ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿ ದಿನ ಒಂದಲ್ಲ ಒಂದು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿಯ ಮೈಮಾಟಕ್ಕೆ ಅಪಾರ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ಇತ್ತ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ಉರ್ಫಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆದರೆ ಇದ್ಯಾವುದರ ಕುರಿತು ತಲೆಕೆಡಿಸಿಕೊಳ್ಳದ ಉರ್ಫಿ ಜಾವೇದ್, ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.