Toner Pads For Glowing Skin: ಈ ಚಿಕ್ಕ ಟಿಪ್ಸ್‌ಗಳನ್ನು ಪ್ರಯತ್ನಿಸಿ ನೋಡಿ, ಬದಲಾವಣೆಯನ್ನು ಕನ್ನಡಿಯಲ್ಲಿ ಕಾಣಬಹುದು. ಬರ್ತಾ ಬರ್ತಾ ನಿಮ್ಮ ತ್ವಚೆಯ ಸೌಂದರ್ಯದ ಬಗ್ಗೆ ನಿಮಗೇ ಹೆಮ್ಮೆ ಎನಿಸುವುದರಲ್ಲಿ ಅನುಮಾನವೇ ಇಲ್ಲ.
ನಮ್ಮ ಸ್ಕಿನ್ ಕೇರ್ ದಿನಚರಿಯಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ತಿರೋದು ಟೋನರ್ ಪ್ಯಾಡ್ಸ್ (Toner Pads). ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನ ಬ್ಯೂಟಿ ವ್ಲಾಗರ್ ವಿಡಿಯೋಗಳಲ್ಲಿ ಇಂದು ಈ ಪುಟ್ಟ ಪ್ಯಾಡ್‌ಗಳೇ ತುಂಬಿ ತುಳುಕುತ್ತಿವೆ. 'ಗ್ಲಾಸ್ ಸ್ಕಿನ್' ಅನ್ನೋ ಕೊರಿಯನ್ ಸುಂದರಿಯರ ಸೌಂದರ್ಯ ರಹಸ್ಯ ಹುಡುಕುವವರಿಗೆ ಇನ್ನು ಮುಂದೆ ಟೋನರ್ ಬಾಟಲಿಗಳ ಜೊತೆ ಕುಸ್ತಿ ಆಡಬೇಕಾಗಿಲ್ಲ. ಆದರೆ, ವಸ್ತು ಕೈಯಲ್ಲಿದೆ ಅಂದ ಮಾತ್ರಕ್ಕೆ ಪ್ರಯೋಜನವಿಲ್ಲ, ಇದನ್ನು ಬಳಸುವುದರಲ್ಲೂ ಕೆಲವು 'ಟ್ರಿಕ್ಸ್' ಇವೆ. ನಿಮ್ಮ ಚರ್ಮಕ್ಕೆ ಟೋನರ್ ಪ್ಯಾಡನ್ನು ಹೇಗೆಲ್ಲಾ ಬಳಸಬಹುದು ಅಂತ ನೋಡೋಣ.
27
ಎರಡು ಬದಿಗಳಿರುತ್ತವೆ
ಟೋನರ್ ಪ್ಯಾಡ್‌ಗೆ ಸಾಮಾನ್ಯವಾಗಿ ಎರಡು ಬದಿಗಳಿರುತ್ತವೆ. ಒಂದು ಸ್ವಲ್ಪ ಒರಟಾಗಿದ್ದರೆ, ಇನ್ನೊಂದು ನಯವಾಗಿರುತ್ತದೆ. ಮೊದಲು ಒರಟಾದ ಬದಿಯಿಂದ ಮೂಗಿನ ಎರಡೂ ಬದಿ ಮತ್ತು ಗಲ್ಲದ ಮೇಲೆ ನಿಧಾನವಾಗಿ ಒರೆಸಿ. ಇದು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ಮತ್ತು ಬ್ಲ್ಯಾಕ್ ಹೆಡ್ಸ್ ಅನ್ನು ತೆಗೆದು ಹಾಕುತ್ತದೆ. ನಂತರ ನಯವಾದ ಬದಿಯಿಂದ ಮುಖವನ್ನು ಮತ್ತೊಮ್ಮೆ ಸಾವಾಕಾಶವಾಗಿ ಒರೆಸಿಕೊಳ್ಳಬೇಕು.
37
ಮೇಕಪ್ ಮಾಡುವ ಮೊದಲು ಮಾಡಿ
ಶೀಟ್ ಮಾಸ್ಕ್ ಹಾಕಲು ಸಮಯವಿಲ್ಲದಿದ್ದರೆ, ಟೋನರ್ ಪ್ಯಾಡ್‌ಗಳು ನಿಮಗೆ ಸಹಕರಿಸುತ್ತದೆ. ಮುಖವನ್ನು ಸ್ವಚ್ಛಗೊಳಿಸಿದ ನಂತರ, ಎರಡು ಪ್ಯಾಡ್‌ಗಳನ್ನು ತೆಗೆದುಕೊಂಡು ಕೆನ್ನೆಗಳ ಮೇಲೆ ಮತ್ತು ಒಂದನ್ನು ಹಣೆಯ ಮೇಲಿಡಿ. ಕೇವಲ 5 ನಿಮಿಷ ಸಾಕು! ಚರ್ಮ ಫ್ರೆಶ್ ಆಗುತ್ತದೆ ಮತ್ತು ತೇವಾಂಶ ಚರ್ಮದೊಳಗೆ ಇಳಿಯುತ್ತದೆ. ಮೇಕಪ್ ಮಾಡುವ ಮೊದಲು ಇದನ್ನು ಮಾಡಿದರೆ ಮುಖಕ್ಕೆ ವಿಶೇಷ ಹೊಳಪು ಸಿಗೋದು ಪಕ್ಕಾ.
