ಪಿಂಕ್ ಸ್ಯಾರಿಯಲ್ಲಿ ಮಿಂಚಿದ ನಮ್ರತಾ ಗೌಡ, ಸ್ನೇಹಿತ್ ಜೊತೆ ಇದ್ದ ದಿನ ನೆನಪಿಸಿಕೊಳ್ಳಿ ಎಂದ ಫ್ಯಾನ್ಸ್‌!

First Published | Mar 13, 2024, 12:55 PM IST

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪಿಂಕ್‌ ಸೀರೆಯುಟ್ಟ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಸ್ನೇಹಿತ್‌, ಕಾರ್ತಿಕ್ ಹೆಸರು ಕಾಮೆಂಟ್‌ ಮಾಡಿ ಕಾಲೆಳೆದಿದ್ದಾರೆ.

ಕಿರುತೆರೆ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪಿಂಕ್‌ ಸೀರೆಯುಟ್ಟ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಜರಿಯಂಚಿನ ಪಿಂಕ್ ಸೀರೆಯುಟ್ಟು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಪರ್ಲ್‌ ಬ್ರೇಸ್‌ಲೆಟ್ ಧರಿಸಿದ್ದಾರೆ. ನಮ್ರತಾ, ಟ್ರೆಡಿಶನಲ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Latest Videos


ನಮ್ರತಾ, ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್‌, ಟ್ರೆಡಿಶನಲ್ ಲುಕ್‌ನಲ್ಲಿ ತಮ್ಮ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚಿಗೆ ಶೇರ್ ಮಾಡಿರೋ ಈ ಪಿಂಕ್‌ ಸ್ಯಾರಿ ಫೋಟೋಸ್‌ಗೆ ನೆಟ್ಟಿಗರು ವಾವ್ ಅಂದಿದ್ದಾರೆ.

ಬ್ಯೂಟಿಫುಲ್‌, ಕ್ಯೂಟ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು, 'ನಿಮಗೆ ಆತ್ಮಸಾಕ್ಶಿ ಇದ್ದರೆ ಸ್ನೇಹಿತ್ ಅವರ ಜೊತೆ ಇದ್ದ ದಿನಗಳನ್ನು ನೆನಪಿಸಿಕೊಳ್ಳಿ ಒಂದೆ ಒಂದು ಹನಿ ಕಣ್ಣೀರು ಬಂದ್ರು ಕೂಡ ನಿಮ್ಮ ಸ್ನೇಹ ಪವಿತ್ರವಾದದ್ದು' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ಸ್ನೇಹಿತ್ ಆಂಡ್ ನಮ್ಮು', ಇನ್ನೊಬ್ಬರು, 'ಕಾರ್ತಿಕ್ ಅಂಡ್ ನಮ್ಮು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ, 'ಕಾರ್ತಿಕ್ ಅಂಡ್‌ ನಮ್ರತಾ ಗುಡ್ ಕಪಲ್‌' ಎಂದಿದ್ದಾನೆ. ಮತ್ತೊಬ್ಬ ಅಭಿಮಾನಿ, 'ಸ್ನೇಹಿತ್ ಅಂಡ್ ನಮ್ರತಾ ಗುಡ್ ಕಪಲ್‌' ಎಂದು ಕಾಮೆಂಟ್ ಮಾಡಿದ್ದಾನೆ. 

ಮತ್ತೆ ಕೆಲ ಅಭಿಮಾನಿಗಳು, ಸೂಪರ್ ಬೆಳದಿಂಗಳ ಬಾಲೆ ನಮೃತಾ, ಸ್ಯಾರಿ ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತೆ, ನಮ್ರತಾ ನಿಜವಾದ ಮದ್ವೆ ನೋಡ್ಬೇಕು ಗುರು ಹುಡ್ಗ ಪುಣ್ಯ ಮಾಡಿರ್ತಾನೆ ಎಂದು ಹೊಗಳಿದ್ದಾರೆ.

ನಮ್ರತಾ ಗೌಡ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ನಮ್ರತಾ ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರದಲ್ಲಿ ಮಿಂಚಿದ್ದರು. 

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದರು. 

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

click me!