ವಜ್ರ, ವೈಢೂರ್ಯವನ್ನೇ ಹೊದಿಸಿದ ಲೆಹಂಗಾ, ಐಷಾರಾಮಿತನದಲ್ಲಿ ತಾಯಿಯನ್ನೇ ಮೀರಿಸ್ತಾಳಾ ಮಗಳು ಇಶಾ ಅಂಬಾನಿ!

First Published | Mar 10, 2024, 2:50 PM IST

ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಗ್ರ್ಯಾಂಡ್ ವೆಡ್ಡಿಂಗ್‌ನಲ್ಲಿ ಅಂಬಾನಿ ಮಹಿಳೆಯರು ಧರಿಸಿದ ಸೀರೆ, ಆಭರಣ ಹೆಚ್ಚು ಸುದ್ದಿಯಾಗುತ್ತಿದೆ. ಅದರಲ್ಲೂ ಇಶಾ ಅಂಬಾನಿಯ ರಾಯಲ್‌ ಲುಕ್ ಎಲ್ಲರ ಗಮನ ಸೆಳೆದಿದೆ. ವಜ್ರ-ಮುತ್ತು ರತ್ನಗಳನ್ನೇ ಹೊಂದಿಸಿದ ಗ್ರ್ಯಾಂಡ್ ಲೆಹಂಗಾವನ್ನು ಇಶಾ ಅಂಬಾನಿ ಧರಿಸಿದ್ದರು.

ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಗ್ರ್ಯಾಂಡ್ ವೆಡ್ಡಿಂಗ್‌ನಲ್ಲಿ ಅಂಬಾನಿ ಮಹಿಳೆಯರು ಧರಿಸಿದ ಸೀರೆ, ಆಭರಣ ಹೆಚ್ಚು ಸುದ್ದಿಯಾಗುತ್ತಿದೆ.

ಅದರಲ್ಲೂ ಇಶಾ ಅಂಬಾನಿಯ ರಾಯಲ್‌ ಲುಕ್ ಎಲ್ಲರ ಗಮನ ಸೆಳೆದಿದೆ. ವಜ್ರ-ಮುತ್ತು ರತ್ನಗಳನ್ನೇ ಹೊಂದಿಸಿದ ಗ್ರ್ಯಾಂಡ್ ಲೆಹಂಗಾವನ್ನು ಇಶಾ ಅಂಬಾನಿ ಧರಿಸಿದ್ದರು.ಅನಂತ್‌-ರಾಧಿಕಾ ಬಾಲಿವುಡ್ ಫೆಸ್ಟಿವಿಟಿಯಲ್ಲಿ ಇಶಾ ಅಂಬಾನಿ ಗ್ರ್ಯಾಂಡ್ ಆಗಿ ಕಾಣಿಸಿಕೊಂಡರು.

Tap to resize

ಗೋಲ್ಡನ್ ಕಲರ್ ಲೆಹಂಗಾ ಹಾಗೂ ಫುಲ್‌ ವರ್ಕ್ ಮಾಡಿದ ಬ್ಲೌಸ್ ಧರಿಸಿ ಇಶಾ ಅಂಬಾನಿ ಮಿಂಚಿದರು. ಸಂಪೂರ್ಣ ವಜ್ರ, ರತ್ನಗಳನ್ನು ಹೊದಿಸಿದ ಡ್ರೆಸ್‌ನ;್;ಇ ರಾಣಿಯಂತೆ ಕಂಗೊಳಿಸಿತ್ತಿದ್ದರು.

ಇಶಾ ಅಂಬಾನಿ, ಫ್ಯಾಶನ್ ಐಕಾನ್ ಆಗಿದ್ದು, ತಮ್ಮ ಅದ್ಭುತ ಸ್ಟೈಲಿಶ್ ಲುಕ್‌ನಿಂದ ಎಲ್ಲರನ್ನು ಸೆಳೆಯುವ ಅವಕಾಶವನ್ನು ಯಾವತ್ತೂ ಬಿಡುವುದಿಲ್ಲ. ಅದೇ ರೀತಿ ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಇಶಾ, ರೆಡ್ ಮತ್ತು ಗೋಲ್ಡನ್ ಕಾಂಬಿನೇಶನ್‌ನ ಗ್ರ್ಯಾಂಡ್ ಲೆಹಂಗಾ ಧರಿಸಿದ್ದರು.

ಇಶಾ ಅಂಬಾನಿ ಧರಿಸಿದ್ದ ಲೆಹಂಗಾವನ್ನು ಸಂಪೂರ್ಣವಾಗಿ ಕಸೂತಿ ಮಾಡಲಾಗಿತ್ತು. ಕೆಂಪು, ಹಸಿರು ಬಣ್ಣದ ಬೀಡ್ಸ್‌ಗಳಿಂದ ಅಲಂಕರಿಸಲಾಗಿತ್ತು.

ಇಶಾ ಅಂಬಾನಿ, ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಸಿದ್ಧಪಡಿಸಿದ ಕೆಂಪು ಬಣ್ಣದ ಕಸೂತಿ ಲೆಹೆಂಗಾವನ್ನು ಧರಿಸಿದ್ದರು. ಗ್ರ್ಯಾಂಡ್ ಲೆಹಂಗಾದ ಬ್ಲೌಸ್ ಸಂಪೂರ್ಣ ಬೀಡ್ಸ್‌ ವರ್ಕ್‌ನಿಂದ ಕೂಡಿದ್ದು ಚಿನ್ನ, ವಜ್ರದ ಕೈ ಕುಸುರಿಯಿಂದ ಸಖತ್‌ ಗ್ರ್ಯಾಂಡ್ ಆಗಿ ಕಾಣುತ್ತಿತ್ತು.

ಲೆಹೆಂಗಾವು ಕಸೂತಿ ಹೂವಿನ ಮೋಟಿಫ್‌ಗಳನ್ನು ಒಳಗೊಂಡ ಪ್ಯಾನಲ್ ವರ್ಕ್‌ ಒಳಗೊಂಡಿತ್ತು. ಲೆಹೆಂಗಾವನ್ನು ಕಸೂತಿ ದುಪಟ್ಟಾದೊಂದಿಗೆ ಸಂಯೋಜಿಸಲಾಗಿತ್ತು.

ಇಶಾ ಅಂಬಾನಿ ತಮ್ಮ ಗ್ರ್ಯಾಂಡ್‌ ಲೆಹೆಂಗಾದೊಂದಿಗೆ ಬಹು-ಪದರದ ವಜ್ರದ ನೆಕ್ಲೇಸ್‌ನ್ನು ಆಯ್ಕೆ ಮಾಡಿಕೊಂಡರು. ಹೊಂದಾಣಿಕೆಯ ಕಿವಿಯೋಲೆಗಳು, ಕಡಾ ಮತ್ತು ಬ್ರೇಸ್‌ಲೆಟ್‌ ಅವಳ ರಾಯಲ್ ನೋಟವನ್ನು ಅದ್ಭುತವಾಗಿ ಕಾಣುವಂತೆ ಮಾಡಿತು.

ಅನಂತ್ ಮತ್ತು ರಾಧಿಕಾ ಅವರ ಹಸ್ತಾಕ್ಷರ ಸಮಾರಂಭಕ್ಕೆ ಇಶಾ ಅಂಬಾನಿ ರಾಯಲ್ ಲುಕ್ ಆಯ್ಕೆ ಮಾಡಿಕೊಂಡರು. ಸದ್ಯ ಅಂಬಾನಿ ಮಗಳ ಈ ರಾಯಲ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Latest Videos

click me!