ಅನೇಕರು ಮಾಡುವ ತಪ್ಪೆಂದರೆ ಟೋನರ್ ಪ್ಯಾಡಿನಿಂದ ಮುಖವನ್ನು ಬಲವಾಗಿ ಉಜ್ಜುವುದು. ಇದು ಚರ್ಮದ ಮೇಲೆ ಸಣ್ಣ ಗೀರುಗಳನ್ನು ಉಂಟುಮಾಡಬಹುದು. ತುಂಬಾ ಮೃದುವಾಗಿ, ಒಳಗಿನಿಂದ ಹೊರಕ್ಕೆಂಬಂತೆ ಮಾತ್ರ ಪ್ಯಾಡ್‌ಗಳನ್ನು ಮೂವ್ ಮಾಡಿ.
57
ಬೆರಳುಗಳಿಂದ ನಿಧಾನವಾಗಿ ತಟ್ಟಿ
ಮುಖವನ್ನು ಸುಂದರವಾಗಿಸಿ ಕುತ್ತಿಗೆಯನ್ನು ನಿರ್ಲಕ್ಷಿಸುವುದು ಸರಿ ಅಲ್ಲವಲ್ಲ. ಮುಖವನ್ನು ಒರೆಸಿದ ನಂತರ, ಪ್ಯಾಡ್‌ನಲ್ಲಿ ಉಳಿದಿರುವ ಟೋನರ್ ಬಳಸಿ ಕುತ್ತಿಗೆಯನ್ನೂ ಒರೆಸಲು ಮರೆಯಬೇಡಿ. ಪ್ಯಾಡ್‌ನಲ್ಲಿರುವ ಟೋನರ್ ಸಂಪೂರ್ಣವಾಗಿ ಚರ್ಮಕ್ಕೆ ಹೀರಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಬೆರಳುಗಳಿಂದ ನಿಧಾನವಾಗಿ ತಟ್ಟುವುದು ಕೂಡ ಒಳ್ಳೆಯದು.
67
ಆಯ್ಕೆ ಮಾಡುವಾಗ ಗಮನಿಸಿ
ಮೊಡವೆ ಇರುವವರಿಗೆ: ಸ್ಯಾಲಿಸಿಲಿಕ್ ಆ್ಯಸಿಡ್ ಇರುವ ಪ್ಯಾಡ್ ಬೆಸ್ಟ್. ಒಣ ಚರ್ಮದವರಿಗೆ: ಹೈಲುರಾನಿಕ್ ಆ್ಯಸಿಡ್ ಇರುವಂಥವು. ಕಳೆಗುಂದಿದ ಚರ್ಮಕ್ಕೆ: ವಿಟಮಿನ್ ಸಿ ಪ್ಯಾಡ್‌ಗಳು.
77
ಮುಚ್ಚಳವನ್ನು ಸರಿಯಾಗಿ ಮುಚ್ಚಿ
ಟೋನರ್ ಪ್ಯಾಡ್‌ಗಳನ್ನು ಬಳಸಿದ ನಂತರ ಅದರ ಮುಚ್ಚಳವನ್ನು ಸರಿಯಾಗಿ ಮುಚ್ಚಬೇಕು. ಸ್ವಲ್ಪ ತೆರೆದಿದ್ದರೂ ಪ್ಯಾಡ್‌ನಲ್ಲಿರುವ ಟೋನರ್ ಒಣಗಿ ಹೋಗುವ ಸಾಧ್ಯತೆ ಇದೆ. ಈ ಚಿಕ್ಕ ಟಿಪ್ಸ್‌ಗಳನ್ನು ಪ್ರಯತ್ನಿಸಿ ನೋಡಿ, ಬದಲಾವಣೆಯನ್ನು ಕನ್ನಡಿಯಲ್ಲಿ ಕಾಣಬಹುದು. ಬರ್ತಾ ಬರ್ತಾ ನಿಮ್ಮ ತ್ವಚೆಯ ಸೌಂದರ್ಯದ ಬಗ್ಗೆ ನಿಮಗೇ ಹೆಮ್ಮೆ ಎನಿಸುವುದರಲ್ಲಿ ಅನುಮಾನವೇ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.