ಹೆಸರಾಂತ ಫ್ಯಾಷನ್‌ ಶೋನಲ್ಲಿ ರಾಶಿ ರಾಶಿ ಕಾಂಡೋಮ್‌ ಪ್ಯಾಕೆಟ್ಸ್ ಯಾಕ್ ಬಂತು?

Published : Feb 24, 2023, 03:19 PM ISTUpdated : Feb 24, 2023, 03:24 PM IST

ಸೆಕ್ಸ್ ಹಾಗೂ ಕಾಂಡೋಮ್ ಎರಡರ ಬಗ್ಗೆಯೂ ಜನರಿಗೆ ತಿಳಿದಿದೆ. ಆದರೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಮಾತ್ರ ಹೆಚ್ಚಿನವರು ಗಮನ ಹರಿಸುವುದಿಲ್ಲ. ಹೀಗಿರುವಾಗ ಇಲ್ಲೊಂದು ಫ್ಯಾಷನ್ ವೀಕ್ ಕಾಂಡೋಮ್ ಬಾಕ್ಸ್‌ಗಳ ಮೇಲೆಯೇ ರ್ಯಾಂಪ್ ವಾಕ್ ಮಾಡಿ ಜಾಗೃತಿ ಮೂಡಿಸಲು ಯತ್ನಿಸಿದ.

PREV
17
ಹೆಸರಾಂತ ಫ್ಯಾಷನ್‌ ಶೋನಲ್ಲಿ ರಾಶಿ ರಾಶಿ ಕಾಂಡೋಮ್‌ ಪ್ಯಾಕೆಟ್ಸ್ ಯಾಕ್ ಬಂತು?

ಐಷಾರಾಮಿ ಬಟ್ಟೆ ಬ್ರಾಂಡ್ ಡೀಸೆಲ್‌ನ ಮಿಲನ್ ಫ್ಯಾಷನ್ ವೀಕ್‌ ಈ ಬಾರಿ ತನ್ನ ವಿಶಿಷ್ಟತೆಯಿಂದಲೇ ಎಲ್ಲರ ಗಮನ ಸೆಳೆದಿದೆ. ಈ ಬಾರಿಯ ಫ್ಯಾಷನ್‌ ವೀಕ್‌ನಲ್ಲಿ 2 ಲಕ್ಷ ಕಾಂಡೋಮ್ ಬಾಕ್ಸ್‌ಗಳ ನಡುವೆ ರೂಪದರ್ಶಿಗಳು ನಡೆದಿದ್ದಾರೆ. ಅದರ ಫೋಟೋಸ್ ಮತ್ತು ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 

27

ಮಿಲನ್ ಫ್ಯಾಶನ್ ವೀಕ್‌ನಲ್ಲಿ ಮಾಡೆಲ್‌ಗಳು ರನ್‌ವೇ ಶೋನಲ್ಲಿ ಎರಡು ಲಕ್ಷ ಕಾಂಡೋಮ್ ಬಾಕ್ಸ್‌ಗಳ ಮೇಲೆ ಮತ್ತು ಸುತ್ತಲೂ ನಡೆದರು. ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸಲು ಮತ್ತು ಡ್ಯುರೆಕ್ಸ್‌ನೊಂದಿಗೆ ಡೀಸೆಲ್‌ನ ಮುಂಬರುವ ಕ್ಯಾಪ್ಸುಲ್ ಸಂಗ್ರಹವನ್ನು ಉತ್ತೇಜಿಸಲು ಈ ಕಾಂಡೋಮ್‌ ಥೀಮ್ ಆಧಾರಿತ ಫ್ಯಾಷನ್ ಶೋ ನಡೆಸಲಾಯಿತು. ಕ್ರಿಸ್ಜ್‌ಟೋಫ್ ಜೆ ಲುಕಾಸಿಕ್ ಅವರು ಕಾಂಡೋಮ್‌ ಬಾಕ್ಸ್‌ನ್ನು ಡಿಸೈನ್ ಮಾಡಿದ್ದರು.

