ರಾಯಲ್‌ ಲುಕ್‌ನಲ್ಲಿ ಕಂಗೊಳಿಸಿದ ಅಂಬಾನಿ ಕಿರಿ ಸೊಸೆ, 2024ರ ಬೆಸ್ಟ್ ಬ್ರೈಡ್ ನೀವೇ ಅಂತಿದ್ದಾರೆ ನೆಟ್ಟಿಗರು!

First Published | Mar 10, 2024, 4:34 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿ ವೆಡ್ಡಿಂಗ್ ಈವೆಂಟ್ ಅದ್ಭುತವಾಗಿ ನಡೆದಿದೆ. ದೇಶ-ವಿದೇಶ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಅದರಲ್ಲೂ ರಾಧಿಕಾ ಅದ್ದೂರಿ ಬ್ರೈಡಲ್ ಲುಕ್ ಎಲ್ಲರ ಗಮನ ಸೆಳೆದಿದೆ. ಇಲ್ಲಿವೆ ನೋಡಿ ಪೋಟೋಸ್‌.

ಗುಜರಾತ್‌ನ ಜಾಮ್ನಾನಗರದಲ್ಲಿ ಬಿಲಿಯನೇರ್‌ ಮುಕೇಶ್ ಅಂಬಾನಿ ಕಿರಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭಗಳು ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಿಲಯನ್ಸ್ ಕುಟುಂಬದಲ್ಲಿ ನಡೆದ ವಿವಾಹಪೂರ್ವ ಕಾರ್ಯಕ್ರಮಗಳು ಇಡೀ ದೇಶದ ಗಮನ ಸೆಳೆದಿವೆ. ಸಮಾರಂಭದಲ್ಲಿ ಮದುಮಗಳು ರಾಧಿಕಾ ಮರ್ಚೆಂಟ್ ಧರಿಸಿದ್ದ ಗ್ಲಾಮರಸ್ ಉಡುಪುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

Tap to resize

ಮೂರು ದಿನಗಳ ಕಾಲ ನಡೆದ ಗ್ರ್ಯಾಂಡ್ ಇವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್ ಅತ್ಯಾಕರ್ಷಕ, ಗ್ರ್ಯಾಂಡ್ ಲೆಹಂಗಾ ಡ್ರೆಸ್‌ಗಳನ್ನು ಧರಿಸಿದ್ದರು. ಚಿನ್ನದ ದಾರದಿಂದ ಪೋಣಿಸಿ ತಯಾರಿಸಿದ ದುಪ್ಪಟ್ಟಾ ಸಹ ಇದರಲ್ಲಿ ಸೇರಿತ್ತು.

ರಾಧಿಕಾ ತಮ್ಮ ಪ್ರಿ ವೆಡ್ಡಿಂಗ್ ಇವೆಂಟ್‌ಗೆ ಪಿಂಕ್‌ ಲೆಹಂಗಾ, ದುಪ್ಪಟ್ಟಾ ಹಾಗೂ ಆರೆಂಜ್ ಕಲರ್ ಬ್ಲೌಸ್ ಧರಿಸಿದ್ದರು. ಹೆವಿ ಜ್ಯುವೆಲ್ಲರಿ ಸೆಟ್ ಧರಿಸಿ ಎಲ್ಲರ ಗಮನ ಸೆಳೆದರು.

ರಾಧಿಕಾ-ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಧರಿಸಿದ ಬಟ್ಟೆಗಳು ಒಂದಕ್ಕಿಂತ ಒಂದು ಅತ್ಯಂತ ಸುಂದರವಾಗಿತ್ತು. ಮಾತ್ರವಲ್ಲ ಅಷ್ಟೇ ಬೆಲೆಬಾಳುವಂತಹ  ಬಟ್ಟೆಗಳಾಗಿತ್ತು.

ಖ್ಯಾತ ಫ್ಯಾಷನ್ ಡಿಸೈನರ್‌ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಲೆಹೆಂಗಾದಲ್ಲಿ 300,00 ವಿವಿಧ ಹರಳುಗಳನ್ನು ಬಳಸಲಾಗಿತ್ತು.

ರಾಧಿಕಾ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. ತಮ್ಮ ಸ್ಟೈಲಿಶ್ ಲುಕ್‌ಗಳಿಗಾಗಿಯೇ ಹೆಸರುವಾಸಿಯಾಗಿದ್ದಾರೆ. ಎಲ್ಲಾ ಸಮಾರಂಭಗಳಲ್ಲಿ ಅವರು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.

ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ. ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

Latest Videos

click me!