬಿರುಕುಗಳಿಂದ ರಕ್ತಸ್ರಾವವಾಗಲು ಪ್ರಾರಂಭಿಸುತ್ತದೆ. ಅಂತಹ ಸಮಯದಲ್ಲಿ ನಡೆಯುವುದು ಸಹ ಕಷ್ಟಕರವಾಗುತ್ತದೆ.
25
ರಾತ್ರೋ ರಾತ್ರಿ ಗುಣವಾಗುತ್ತೆ
ನೀವು ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಸುಲಭ ಪರಿಹಾರಗಳನ್ನು ಪ್ರಯತ್ನಿಸಬಹುದು. ಈ ಕೆಳಗೆ ನೀಡಿರುವ ಪರಿಹಾರದಿಂದ ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಯ ಸಮಸ್ಯೆ ರಾತ್ರೋ ರಾತ್ರಿ ಗುಣವಾಗುತ್ತದೆ. ಪಾದಗಳ ಚರ್ಮವು ಸಹ ಇದರಿಂದ ತುಂಬಾ ಮೃದುವಾಗುತ್ತದೆ.
35
ಬಿರುಕು ಬಿಟ್ಟ ಹಿಮ್ಮಡಿಗೆ ಮನೆಮದ್ದು
ಮೊದಲಿಗೆ 2-3 ಚಮಚ ಸಾಸಿವೆ ಎಣ್ಣೆ ತೆಗೆದುಕೊಳ್ಳಿ. ಎಣ್ಣೆ ಸ್ವಲ್ಪ ಬೆಚ್ಚಗಾದಾಗ 1 ಚಮಚ ವ್ಯಾಸಲೀನ್ ಸೇರಿಸಿ. ವ್ಯಾಸಲೀನ್ ಕರಗಿದ ನಂತರ ಸ್ಟೌವ್ ಆಫ್ ಮಾಡಿ. ಈಗ 2 ಇಂಚು ಉದ್ದದ ಮೇಣದಬತ್ತಿಯನ್ನು ಸೇರಿಸಿ. ಮೇಣದಬತ್ತಿಯ ದಾರವನ್ನು ಮಾತ್ರ ತೆಗೆದು, ಎರಡು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಎಣ್ಣೆಯ ಮಿಶ್ರಣಕ್ಕೆ ಸೇರಿಸಿ. ಈ ಮಿಶ್ರಣವನ್ನು ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿ. ಇದು ಕೆಲವೇ ನಿಮಿಷಗಳಲ್ಲಿ ಗಟ್ಟಿಯಾಗಿ, ಕ್ರೀಂ ಸಿದ್ಧವಾಗುತ್ತದೆ.
*ರಾತ್ರಿ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. *ತ್ವರಿತ ಫಲಿತಾಂಶ ಬಯಸಿದರೆ ಬೆಚ್ಚಗಿನ ನೀರು, ಉಪ್ಪು ಮತ್ತು ಶಾಂಪೂ ದ್ರಾವಣದಲ್ಲಿ ನಿಮ್ಮ ಪಾದಗಳನ್ನು ನೆನೆಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಈಗ ಸ್ಕ್ರಬ್ಬರ್‌ನಿಂದ ಡೆಡ್ ಸ್ಕಿನ್ ತೆಗೆದುಹಾಕಿ. *ಈಗ ನಿಮ್ಮ ಪಾದಗಳನ್ನು ತೊಳೆಯಿರಿ. ನಂತರ ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಕ್ಲೀನ್ ಮಾಡಿ. ಮೇಲೆ ತಿಳಿಸಿದ ಕ್ರೀಂ ಅನ್ನು ನಿಮ್ಮ ಹಿಮ್ಮಡಿ ಮತ್ತು ಪಾದಗಳ ಮೇಲೆ ಚೆನ್ನಾಗಿ ಹಚ್ಚಿ. ಈಗ ಸಾಕ್ಸ್ ಧರಿಸಿ ಅಥವಾ ಪಾಲಿಥಿನ್ ಬ್ಯಾಗ್ ನಿಮ್ಮ ಪಾದಗಳ ಸುತ್ತಲೂ ಕಟ್ಟಿಕೊಳ್ಳಿ. ಇದರಿಂದ ಕ್ರೀಂ ನಿಮ್ಮ ಬಟ್ಟೆಗೆ ಅಂಟುವುದಿಲ್ಲ. ಬೆಳಗ್ಗೆ ನಿಮ್ಮ ಹಿಮ್ಮಡಿಗಳು ಸಂಪೂರ್ಣವಾಗಿ ಮೃದುವಾಗಿರುತ್ತವೆ.
55
ಇದನ್ನೇ ಏಕೆ ಬಳಸಬೇಕು?
ಸಾಸಿವೆ ಎಣ್ಣೆಯು ಬಿರುಕು ಬಿಟ್ಟ ಹಿಮ್ಮಡಿ ಗುಣವಾಗಲು ಅತ್ಯುತ್ತಮ ಮನೆಮದ್ದಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಪಾದಗಳನ್ನು ಸೋಂಕಿನಿಂದ ರಕ್ಷಿಸುತ್ತದೆ. ಹಾಗೆಯೇ ಚರ್ಮವನ್ನು ಒಳಗಿನಿಂದ ಬೆಚ್ಚಗಾಗಿಸುತ್ತದೆ ಮತ್ತು ತೇವಗೊಳಿಸುತ್ತದೆ. ಹಿಮ್ಮಡಿಗಳಲ್ಲಿನ ಶುಷ್ಕತೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ.
ಇನ್ನು ಚರ್ಮದಲ್ಲಿನ ತೇವಾಂಶವನ್ನು ಮುಚ್ಚಲು ವ್ಯಾಸಲೀನ್ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ವ್ಯಾಸಲೀನ್ ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಬಿರುಕು ಬಿಟ್ಟ ಹಿಮ್ಮಡಿಗಳು ವೇಗವಾಗಿ ಗುಣವಾಗಲು ಅನುವು ಮಾಡಿಕೊಡುತ್ತದೆ.
ಮತ್ತೆ ಮೇಣವು ಕ್ರೀಂ ಅನ್ನು ಗಟ್ಟಿಯಾಗಿಸುತ್ತದೆ ಮತ್ತು ಹಚ್ಚಲು ಸುಲಭಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.