37

DieselFW23 ರನ್‌ವೇ ಶೋ ಸೆಟ್  ಮತ್ತು durex ಜೊತೆಗಿನ ಪಾಲುದಾರಿಕೆಯ ಭಾಗವಾಗಿ 200,000 ಕಾಂಡೋಮ್ ಬಾಕ್ಸ್‌ಗಳನ್ನು ಜೋಡಿಸಿಡಲಾಯಿತು. ಡೀಸೆಲ್ ಸಂಸ್ಥೆ ವರದಿ ಮಾಡಿದಂತೆ ಫ್ಯಾಶನ್ ಶೋದ ಪ್ರಮುಖ ಅಂಶವೆಂದರೆ ಸುರಕ್ಷಿತ ಲೈಂಗಿಕತೆ ಮತ್ತು ಬ್ರ್ಯಾಂಡ್‌ನ ಹೊಸ ಆವೃತ್ತಿ ಎರಡನ್ನೂ ಹೆಚ್ಚಿಸುವ ಪ್ರಯತ್ನವಾಗಿತ್ತು. 'ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ಡೀಸೆಲ್ ಮಳಿಗೆಗಳಲ್ಲಿ 300,000 ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು' ಎಂದು ಡೀಸೆಲ್ ಸಂಸ್ಥೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದೆ. 

47

ಅಭಿಯಾನದ ಭಾಗವಾಗಿ, ಡೀಸೆಲ್ ಏಪ್ರಿಲ್‌ನಲ್ಲಿ ವಿಶ್ವದಾದ್ಯಂತದ ಮಳಿಗೆಗಳಲ್ಲಿ 3 ಲಕ್ಷ ಕಾಂಡೋಮ್‌ಗಳನ್ನು ನೀಡಲು ಯೋಜನೆ ರೂಪಿಸಿದೆ. 'ನಾವು ಡೀಸೆಲ್‌ನಲ್ಲಿ ಆಡಲು ಇಷ್ಟಪಡುತ್ತೇವೆ ಮತ್ತು ನಾವು ಅದರ ಬಗ್ಗೆ ಗಂಭೀರವಾಗಿರುತ್ತೇವೆ. ಆನಂದಿಸಿ, ಪರಸ್ಪರ ಗೌರವಿಸಿ, ಸುರಕ್ಷಿತವಾಗಿರಿ' ಎಂದು ಕ್ರಿಯೇಟಿವ್ ಡೈರೆಕ್ಟರ್ ತಿಳಿಸಿದ್ದಾರೆ.

57

ಕಾಂಡೋಮ್ ಬಾಕ್ಸ್‌ಗಳನ್ನು ಜೋಡಿಸಿಟ್ಟಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮಿಲನ್ ಫ್ಯಾಶನ್ ವೀಕ್ ಫೆಬ್ರವರಿ 21ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 27 ರಂದು ಮುಕ್ತಾಯಗೊಳ್ಳಲಿದೆ. ಹಲವಾರು ಬಳಕೆದಾರರು ಈ ಡಿಫರೆಂಟ್ ಫ್ಯಾಷನ್ ಶೋಗೆ ಮೆಚ್ಚುಗೆ ಸೂಚಿಸಿದ್ದಾರೆ. 

67

ಇನ್ನು ಕೆಲವರು ದಯವಿಟ್ಟು ಇದನ್ನು ಕ್ಲಿನಿಕ್‌ಗಳಿಗೆ ನೀಡಿರಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದನ್ನು ಸರಿಯಾಗಿ ವಿತರಿಸದಿದ್ದರೆ ಇದು ತ್ಯಾಜ್ಯವಾಗಿ ಬದಲಾಗಬಹುದು ಎಂದು ಮತ್ತೆ ಹಲವರು ಕಾಮೆಂಟ್ ಮಾಡಿದ್ದಾರೆ.

77

ಡೀಸೆಲ್ ವಿವರಿಸಿದ ಕಾಂಡೋಮ್ "ಮೌಂಟೇನ್" ಫ್ಯಾಶನ್ ಶೋನ ಹೈಲೈಟ್ ಆಗಿತ್ತು, ಇದು ಬ್ರ್ಯಾಂಡ್‌ನ ಹೊಸ ಸಂಗ್ರಹ ಮತ್ತು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಕ್ರಮವಾಗಿತ್ತು.ಅಭಿಯಾನದ ಭಾಗವಾಗಿ, ಡೀಸೆಲ್ ಬ್ರಾಂಡ್ ಏಪ್ರಿಲ್‌ನಲ್ಲಿ ಪ್ರಪಂಚದಾದ್ಯಂತದ ಅಂಗಡಿಗಳಲ್ಲಿ ಕಾಂಡೋಮ್‌ಗಳ 3,00,000 ಬಾಕ್ಸ್‌ಗಳನ್ನು ನೀಡಲು ಯೋಜಿಸಿದೆ.

Read more Photos on
click me!

Recommended Stories